ಬಳ್ಳಾರಿ: ಸ್ವಿಸ್ ಬ್ಯಾಂಕ್ನಲ್ಲಿ ಭಾರತದ ಶೇ. 54 ರಷ್ಟು ಹಣದ ಪ್ರಮಾಣ ಹೆಚ್ಚಾಗಿದೆ. ಅದರಲ್ಲಿ ಬಿಜೆಪಿ ಹಣ ಇದ್ದುದರಿಂದ ಪ್ರಧಾನಿ ನರೇಂದ್ರ ಮೋದಿ ಕಪ್ಪುಹಣವನ್ನು ಸ್ವಿಸ್ ಬ್ಯಾಂಕ್ನಿಂದ ತಂದಿಲ್ಲವೆಂದು ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಆರೋಪಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಬೇಕೆ ಅಥವಾ ಭಯದ ವಾತಾವರಣ ಬೇಕೆ ಎಂದು ನಾನು ಜನರನ್ನು ಪ್ರಶ್ನಿಸುತ್ತಿರುವುದಾಗಿ ತಿಳಿಸಿದರು.
ಕೇಂದ್ರದಲ್ಲಿ ಹಣಕಾಸು ಸಚಿವ ಇದ್ದರೂ ನೋಟು ರದ್ದು ಮಾಡಿದ್ದು ಮೋದಿ. ದೇಶದ ರಾಜಕೀಯವನ್ನು ಜನರಲ್ಲಿ ಮಟ್ಟ ಹಾಕುವ ಕೆಲಸವನ್ನು ನರೇಂದ್ರ ಮೋದಿ ಮತ್ತು ಬಿಜೆಪಿಯವರು ಮಾಡ್ತಾ ಇದ್ದಾರೆ ಎಂದು ದೂರಿದರು.
ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಜನರನ್ನು ಯಾಮಾರಿಸುವ ಪ್ರಯತ್ನವನ್ನು ನರೇಂದ್ರ ಮೋದಿ ಮಾಡಿದ್ದಾರೆ. ದೇಶದಲ್ಲಿ ನಿರುದ್ಯೋಗ, ಬಡತನ ಸಮಸ್ಯೆಗಳು ತಾಂಡವವಾಡುತ್ತಿವೆ.ಸೈನ್ಯದ ಗೌಪ್ಯತೆ ಕಾಪಾಡಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸ್ಥಳಗಳಲ್ಲಿ ಸೈನ್ಯದ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನಕಲಿ ಮತ್ತು ನಿಜವಾದ ರಾಷ್ಟ್ರಭಕ್ತರ ನಡುವಿನ ಹೋರಾಟ ಇದಾಗಿದೆ. ನಿಜವಾದ ರಾಷ್ಟ್ರಭಕ್ತರು ತಮ್ಮ ಕೆಲಸ ಮಾಡ್ತಾ ಇದ್ದಾರೆ. ಆದ್ರೆ ಬಿಜೆಪಿಯವರು ನಕಲಿ ರಾಷ್ಟ್ರಭಕ್ತರು ಎಂದು ಹನುಮಂತಯ್ಯ ಟೀಕಿಸಿದರು.