ಬೀದರ್: ದೆಹಲಿಯ ಜಮಾತ್ಗೆ ಹೋಗಿ ಬಂದವರಿಂದ ಒಕ್ಕರಿಸಿಕೊಂಡ ಕೊರೊನಾ ಮಹಾಮಾರಿ ಗಡಿ ಜಿಲ್ಲೆ ಬೀದರ್ನಲ್ಲಿ ತನ್ನ ಅಟ್ಟಹಾಸ ಮುಂದುವರೆಸಿದ್ದು, ಇಂದು ಬೆಳಿಗ್ಗೆ ಹನ್ನೊಂದು ಜನರಲ್ಲಿ ಸೊಂಕು ಪತ್ತೆಯಾಗಿದೆ ಹಾಗೂ ಸಂಜೆ ಮತ್ತೊಂದು ಕೇಸ್ ದೃಢಪಟ್ಟು ಒಟ್ಟು ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.
ಬೆಳಿಗ್ಗೆ ಹನ್ನೊಂದು, ಸಂಜೆ ಮತ್ತೊಂದು: ಬೀದರ್ನಲ್ಲಿ 41ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ
ಗಡಿ ಜಿಲ್ಲೆ ಬೀದರ್ನಲ್ಲಿ ಕೊರೊನಾ ವೈರಸ್ ದಿನೇ ದಿನೆ ಉಲ್ಬಣಿಸುತ್ತಿದ್ದು, ಇಂದು ಬೆಳಿಗ್ಗೆ ಹನ್ನೊಂದು ಹಾಗೂ ಸಂಜೆ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಸೇರಿದಂತೆ ಒಟ್ಟು 41 ಪ್ರಕರಣಗಳು ದಾಖಲಾಗಿವೆ.
ನಗರದ ಓಲ್ಡ್ ಸಿಟಿಯ ಗವಾನ್ ಚೌಕ್ ಬಡಾವಣೆಯ ನಿವಾಸಿಗರಲ್ಲಿ ಈ ಸೊಂಕು ಪತ್ತೆಯಾಗಿದ್ದು, ಜಿಲ್ಲಾಡಳಿತ ನಡೆಸುತ್ತಿರುವ ಸಾಮೂಹಿಕ ವೈದ್ಯಕೀಯ ತಪಾಸಣೆ ವೇಳೆಯಲ್ಲಿ ಪಡೆಯಲಾದ ಗಂಟಲು ದ್ರವದ ಪರಿಕ್ಷೆ ನಡೆಸಿ, ಕೊರೊನಾ ಬುಲೆಟಿನ್ನಲ್ಲಿ ಬೆಳಿಗ್ಗೆ 11 ಜನರಲ್ಲಿ ಕೊರೊನಾ ಪತ್ತೆಯಾಗಿರುವ ಮಾಹಿತಿ ನೀಡಲಾಗಿತ್ತು. ಸಂಜೆ ಬುಲೆಟಿನ್ನಲ್ಲಿ ಮತ್ತೋರ್ವ 44 ವಯಸ್ಸಿನ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿಸಲಾಗಿದೆ.
ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 41ಕ್ಕೇರಿದ್ದು, 14 ಜನರು ಗುಣಮುಖರಾಗಿದ್ದಾರೆ. 26 ಜನರು ಬ್ರೀಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ.