ಕರ್ನಾಟಕ

karnataka

ETV Bharat / state

ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಮೂರು ದಿನ ಮಳೆ: ಹವಾಮಾನ ಘಟಕ

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಮಳೆ ಮುನ್ಸೂಚನೆ ಇರಲಿದೆ ಎಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕ ಮಾಹಿತಿ ನೀಡಿದೆ.

By

Published : Jun 13, 2021, 2:03 AM IST

chances-of-rain-next-3-days-in-ballari-and-vijayanagara
ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಮೂರು ದಿನ ಮಳೆ

ಬಳ್ಳಾರಿ:ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಮಳೆಯ ಮುನ್ಸೂಚನೆ ಇರಲಿದೆ ಎಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕ ತಿಳಿಸಿದೆ.

ಜೂನ್ 14ರಂದು ಬಳ್ಳಾರಿ ತಾಲೂಕಿನಲ್ಲಿ 1.4, ಹಡಗಲಿ ತಾಲೂಕಿನಲ್ಲಿ 9.1, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 6, ಹರಪನಹಳ್ಳಿ ತಾಲೂಕಿನಲ್ಲಿ 11.9, ಹೊಸಪೇಟೆ ತಾಲೂಕಿನಲ್ಲಿ 2.5, ಕೂಡ್ಲಿಗಿ ತಾಲೂಕಿನಲ್ಲಿ 6.1, ಸಂಡೂರು ತಾಲೂಕಿನಲ್ಲಿ 3.5, ಸಿರುಗುಪ್ಪ ತಾಲೂಕಿನಲ್ಲಿ 2.5 ಮಿಲಿ‌ ಮೀಟರ್​ನಷ್ಟು ಮಳೆಯಾಗಲಿದೆ.

ಜೂ. 15ರಂದು ಬಳ್ಳಾರಿ ತಾಲೂಕಿನಲ್ಲಿ 2.2, ಹಡಗಲಿ ತಾಲೂಕಿನಲ್ಲಿ 8.5, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 7, ಹರಪನಹಳ್ಳಿ ತಾಲೂಕಿನಲ್ಲಿ 9.7, ಹೊಸಪೇಟೆ ತಾಲೂಕಿನಲ್ಲಿ 5.9, ಕೂಡ್ಲಿಗಿ ತಾಲೂಕಿನಲ್ಲಿ 9.9, ಸಂಡೂರು ತಾಲೂಕಿನಲ್ಲಿ 10.9, ಸಿರುಗುಪ್ಪ ತಾಲೂಕಿನಲ್ಲಿ 0 ಮಿಲಿ‌ ಮೀಟರ್ ಮಳೆಯಾಗುವ ಸಾಧ್ಯತೆಯಿದೆ.

ಹವಾಮಾನ ಘಟಕದ ಮಾಹಿತಿ

ಜೂ. 16ರಂದು ಬಳ್ಳಾರಿ ತಾಲೂಕಿನಲ್ಲಿ 0.7, ಹಡಗಲಿ ತಾಲೂಕಿನಲ್ಲಿ 3.9, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 3.4, ಹರಪನಹಳ್ಳಿ ತಾಲೂಕಿನಲ್ಲಿ 7.2, ಹೊಸಪೇಟೆ ತಾಲೂಕಿನಲ್ಲಿ 2.5, ಕೂಡ್ಲಿಗಿ ತಾಲೂಕಿನಲ್ಲಿ 4.2, ಸಂಡೂರು ತಾಲೂಕಿನಲ್ಲಿ 5.3, ಸಿರುಗುಪ್ಪ ತಾಲೂಕಿನಲ್ಲಿ 1.1 ಮಿಲಿ‌ ಮೀಟರ್​ನಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಕೃಷಿ ಹವಾಮಾನ ಇಲಾಖೆ ತಿಳಿಸಿದೆ.

ABOUT THE AUTHOR

...view details