ಕರ್ನಾಟಕ

karnataka

ಎರಡೂವರೆ ವರ್ಷ ಯಡಿಯೂರಪ್ಪ ಅವರೇ ಸರ್ಕಾರ ನಡೆಸುತ್ತಾರೆ: ಸಚಿವ ಆನಂದ್​ ಸಿಂಗ್​​

ಪಾಪಿನಾಯಕನಹಳ್ಳಿಯಲ್ಲಿ ಜಲಸಂಪನ್ಮೂಲ ಇಲಾಖೆ ಹಾಗೂ ಕರ್ನಾಟಕ ನೀರಾವರಿ ನಿಗಮದ ವತಿಯಿಂದ 243.35 ಕೋಟಿ ರೂ. ವೆಚ್ಚದ 22 ಕೆರೆಗಳನ್ನು ತುಂಬಿಸುವ ಬೃಹತ್ ನೀರಾವರಿ ಯೋಜನೆಯ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವರ್ಚುವಲ್ ತಂತ್ರಜ್ಞಾನದ ಮೂಲಕ ಬೆಂಗಳೂರು ಗೃಹ ಕಚೇರಿಯಲ್ಲಿ ನೆರವೇರಿಸಿದರು.

By

Published : Nov 26, 2020, 9:44 PM IST

Published : Nov 26, 2020, 9:44 PM IST

CM  Yadiyurappa
ಬಿ.ಎಸ್.ಯಡಿಯೂರಪ್ಪ

ಹೊಸಪೇಟೆ: ಕೆರೆಗಳನ್ನು ಭರ್ತಿ ಮಾಡುವುದರಿಂದ ಅಂತರ್ಜಲ, ಬೋರ್​ವೆಲ್​ಗಳಿಗೆ ಅನುಕೂಲವಾಗಲಿದೆ. ಅಲ್ಲದೆ ಜಾನುವಾರುಗಳಿಗೆ ಶಾಶ್ವತ ಕುಡಿಯವ ನೀರು ಲಭ್ಯವಾಗಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ತಾಲೂಕಿನ ಪಾಪಿನಾಯಕನಹಳ್ಳಿಯಲ್ಲಿ ಜಲಸಂಪನ್ಮೂಲ ಇಲಾಖೆ ಹಾಗೂ ಕರ್ನಾಟಕ ನೀರಾವರಿ ನಿಗಮದ ವತಿಯಿಂದ 243.35 ಕೋಟಿ ರೂ. ವೆಚ್ಚದ 22 ಕೆರೆಗಳನ್ನು ತುಂಬಿಸುವ ಬೃಹತ್ ನೀರಾವರಿ ಯೋಜನೆಯ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವರ್ಚುವಲ್ ತಂತ್ರಜ್ಞಾನದ ಮೂಲಕ ಬೆಂಗಳೂರು ಗೃಹ ಕಚೇರಿಯಲ್ಲಿ ನೆರವೇರಿಸಿದರು.

ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ನಂತರ ಮಾತನಾಡಿದ ಅವರು, ಕಮಲಾಪುರ ಉಪಚುನಾವಣೆಯಲ್ಲಿ ಕೆರೆ ತುಂಬಿಸುವ ಭರವಸೆಯನ್ನು ನೀಡಲಾಗಿತ್ತು. ಅದೇ ತೆರನಾಗಿ ಇಂದು ಯೋಜನೆಗೆ ಚಾಲನೆ ನೀಡಲಾಗಿದೆ. ಗಣಿ ಬಾಧಿತ ಗ್ರಾಮಗಳಿಗೆ ಸುರಕ್ಷಿತ ನೀರು ಲಭ್ಯವಾಗಲಿದೆ.‌ ಈ ಯೋಜನೆಯಿಂದ 48 ಸಾವಿರ ಜನರಿಗೆ ಅನಕೂಲವಾಗಲಿದೆ ಎಂದರು.

ಇದನ್ನೂ ಓದಿ:ರಾಸಾಯನಿಕ ಸಂಸ್ಕರಣಾ ಘಟಕಗಳ ಕೊರತೆ: ನದಿ ಪಾಲಾಗುತ್ತಿರುವ ಕೈಗಾರಿಕಾ ತ್ಯಾಜ್ಯ..!

ಕೆರೆಗಳನ್ನು ಭರ್ತಿ ಮಾಡುವುದರಿಂದ ಬೋರ್​ವೆಲ್​ಗಳಿಗೆ ಅನುಕೂಲವಾಗಲಿದೆ. ಅಲ್ಲದೆ ಜಾನುವಾರುಗಳಿಗೆ ಶಾಶ್ವತ ಕುಡಿಯವ ನೀರು ಲಭ್ಯವಾಗಲಿದೆ. ಮೂಲ ಸೌಲಭ್ಯಗಳನ್ನು ಒದಗಿಸಲು,‌ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ.‌ ಭಾರತ ಸರ್ಕಾರದಿಂದ ಜನಜೀವನ ಮಿಷನ್ ಅಡಿ ಒಂದು ಲಕ್ಷ ಮನೆಗಳಿಗೆ ನೀರಿನ‌‌ ಸಂಪರ್ಕವನ್ನು ಒದಗಿಸಲಾಗುತ್ತಿದೆ ಎಂದರು.

ಅರಣ್ಯ ಖಾತೆ, ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್

ಹೊಸಪೇಟೆ ತಾಲೂಕಿನ ಗಣಿ ಬಾಧಿತ ಇಂಗಳಿಗಿ, ಕಾಕುಬಾಳು, ಚಿನ್ನಾಪುರ, ನಲ್ಲಾಪುರ, ಗಾಳೆಮ್ಮ ಗುಡಿ, ಭುವನಹಳ್ಳಿ, ಜೋಗ, ಗಾದಿಗನೂರ, ಕಾರಗನೂರ, ವಡ್ಡರಹಳ್ಳಿ, ಧರ್ಮಸಾಗರ, ಕೊಟಗಿಹಾಳ್, ಗುಂಡ್ಲವದ್ದಿಗೇರಿ ಗ್ರಾಮಗಳ 22 ಕೆರೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದರು.

ಅರಣ್ಯ ಖಾತೆ, ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್ ಮಾತನಾಡಿ, ಉಪಚುನಾವಣೆಯಲ್ಲಿ ಮಾತು‌ ನೀಡಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ‌ ಅವರು ನಡೆದುಕೊಂಡಿದ್ದಾರೆ.‌ ರಾಜೀನಾಮೆ ‌ನೀಡದ ಶಾಸಕರಿಗೆ ನೀಡಿದ ಮಾತುಗಳನ್ನು ಅವರು ಉಳಿಸಿಕೊಂಡಿದ್ದಾರೆ ಎಂದರು.

22 ಕೆರೆಗಳನ್ನು ತುಂಬಿಸುವ ಬೃಹತ್ ನೀರಾವರಿ ಯೋಜನೆಯ ಶಂಕುಸ್ಥಾಪನೆ

ಈ ಯೋಜನೆ ರೂಪಿಸಲು ಅಧಿಕಾರಿಗಳು 7 ತಿಂಗಳು ಶ್ರಮ ವಹಿಸಿದ್ದಾರೆ. ಈ ಯೋಜನೆ ಶ್ರೇಯಸ್ಸು ರೈತ ಬಾಂಧವರಿಗೆ ಸಲ್ಲಬೇಕು. ರೈತರು ಸುಮಾರು ವರ್ಷಗಳಿಂದ ಹೋರಾಟ ಮಾಡಿದ್ದಾರೆ. ಸರ್ಕಾರದ ಮಟ್ಟದಲ್ಲಿಯೂ ಗಮನ ಸೆಳೆದಿದ್ದಾರೆ ಎಂದರು.

ಬಿ.ಎಸ್.ಯಡಿಯೂರಪ್ಪ ಅವರು ಇನ್ನೂ ಎರಡೂವರೆ ವರ್ಷ ಸರ್ಕಾರ ಮುನ್ನಡೆಸಲಿದ್ದಾರೆ. ಅವರ ಮಾರ್ಗದರ್ಶದಲ್ಲಿ ಮುಂದೆ ಸರ್ಕಾರ ಮತ್ತೊಮ್ಮೆ ರಚನೆಯಾಗಲಿದೆ. ಕೇಂದ್ರದಲ್ಲಿ ಅಮಿತ್​ ಶಾ ಚಾಣಕ್ಯ ಇದ್ದಂತೆ. ರಾಜ್ಯದಲ್ಲಿ ಯಡಿಯೂರಪ್ಪ ಅವರು ಚಾಣಕ್ಯ ಎಂದು ಬಣ್ಣಿಸಿದರು.

For All Latest Updates

TAGGED:

ABOUT THE AUTHOR

...view details