ಕರ್ನಾಟಕ

karnataka

ETV Bharat / state

ಹೊಸಪೇಟೆಯಲ್ಲಿ ಸಾರಿಗೆ ಇಲಾಖೆಯ ಸಿಬ್ಬಂದಿಗೆ ಮಾಸ್ಕ್​ - ಸ್ಯಾನಿಟೈಸರ್ ವಿತರಣೆ

ಎಂಎಸ್​ಪಿಎಲ್ ಸಂಸ್ಥೆ ವತಿಯಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್​ಗಳನ್ನು ವಿತರಿಸಲಾಯಿತು.

By

Published : May 28, 2020, 4:32 PM IST

ಮಾಸ್ಕ್​ ಹಾಗೂ ಸ್ಯಾನಿಟೈಸರ್ ವಿತರಿಸಿದ ಎಂಎಸ್​ಪಿಎಲ್ ಸಂಸ್ಥೆ
ಮಾಸ್ಕ್​ ಹಾಗೂ ಸ್ಯಾನಿಟೈಸರ್ ವಿತರಿಸಿದ ಎಂಎಸ್​ಪಿಎಲ್ ಸಂಸ್ಥೆ

ಹೊಸಪೇಟೆ (ಬಳ್ಳಾರಿ) : ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಎಂಎಸ್​ಪಿಎಲ್ ಸಂಸ್ಥೆ ಮಾಸ್ಕ್ ಹಾಗೂ ಸ್ಯಾನಿಟೈಸರ್​ಗಳನ್ನು ವಿತರಿಸಿದೆ ಎಂದು ಹೊಸಪೇಟೆ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಾಕ್​ಡೌನ್ ನಡುವೆಯೂ ಸರ್ಕಾರದ ಆದೇಶದ ಮೇರೆಗೆ ಕೆಲ ನಿರ್ಬಂಧನೆಗಳೊಂದಿಗೆ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಹೊಸಪೇಟೆ ಸಾರಿಗೆ ಇಲಾಖೆಯ ಸಿಬ್ಬಂದಿಗೆ ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಸಿಎಸ್​ಆರ್ ಅಡಿಯಲ್ಲಿ 2000 ಮಾಸ್ಕ್ ಹಾಗೂ 200 ಲೀ. ನಷ್ಟು ಸ್ಯಾನಿಟೈಸರ್​ ಅನ್ನು ಸಂಸ್ಥೆ ನೀಡಿದೆ ಎಂದಿದ್ದಾರೆ.

ABOUT THE AUTHOR

...view details