ಚಿಕ್ಕೋಡಿ:ನಾವು ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ. ಸುಪ್ರೀಂ ಕೋರ್ಟ್ ಅನರ್ಹರ ಶಾಸಕರ ಕುರಿತು ನೀಡಿದ ಆದೇಶ ನಮ್ಮ ಬಳಿ ಇದೆ. ಸುಪ್ರೀಂ ಕೋರ್ಟ್, ವಿಪ್ ಉಲ್ಲಂಘನೆ ಪ್ರಶ್ನೆ ಬರಲ್ಲ. ನಾವು ಎಲ್ಲಿಯಾದರೂ ಹೋಗಬಹುದು ಎಂದು ಆದೇಶ ನೀಡಿದೆ ಎಂದು ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ: ರಮೇಶ್ ಜಾರಕಿಹೊಳಿ
ಸುಪ್ರೀಂ ಕೋರ್ಟ್ ಅನರ್ಹ ಶಾಸಕರ ಕುರಿತು ನೀಡಿದ ಆದೇಶ ನಮ್ಮ ಬಳಿ ಇದೆ. ಸುಪ್ರೀಂ ಕೋರ್ಟ್, ವಿಪ್ ಉಲ್ಲಂಘನೆ ಪ್ರಶ್ನೆ ಬರಲ್ಲ. ನಾವು ಎಲ್ಲಿಯಾದರೂ ಹೋಗಬಹುದು ಎಂದು ಆದೇಶ ನೀಡಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಇದೇ ಆದೇಶ ಇಟ್ಟುಕೊಂಡು ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ. ಕಳೆದ ಬಾರಿ ಚುನಾವಣೆ ಸಂದರ್ಭದಲ್ಲೇ ಹೋಗಬೇಕಿತ್ತು. ಆದ್ರೆ ಟೈಮ್ ಸಿಕ್ಕಿರಲಿಲ್ಲ. ಹೆಚ್.ವಿಶ್ವನಾಥ್ ಅವರಿಗೆ ಒಳ್ಳೆಯದು ಆಗಲಿದೆ. ವಿಶ್ವನಾಥ್ ಜೊತೆಗೆ ನಾವು ಇದ್ದೇವೆ. ನಾವು 17 ಜನರು ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು.
ಸಿಪಿ ಯೋಗೇಶ್ವರ್ಗೆ ಸಚಿವ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಆ ಕುರಿತು ಮಾತನಾಡಲ್ಲ. ಇದು ಯಡಿಯೂರಪ್ಪ ಅವರ ಪರಮಾಧಿಕಾರ. ಯಡಿಯೂರಪ್ಪ ಅವರ ತೀರ್ಮಾನಕ್ಕೆ ನಾವು ಬದ್ಧ ಎಂದರು. ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಯಡಿಯೂರಪ್ಪ ಮತ್ತು ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಸೇರಿದ್ದೇವೆ. ಯಡಿಯೂರಪ್ಪ ನೇತೃತ್ವದಲ್ಲೇ ಮುಂದಿನ ಚುನಾವಣೆಗೆ ಹೋಗುತ್ತೇವೆ ಎಂದು ಹೇಳಿದರು.