ಕರ್ನಾಟಕ

karnataka

ETV Bharat / state

ಗಣಿನಾಡಿನಲ್ಲಿ ಹೆಚ್ಚಿದ ಅಂತರ್ಜಲ ಮಟ್ಟ : ಭೀಕರ ಬರಗಾಲ ಹಿಮ್ಮೆಟ್ಟಿಸಿದ ಮಳೆರಾಯ

ಕಳೆದ 2019-20ನೇ ಸಾಲಿನಲ್ಲಿ ಅಂದಾಜು 392 ಬೋರ್‌ವೆಲ್‌ಗಳನ್ನ ಕೊರೆಯಿಸಲಾಗಿತ್ತು. ಆ ಪೈಕಿ 365 ಬೋರ್‌ವೆಲ್‌ಗಳಲ್ಲಿ 2 ಇಂಚಿಗಿಂತ ಜಾಸ್ತಿ ನೀರೇ ಬಿದ್ದಿದೆ. ಕೇವಲ 27 ಬೋರ್‌ವೆಲ್‌ಗಳಲ್ಲಿ ಒಂದಿಂಚು ಅಥವಾ ಅರ್ಧ ಇಂಚು ನೀರು ಬಿದ್ದಿದೆ. ಎಲ್ಲೂ ಕೂಡ ಬೋರ್‌ವೆಲ್‌ಗಳು ಫೇಲ್ ಆಗಿಲ್ಲ. ಅಂದಾಜು ಶೇ.93ರಷ್ಟು ಬೋರ್‌ವೆಲ್‌ಗಳು ಸಾಫಲ್ಯತೆ ಕಂಡಿವೆ..

By

Published : Jul 16, 2021, 8:43 PM IST

ಗಣಿನಾಡಿನಲ್ಲಿ ಹೆಚ್ಚಿದ ಅಂತರ್ಜಲ ಮಟ್ಟ
ಗಣಿನಾಡಿನಲ್ಲಿ ಹೆಚ್ಚಿದ ಅಂತರ್ಜಲ ಮಟ್ಟ

ಬಳ್ಳಾರಿ :ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕಳೆದ ಎರಡು ವರ್ಷಗಳಿಂದಲೂ ಉತ್ತಮ ಮಳೆಯಾಗಿದೆ. ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕಾರಣವಾಗಿದ್ದಲ್ಲದೇ, ವಿಪರೀತ ಬರಗಾಲವನ್ನೂ ಕೂಡ ಹಿಮ್ಮೆಟಿಸಿದೆ.

ಸತತ ಮೂರು ವರ್ಷಗಳ ಕಾಲ ಸಮರ್ಪಕ ಮಳೆಯಾಗದೇ ಭೀಕರ ಬರಗಾಲ ಎದುರಾಗಿತ್ತು. ಅಂತರ್ಜಲ ಮಟ್ಟವಂತೂ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿತ್ತು.‌ ಬೋರ್‌ವೆಲ್ ಕೊರೆಯಿಸಲ್ಲಕ್ಕೂ ಹಿಂಜರಿಕೆ ಶುರುವಾಗಿದ್ದ ಕಾಲ ಒಂದಿತ್ತು. ಅಂಥಹ ಸಂದಿಗ್ಧ ಕಾಲವನ್ನ ದೂರವಾಗಿಸಲು ಕಳೆದ ಎರಡು ವರ್ಷಗಳಿಂದ ಸುರಿದ ಅತ್ಯುತ್ತಮ ಮಳೆಸಹಕಾರಿಯಾಗಿದೆ. ಇದೀಗ ಅಂತರ್ಜಲಮಟ್ಟ ಕೂಡ ಗಣನೀಯವಾಗಿ ಹೆಚ್ಚಿದೆ.

ಇದರಿಂದ, ರೈತಾಪಿ ವರ್ಗದವರ ಮೊಗದಲಿ ಮಂದಹಾಸದ ಚಿಲುಮೆ ಮೂಡಿದೆ. ಇದಲ್ಲದೇ, ಜಿಲ್ಲಾ ಪಂಚಾಯತ್ ಕೂಡ ಕೃಷಿ ಹೊಂಡ ಸೇರಿದಂತೆ ಜಲಶಕ್ತಿ ಮೂಲಗಳನ್ನ ಸಂರಕ್ಷಿಸಲು ಏನೇನು ಮಾಡಬೇಕು, ಅದನ್ನೆಲ್ಲ ಈಗಾಗಲೇ ಮಾಡಿ ಮುಗಿಸಿದೆ. ಬೋರ್‌ವೆಲ್‌ಗಳನ್ನ ಕೊರೆಯಿಸಲು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಿದ್ದಾರೆ.

ಗಣಿನಾಡಿನಲ್ಲಿ ಹೆಚ್ಚಿದ ಅಂತರ್ಜಲ ಮಟ್ಟ

ಕಳೆದ 2019-20ನೇ ಸಾಲಿನಲ್ಲಿ ಅಂದಾಜು 392 ಬೋರ್‌ವೆಲ್‌ಗಳನ್ನ ಕೊರೆಯಿಸಲಾಗಿತ್ತು. ಆ ಪೈಕಿ 365 ಬೋರ್‌ವೆಲ್‌ಗಳಲ್ಲಿ 2 ಇಂಚಿಗಿಂತ ಜಾಸ್ತಿ ನೀರೇ ಬಿದ್ದಿದೆ. ಕೇವಲ 27 ಬೋರ್‌ವೆಲ್‌ಗಳಲ್ಲಿ ಒಂದಿಂಚು ಅಥವಾ ಅರ್ಧ ಇಂಚು ನೀರು ಬಿದ್ದಿದೆ. ಎಲ್ಲೂ ಕೂಡ ಬೋರ್‌ವೆಲ್‌ಗಳು ಫೇಲ್ ಆಗಿಲ್ಲ. ಅಂದಾಜು ಶೇ.93ರಷ್ಟು ಬೋರ್‌ವೆಲ್‌ಗಳು ಸಾಫಲ್ಯತೆ ಕಂಡಿವೆ.

ಅಲ್ಲದೇ, 2020-21ನೇ ಸಾಲಿನಲ್ಲಿ 151 ಬೋರ್‌ವೆಲ್‌ಗಳನ್ನ ಕೊರೆಯಿಸಲಾಗಿತ್ತು. ಆ ಪೈಕಿ ಸರಿ ಸುಮಾರು 141 ಬೋರ್‌ವೆಲ್‌ಗಳಲ್ಲಿ ನಿರೀಕ್ಷಿತ ಪ್ರಮಾಣದಷ್ಟು ನೀರು ಬಿದ್ದಿದೆ. ಕೇವಲ 10 ಬೋರ್‌ವೆಲ್‌ಗಳಲ್ಲಿ ಸಾಮಾನ್ಯ ರೀತಿಯ ನೀರು ಬಿದ್ದಿದೆ. ಶೇ.93.8ರಷ್ಟು ಬೋರ್‌ವೆಲ್‌ಗಳು ಸಾಫಲ್ಯತೆ ಕಂಡಿವೆ. ವಿಜಯ‌ನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಶೇ.85ರಷ್ಟು ಮಾತ್ರ ಬೋರ್‌ವೆಲ್‌ಗಳು ಸಾಫಲ್ಯತೆ ಕಂಡಿರೋದು ಸ್ವಲ್ಪ ಸಮಾಧಾನಕರ ಸಂಗತಿ.

ಇದನ್ನೂ ಓದಿ : ಡಿಕೆಶಿ ಔತಣ ಕೂಟ.. ಬೆಂಗಳೂರು ಕೈ ಶಾಸಕರ ಸಭೆಗೆ ಸಿದ್ದರಾಮಯ್ಯ ಬಂದರು, ಜಮೀರ್ ಗೈರು..

For All Latest Updates

ABOUT THE AUTHOR

...view details