ಕರ್ನಾಟಕ

karnataka

ETV Bharat / state

ವಿಪರೀತ ಸೆಕೆ: ಆಸ್ಪತ್ರೆ ಮಹಡಿಯಲ್ಲಿ ಮಲಗಿದ್ದ ನೌಕರ ನಿದ್ರೆಯಲ್ಲೇ ಜಾರಿ ಸಾವು - kannada news

ಸೆಕೆ ತಾಳಲಾರದೆ ರಾತ್ರಿ ಹೆಂಡತಿಯೊಂದಿಗೆ ಆರೋಗ್ಯ ಕೇಂದ್ರದ ಮೇಲೆ ಮಲಗಿದ್ದ ವ್ಯಕಿ, ಗಾಢನಿದ್ರೆಯಲ್ಲಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮಹಡಿ ಮೇಲಿಂದ ಬಿದ್ದು ಡಿ ಗ್ರೂಪ್ ನೌಕರ ಸಾವು

By

Published : May 13, 2019, 7:57 PM IST

ಬಳ್ಳಾರಿ:ಜಿಲ್ಲೆಯ ಕೂಡ್ಲಿಗಿ ತಾಲೂಕಿನ‌ ಬಂಡ್ರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮಹಡಿಯ ಮೇಲಿಂದ ಕೆಳಗಡೆ ಬಿದ್ದ ಪರಿಣಾಮ ಡಿ ಗ್ರೂಪ್ ನೌಕರನೊಬ್ಬ ಮೃತಪಟ್ಟ ಘಟನೆ ನಡೆದಿದೆ.

ಕೂಡ್ಲಿಗಿ ತಾಲೂಕಿನ ಲಕ್ಷ್ಮೀಪುರ ಗ್ರಾಮದ ನಿವಾಸಿ ಎಸ್.ಚಂದ್ರಪ್ಪ (46) ಮೃತ. ಒಣ ಹವೆ ಜಾಸ್ತಿಯಾಗಿದ್ದರಿಂದ ತಣ್ಣನೆಯ ಗಾಳಿಯನ್ನು ಬಯಸಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಮಹಡಿಯ‌ ಮೇಲೆ ಮಲಗಿಕೊಳ್ಳಲು ಪತ್ನಿಯೊಂದಿಗೆ ತೆರಳಿದ್ದಾರೆ. ಮಹಡಿಯ ಮೇಲೆ ಕೊನೆ ಭಾಗ ಮಲಗಿಕೊಂಡಾಗ, ಉರುಳುತ್ತಾ ಕೊನೆಯಂಚಿಗೆ ಬಂದು ಗಾಢನಿದ್ರೆಯಲ್ಲೇ ಕೆಳಗಡೆ ಬಿದ್ದಿದ್ದಾರೆ.

ಪರಿಣಾಮವಾಗಿ ಆತನ‌ ಮುಖ ಹಾಗೂ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತ್ನಿ ಹಾಗೂ ಆರು ತಿಂಗಳ ಮುಗ್ಧ ಕಂದಮ್ಮನನ್ನ ಅವರು ಅಗಲಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ABOUT THE AUTHOR

...view details