ಕರ್ನಾಟಕ

karnataka

ETV Bharat / state

ಹೊಸಪೇಟೆ - ದಾವಣಗೆರೆ ಜನರ  ಬಹುದಿನದ ಕನಸು ಈ ರೈಲು: ಅಕ್ಟೋಬರ್ 17ಕ್ಕೆ ಚಾಲನೆ - ಇತ್ತೀಚಿನ ಹೊಸಪೇಟೆ ಸುದ್ದಿ

ಹೊಸಪೇಟೆಯಿಂದ ದಾವಣಗೆರೆಗೆ ಸಂಚರಿಸುವ ರೈಲು ಅಕ್ಟೋಬರ್ 17ನೇ ತಾರೀಖಿನಂದು ಪ್ರಾರಂಭವಾಗಲಿದ್ದು, ಈಗಾಗಲೇ ರೈಲ್ವೆ ಅಧಿಕಾರಿಗಳು ವೇಳಾಪಟ್ಟಿ ಮತ್ತು ದರ ಸಿದ್ಧಪಡಿಸಿದ್ದಾರೆ.

ಹೊಸಪೇಟೆ-ದಾವಣಗೆರೆ ಜನರ ಕನಸಿನ ರೈಲು : ಅಕ್ಟೋಬರ್ 17ರಂದು ರೈಲ್ವೆ ಖಾತೆ ಸಚಿವರಿಂದ ಚಾಲನೆ

By

Published : Oct 15, 2019, 10:55 PM IST

Updated : Oct 16, 2019, 12:28 AM IST

ಹೊಸಪೇಟೆ:ಹೊಸಪೇಟೆಯಿಂದ ದಾವಣಗೆರೆಗೆ ಸಂಚರಿಸುವ ರೈಲಿಗೆ ಅಕ್ಟೋಬರ್ 17 ನೇ ತಾರೀಖಿನಂದು ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿ ಮತ್ತು ಉಪ ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿಸಲಿದ್ದಾರೆ.

ಹೊಸಪೇಟೆ-ದಾವಣಗೆರೆ ಜನರ ಕನಸಿನ ರೈಲು : ಅಕ್ಟೋಬರ್ 17ರಂದು ರೈಲ್ವೆ ಖಾತೆ ಸಚಿವರಿಂದ ಚಾಲನೆ

ಬಳ್ಳಾರಿ ಜಿಲ್ಲೆ ಮತ್ತು ದಾವಣಗೆರೆ ಜಿಲ್ಲೆಯ ಪ್ರಯಾಣಿಕರ ಕನಸು ನನಸಾಗುತ್ತಿದ್ದು, ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರೈಲು ಸಂಚಾರ ಗುರುವಾರ ಪ್ರಾರಂಭವಾಗಲಿದೆ. ಇನ್ನೂ ರೈಲ್ವೆ ಅಧಿಕಾರಿಗಳು ವೇಳಾಪಟ್ಟಿ ಮತ್ತು ದರವನ್ನ ಈಗಾಗಲೇ ಸಿದ್ಧಪಡಿಸಿದ್ದು, ಹೊಸಪೇಟೆ ಕೊಟ್ಟೂರು ಮತ್ತು ದಾವಣಗೆರೆಗೆ ನಿತ್ಯ ಸಂಚಾರ ಮಾಡಲಿದ್ದು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ರೈಲಿನ ವೇಳಾಪಟ್ಟಿ : ಹೊಸಪೇಟೆ ನಗರದಿಂದ ಮಧ್ಯಾಹ್ನ 12:55ಕ್ಕೆ ಹೊರಡುತ್ತದೆ,1:05ಕ್ಕೆ ತುಂಗಭದ್ರಾ ಡ್ಯಾಂ, 1:09ಕ್ಕೆ ವ್ಯಾಸನ ಕೆರೆ, 1:19 ವ್ಯಾಸನ ಕಾಲೋನಿ, 1:35ಕ್ಕೆ ಮರಿಯಮ್ಮನ ಹಳ್ಳಿ, 1:53ಕ್ಕೆ ಪಂಪಾ ಪಟ್ಟಣ, 2:15 ಕ್ಕೆ ಹಗರಿಬೊಮ್ಮನಹಳ್ಳಿ, 3:02 ಕ್ಕೆ ಕೊಟ್ಟೂರು, 3:45 ಕ್ಕೆ ಹರಪನಹಳ್ಳಿ , 6:30ಕ್ಕೆ ಹರಿಹರವನ್ನು ತಲುಪಲಿದೆ.

ರೈಲ್ವೆ ದರಪಟ್ಟಿ: ಹೊಸಪೇಟೆ ನಗರದಿಂದ ದಾವಣಗೆರೆ 155 ಕಿಲೋ‌ಮೀಟರ್​ಗಳಿದ್ದು, ನಗರದ ವ್ಯಾಸ ಕಾಲೋನಿ, ಮರಿಯಮ್ಮನ ಹಳ್ಳಿ, ಪಂಪಾಪಟ್ಟಣ, ಹೆಚ್.ಬಿ ಹಳ್ಳಿಗೆ 10 ರೂ.ಗಳನ್ನು ನಿಗದಿಪಡಿಸಲಾಗಿದೆ. ಇನ್ನೂ, ಮಾಲವಿಗೆ 15ರೂ, ಕೊಟ್ಟೂರಿಗೆ 20‌ರೂ, ಬೆಣ್ಣೆ ಹಳ್ಳ ಹಾಗೂ ಹರಪನಹಳ್ಳಿಗೆ 25ರೂ, ತೆಲಗಿಗೆ 30ರೂ, ದರವನ್ನು ನಿಗದಿ ‌ಮಾಡಲಾಗಿದೆ.

ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಸಚಿವರಾದ ಕೆ.ಎಸ್ .ಈಶ್ವರಪ್ಪ , ಕೊಪ್ಪಳ ‌ ಹಾಗೂ ಬಳ್ಳಾರಿ ಲೋಕಸಭಾ‌ ಸದಸ್ಯರಾದ ಕರಡಿ ಸಂಗಣ್ಣ ಮತ್ತು ದೇವೆಂದ್ರಪ್ಪ ಪಾಲ್ಗೊಳ್ಳಲಿದ್ದಾರೆ.

Last Updated : Oct 16, 2019, 12:28 AM IST

ABOUT THE AUTHOR

...view details