ಕರ್ನಾಟಕ

karnataka

ETV Bharat / state

ಬಳ್ಳಾರಿ ಮತದಾರರು ಬಿಜೆಪಿ ತಿರಸ್ಕರಿಸಿದ್ಯಾಕೆ ಅಂತಾ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ: ಸಚಿವ ಆನಂದ್ ಸಿಂಗ್ - ಬಳ್ಳಾರಿ ಮಹಾನಗರ ಪಾಲಿಕೆ

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಇದಾಗಿದೆ. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ವರ್ಚಸ್ಸು ಕೌಂಟ್ ಆಗೋಲ್ಲ. ಆದರೆ, ಬಳ್ಳಾರಿ ನಗರದ ಮತದಾರರು ಬಿಜೆಪಿಯನ್ನ ಯಾಕೆ ತಿರಸ್ಕಾರ ಮಾಡಿದ್ದಾರೆ ಎಂಬುವುದರ ಕುರಿತು ಚರ್ಚೆಯಾಗಬೇಕಿದೆ ಎಂದಿದ್ದಾರೆ.

minister-anand-sing-
ಆನಂದ್ ಸಿಂಗ್

By

Published : Apr 30, 2021, 7:29 PM IST

ಬಳ್ಳಾರಿ:ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಕಂಡಿದೆ. ಆದರೆ, ಬಳ್ಳಾರಿ ನಗರದ ಮತದಾರರು ಬಿಜೆಪಿ ತಿರಸ್ಕರಿಸಿದ್ದು, ಯಾಕೆ ಅಂತಾ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಇದಾಗಿದೆ. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ವರ್ಚಸ್ಸು ಕೌಂಟ್ ಆಗೋಲ್ಲ. ಆದರೆ, ಬಳ್ಳಾರಿ ನಗರದ ಮತದಾರರು ಬಿಜೆಪಿಯನ್ನ ಯಾಕೆ ತಿರಸ್ಕಾರ ಮಾಡಿದ್ದಾರೆ ಎಂಬುವುದರ ಕುರಿತು ಚರ್ಚೆಯಾಗಬೇಕಿದೆ. ಈ ಸೋಲು ಬಿಜೆಪಿ ಪಕ್ಷದ್ದು. ಹೀಗಾಗಿ ಇದಕ್ಕೆ ಯಾರೂ ಕೂಡ ಹೊಣೆಗಾರರಲ್ಲ ಎಂದಿದ್ದಾರೆ.

ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಕುರಿತು ಆನಂದ್ ಸಿಂಗ್ ಪ್ರತಿಕ್ರಿಯೆ

ಜಿಂದಾಲ್ ಸಮೂಹ ಸಂಸ್ಥೆ ಭೂಮಿ ನೀಡಲು ನನ್ನ ವಿರೋಧವಿದೆ

ಜಿಂದಾಲ್ ಸಮೂಹ ಸಂಸ್ಥೆಗೆ ಅಂದಾಜು 3,667 ಎಕರೆ ಭೂಮಿಯನ್ನ ಪರಭಾರೆ ಮಾಡಿರೋದಕ್ಕೆ ನನ್ನ ವಿರೋಧವಿದೆ. ನಾನೂ ಈ ಹಿಂದೆಯೂ ಕೂಡ ಈ ಭೂಮಿ ಪರಭಾರೆ ವಿಚಾರವಾಗಿ ಪ್ರಬಲವಾದ ವಿರೋಧವನ್ನ ವ್ಯಕ್ತಪಡಿಸಿದ್ದೆ. ಆದರೆ ನನ್ನ ಗಮನಕ್ಕೆ ತಾರದೇ ಈ ಸರ್ಕಾರ ಪರಭಾರೆ ಮಾಡಿರೋದಂತೂ ನನಗಂತೂ ಗೊತ್ತಿಲ್ಲ. ಆದರೆ, ನನ್ನ ವಿರೋಧವನ್ನ ಸಚಿವ ಸಂಪುಟದ ಸಭೆಯಲ್ಲಿ ತಿಳಿಸುವೆ ಎಂದರು.

3 ಸಾವಿರ ಕೋಟಿ ರೂ. ಬೆಲೆಬಾಳುವ ಭೂಮಿಯನ್ನ ಅತ್ಯಂತ ಕಡಿಮೆ ದರದಲ್ಲಿ ಪರಭಾರೆ ಮಾಡುವುದು ಸರಿಯಲ್ಲ. ನಾನು ಈ ಹಿಂದೆ ಕೂಡ ವಿರೋಧ ಮಾಡಿದ್ದೆ. ಆಗ ವಿಪಕ್ಷದಲ್ಲಿದ್ದ ಯಡಿಯೂರಪ್ಪ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಈಗ ಅವರೇ ಪರಭಾರೆ ಮಾಡುತ್ತಿರುವುದು ಸರಿಯಲ್ಲ. ರಾಜ್ಯ ಸರ್ಕಾರ ಯಾವ ರೀತಿಯ ತೀರ್ಮಾನ ಕೈಗೊಳ್ಳುತ್ತದೆ ಅಂತಾ ನೋಡಲಿದ್ದೇನೆ. ಸರ್ಕಾರದ ನಿರ್ಧಾರದ ಬಳಿಕ ಮತ್ತೆ ನನ್ನ ತೀರ್ಮಾನ ತಿಳಿಸುವೆ ಎಂದಿದ್ದಾರೆ.

ABOUT THE AUTHOR

...view details