ಬಳ್ಳಾರಿ: ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿದ್ದು, ಬ್ಯಾಂಕ್ನ ಮಹತ್ವದ ದಾಖಲೆಗಳು ಸುಟ್ಟು ಕರಕಲಾಗಿವೆ.
ಆಕಸ್ಮಿಕ ಅಗ್ನಿ ಅವಘಡ: ಬ್ಯಾಂಕ್ನ ಮಹತ್ವದ ದಾಖಲೆಗಳು ಭಸ್ಮ
ಬಳ್ಳಾರಿ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿದ್ದು, ಬ್ಯಾಂಕ್ನ ಮಹತ್ವದ ದಾಖಲೆ ಸೇರಿದಂತೆ ಕಂಪ್ಯೂಟರ್, ಪಿಠೋಪಕರಣಗಳು ಅಗ್ನಿಗೆ ಆಹುತಿಯಾಗಿವೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದಿಂದ ಬೆಂಕಿ ನಂದಿಸಲಾಗಿದೆ.
ಆಕಸ್ಮಿಕ ಬೆಂಕಿ ಅವಘಡದಲ್ಲಿ ಬ್ಯಾಂಕ್ ದಾಖಲೆ ಸುಟ್ಟು ಹೋಗಿರುವುದು
ಜಿಲ್ಲೆಯ ಕೊಟ್ಟೂರು ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕಿನಲಿ ಶಾಖೆಯಲ್ಲಿ ಎರಡೂ ವಿದ್ಯುತ್ ವಾಹಕ ತಂತಿಗಳು ಒಂದಂಕ್ಕೊಂದು ತಗುಲಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಕಂಪ್ಯೂಟರ್ಗಳು ಹಾಗೂ ಪಿಠೋಪಕರಣಗಳು ಸೇರಿ ಇನ್ನಿತರೆ ಮಹತ್ವದ ದಾಖಲೆಗಳು ಸುಟ್ಟು ಹೋಗಿವೆ ಎನ್ನಲಾಗುತ್ತಿದೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯು ಬೆಂಕಿ ನಂದಿಸಿದ್ದು, ಭಾರಿ ಅನಾಹುತ ತಪ್ಪಿದಂತಾಗಿದೆ.
Last Updated : Oct 16, 2019, 2:37 PM IST