ಬಳ್ಳಾರಿ:ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿಗೆ ಪ್ರಧಾನಿ ನರೇಂದ್ರ ಮೋದಿ ಕಚೇರಿಯ ಸಿಬ್ಬಂದಿ ಇಂದು ಭೇಟಿ ನೀಡಿ ವೀಕ್ಷಿಸಿದ್ದಾರೆ.
ಐತಿಹಾಸಿಕ ಪ್ರಸಿದ್ಧ ಹಂಪಿಗೆ ಪ್ರಧಾನಿ ಕಚೇರಿ ಸಿಬ್ಬಂದಿ ಭೇಟಿ..! - ಇತ್ತೀಚಿನ ಬಳ್ಳಾರಿ ಸುದ್ದಿ
ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿಗೆ ಪ್ರಧಾನಿ ನರೇಂದ್ರ ಮೋದಿ ಕಚೇರಿಯ ಸಿಬ್ಬಂದಿ ಇಂದು ಭೇಟಿ ನೀಡಿ ಸ್ಮಾರಕಗಳನ್ನು ವೀಕ್ಷಿಸಿ ಕಣ್ತುಂಬಿಕೊಂಡರು.
ಬಳ್ಳಾರಿ ನಗರದ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಪ್ರಧಾನಿ ಕಚೇರಿಯ ಡಾ ಶ್ರೀಕಾಂತ್ ಪಾಣಿಗ್ರಹಿ ಅವರು, ಹಂಪಿ ವಿರೂಪಾಕ್ಷ ದೇಗುಲ ದರುಶನ ಪಡೆದಿದ್ದಾರೆ. ಇಲ್ಲಿನ ಕಲ್ಲಿನ ತೇರು ಮುಂದೆ ತಮ್ಮ ಬಳಗವನ್ನೆಲ್ಲ ನಿಲ್ಲಿಸಿಕೊಂಡು ಸೆಲ್ಫಿ ಕ್ಲಿಕಿಸಿಕೊಂಡಿದ್ದಾರೆ. ಹಜರಾಮರ, ಮಹಾನವಮಿ ದಿಬ್ಬ, ಲೋಟಸ್ ಮಹಲ್, ಆನೆ ಸಾಲು, ಒಂಟೆ ಸಾಲು, ಸಾವಿವೆಕಾಳು, ಕಡ್ಲೆಕಾಳು ಗಣಪತಿ, ಉಗ್ರ ನರಸಿಂಹ, ಕೃಷ್ಣ ದೇಗುಲ, ಕೃಷ್ಣ ಬಜಾರ್, ಒಂದು ಕಲ್ಲಿನಲ್ಲಿ ಹದಿ ನಾರು ಕಂಬ, ಹೇಮಕೂಟ, ಮಾತಂಗ ಪರ್ವತ ಸೇರಿದಂತೆ ಇತರ ಸ್ಮಾರಕಗಳನ್ನು ವೀಕ್ಷಣೆ ಮಾಡಿ ಕಣ್ತುಂಬಿಕೊಂಡಿದ್ದಾರೆ.
ಬಳ್ಳಾರಿಯ ರುದ್ರಟ್ರಸ್ಟ್ ಬಿ.ಎಂ ರವಿಶಂಕರ ಗುರೂಜಿ, ಸದಸ್ಯೆ ಶೋಭಾರಾಣಿ, ಮಾನವ ಹಕ್ಕುಗಳ ರಾಜ್ಯಾಧ್ಯಕ್ಷ ಮುನಿಕೃಷ್ಣ, ಮೋಹನಗೌಡ ಶಾನವಾಸಪುರ, ಎಸ್.ಪಿ ಮಂಜುನಾಥ, ಸಂತೋಷ ಕುಮಾರ, ಜಗದೀಶ ಯಾದವ, ನಾಗಮಣಿ, ಪಂಪನಗೌಡ ಪಾಟೀಲ್ ಸಿಂಗಡದಿನ್ನಿ, ಪ್ರಕಾಶಗೌಡ ಪಾಟೀಲ್ ಕ್ಯಾದಿಗೇರಿ, ಮಂಜುನಾಥ ಅವರೊಂದಿಗಿದ್ದರು.