ಕರ್ನಾಟಕ

karnataka

ಗಣಿನಾಡಿನಲ್ಲಿ ಕಾರ ಹುಣ್ಣಿಮೆಯ ಸಂಭ್ರಮ .. ಕರಿಹರಿಬಿಡುವ ಮುಖೇನ ಸಂಭ್ರಮಿಸಿದ ರೈತರು!

By

Published : Jun 17, 2019, 11:34 PM IST

ಜಿಲ್ಲೆಯಾದ್ಯಂತ ಕಾರ ಹುಣ್ಣಿಮೆ ಪ್ರಯುಕ್ತ ಇಂದು ಕರಿಹರಿಬಿಡುವ ಸಂಭ್ರಮವನ್ನು ರೈತರು ಆಚರಿಸಿದರು. ತಮ್ಮ ಮನೆಯ ಜೋಡೆತ್ತುಗಳನ್ನು ತೊಳೆದು ಸಿಂಗಾರ ಮಾಡು ಈ ಕರಿಬಿಡುವ ಸಾಂಪ್ರದಾಯಿಕ ಕಲೆಯಲ್ಲಿ ಭಾರಿಯಾಗಿ ಎಲ್ಲರೊಡನೆ ಖುಷಿ ಹಂಚಿಕೊಂಡರು.

ಗಣಿನಾಡಿನಲಿ ಕಾರ ಹುಣ್ಣಿಮೆಯ ಸಂಭ್ರಮ

ಬಳ್ಳಾರಿ:ಕಾರ ಹುಣ್ಣಿಮೆ ನಿಮಿತ್ತ ಗಣಿನಾಡಿನಲ್ಲಿ ಜೋಡೆತ್ತುಗಳ ಕರಿ ಹರಿಬಿಡುವ ಸಂಭ್ರಮ ಎಲ್ಲೆಡೆ ಜೋರಾಗಿತ್ತು. ಜಿಲ್ಲೆಯ ನಾನಾ ಗ್ರಾಮಗಳಲ್ಲಿ ಜೋಡೆತ್ತುಗಳ ಕರಿಹರಿಬಿಡುವ ಮುಖೇನ ರೈತಾಪಿವರ್ಗವು ಮನೋರಂಜನಾತ್ಮಕವಾಗಿ ತೇಲಾಡಿತು.

ಬಳ್ಳಾರಿ ತಾಲೂಕಿನ ಕಪ್ಪಗಲ್ಲು- ಸಿರಿವಾರ, ಬೇವಿನಹಳ್ಳಿ, ಬಿಸಿಲ ಹಳ್ಳಿ, ಕಕ್ಕಬೇವಿನಹಳ್ಳಿ, ಅಮರಾಪುರ, ಹಗರಿ, ಜೋಳದರಾಶಿ, ಚೇಳ್ಳಗುರ್ಕಿ, ಗೋಡೆಹಾಳು, ಯಾಳ್ಪಿ, ಕಗ್ಗಲ್, ಕಾರೇಕಲ್ಲು, ವೀರಾಪುರ, ಇಬ್ರಾಂಪುರ, ಸಂಗನಕಲ್ಲು, ಮೋಕಾ, ಹೊಸ ಮೋಕಾ, ಮಸೀದಿಪುರ, ದಾಸರ ನಾಗೇನಹಳ್ಳಿ, ಜಾಲಿಹಾಳು, ಹಾವಿನಾಳು, ವೀರಾಪುರ, ಕುರುಗೋಡು, ಅಲ್ಲೀಪುರ, ಕುಡಿತಿನಿ, ಹರಗಿನಡೋಣಿ, ಬ್ಯಾಡರ ಬೆಳಗಲ್ಲು, ಬೆಳಗಲ್ಲು ತಾಂಡಾ, ಜಾನೇಕುಂಟೆ, ಜಾನೇಕುಂಟೆ ತಾಂಡಾ ಸೇರಿದಂತೆ ಇತರೆ ಗ್ರಾಮಗಳಲ್ಲಿ ಈ ದಿನ ಸಂಜೆಯೊತ್ತಿಗೆ ಸಂಭ್ರಮದ ಚಿಲುಮೆ ಹರಡಿಕೊಂಡಿತ್ತು.

ಗಣಿನಾಡಿನಲ್ಲಿ ಕಾರ ಹುಣ್ಣಿಮೆಯ ಸಂಭ್ರಮ

ಆಯಾ ಗ್ರಾಮಗಳ ಗ್ರಾಮಸ್ಥರು ಬೆಳಿಗ್ಗೆ ಕಾರ ಹುಣ್ಣಿಮೆ ಶುರುವಾಗುತ್ತಿದ್ದಂತೆಯೇ ಜೋಡೆತ್ತುಗಳಿಗೆ ಮೈ ತೊಳೆದು, ಬಳಿಕ, ಜೋಡೆತ್ತುಗಳ ಕೊಂಬುಗಳಿಗೆ ವರ್ಣರಂಜಿತವಾದ ಬಣ್ಣದ ಲೇಪನ ಮಾಡಿ, ಕೊಂಬುಗಳಿಗೆ ಬಲೂನ್ ಕಟ್ಟಿ ವಿಶೇಷವಾಗಿ ಅಲಂಕರಿಸಿದ್ದರು. ನಂತರ ಜಿಲ್ಲೆಯ ಆಯಾ ಗ್ರಾಮಗಳಲ್ಲಿ ಗ್ರಾಮದ ಅದಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಿ, ಆ ಬಳಿಕ ಜೋಡೆತ್ತುಗಳ ಕರಿಯನ್ನು ಹರಿಬಿಡಲಾಯಿತು. ಗ್ರಾಮಸ್ಥರೆಲ್ಲರೂ ಎರಡು ಬದಿಯಲ್ಲಿ ನಿಂತುಕೊಂಡು ಕೇಕೆ, ಶಿಳ್ಳೆ ಹೊಡೆಯುತ್ತಾ ಜೋಡೆತ್ತುಗಳ ಕರಿ ಹರಿಬಿಡುವವರನ್ನು ಹುರಿದುಂಬಿಸಿದರು.

ಈ ಕರಿಬಿಡುವ ಸಂಪ್ರದಾಯವೆಂದರೆ ಅಗಸೆ ಕಟ್ಟೆಗೆ ಬೇವಿನ‌ ಸೊಪ್ಪನ್ನು‌ ಕಟ್ಟಲಾಗಿರುತ್ತದೆ. ಯಾರು ತನ್ನ ಜೋಡೆತ್ತುಗಳನ್ನು ಮುಂದೆ ಹೊಡೆದುಕೊಂಡು ಬರುತ್ತಾರೋ ಅವರು ಈ ಬೇವಿನ ಸೊಪ್ಪನ್ನು ಕೀಳಬೇಕು. ಯಾರು ಮೊದಲು ಬಂದು ಸೊಪ್ಪನ್ನು ಕೀಳುತಾರೋ ಅವರೇ ವಿಜೇತರು. ಇನ್ನು ಜೋಡೆತ್ತುಗಳ ಕರಿಬಿಡುವ ಹಬ್ಬವು ಪೂರ್ವಿಕರ ಕಾಲದಿಂದಲೂ ಸಾಂಪ್ರದಾಯಿಕವಾಗಿ ಬಳುವಳಿಯಾಗಿ ಬಂದಿದೆ. ಈ ಹಬ್ಬ ಆಚರಣೆ ಎಂದರೆ ಗ್ರಾಮದ ರೈತರ ಮೊಗದಲ್ಲಿ ಸಂತಸ ತರುತ್ತದೆ ಎಂದು ಸಿರಿವಾರ ಗ್ರಾಮದ ತಿಪ್ಪೇರುದ್ರ ತಿಳಿಸಿದ್ದಾರೆ. ಕಾರ ಹುಣ್ಣಿಮೆ ಬಂದರೆ ಸಾಕು. ಎಲ್ಲರ ಮನೆಯಲ್ಲೂ ಹೋಳಿಗೆ ಸಂಭ್ರಮ ಜೋರಾಗಿರುತ್ತದೆ. ಅದರಂತೆಯೇ ಈ ದಿನವೂ ಕೂಡ ಹೋಳಿಗೆ ನೈವೇದ್ಯ ಗ್ರಾಮೀಣ ಪ್ರದೇಶದಲ್ಲಿ ಜೋರಾಗಿ ಕಂಡು ಬಂದಿದೆ.

ABOUT THE AUTHOR

...view details