ಕರ್ನಾಟಕ

karnataka

ಸವದತ್ತಿಯಲ್ಲಿ ಸಿಡಿಲಿಗೆ 45ಕ್ಕೂ ಹೆಚ್ಚು ಕುರಿಗಳು ಬಲಿ

ಬೆಳಗಾವಿ ಸೇರಿದಂತೆ ಹಲವು ತಾಲೂಕುಗಳಲ್ಲಿ ನಿನ್ನೆ ಸಿಡಿಲು, ಬಿರುಗಾಳಿ ಸಹಿತ ಮಳೆ ಆರ್ಭಟಕ್ಕೆ ಸವದತ್ತಿ ತಾಲೂಕಿನ‌ ಮುನವಳ್ಳಿ ಹತ್ತಿರದ ನವೀಲುತೀರ್ಥ ಗ್ರಾಮದ ಹೊರವಲಯದಲ್ಲಿ 45ಕ್ಕೂ ಹೆಚ್ಚು ಕುರಿಗಳು ಸಿಡಿಲು ಬಡಿದು ಮೃತಪಟ್ಟಿವೆ.

By

Published : Oct 21, 2020, 8:07 AM IST

Published : Oct 21, 2020, 8:07 AM IST

sheeps died In Savadatti
ಸವದತ್ತಿಯಲ್ಲಿ ಸಿಡಿಲಿಗೆ 45ಕ್ಕೂ ಹೆಚ್ಚು ಕುರಿಗಳು ಬಲಿ

ಬೆಳಗಾವಿ:ನಿನ್ನೆ ಜಿಲ್ಲೆಯಾದ್ಯಂತ ಸುರಿದ ಗುಡುಗು ಸಹಿತ ಸಿಡಿಲು ಮಳೆಗೆ ನವಿಲುತೀರ್ಥ ಡ್ಯಾಂ ಹತ್ತಿರ ಸಿಡಿಲು ಬಡಿದು 45ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಿಡಿಲಿಗೆ 45ಕ್ಕೂ ಹೆಚ್ಚು ಕುರಿಗಳು ಬಲಿ: ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಆನಂದ ಮಾಮನಿ

ಬೆಳಗಾವಿ ಸೇರಿದಂತೆ ಹಲವು ತಾಲೂಕುಗಳಲ್ಲಿ ನಿನ್ನೆ ಸಿಡಿಲು, ಬಿರುಗಾಳಿ ಸಹಿತ ಮಳೆ ಆರ್ಭಟಕ್ಕೆ ಸವದತ್ತಿ ತಾಲೂಕಿನ‌ ಮುನವಳ್ಳಿ ಹತ್ತಿರದ ನವೀಲುತೀರ್ಥ ಗ್ರಾಮದ ಹೊರವಲಯದಲ್ಲಿ 45ಕ್ಕೂ ಕುರಿಗಳು ಸಿಡಿಲು ಬಡಿದು ಮೃತಪಟ್ಟಿವೆ. ಇದರಿಂದಾಗಿ ಕುರಿಗಳನ್ನು ಸಾಕಾಣಿಕೆ ಮಾಡಿ ಮಾರಾಟದ ಹಣದಿಂದ ಜೀವನ ಸಾಗಿಸುತ್ತಿದ್ದ ಬಡ ಕುಟುಂಬವೀಗ ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ, ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ, ಮೃತಪಟ್ಟ ಕುರಿ ಮಾಲೀಕರಿಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರಧನ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ತಹಶೀಲ್ದಾರ್ ಪ್ರಶಾಂತ್ ಪಾಟೀಲ, ಪಿಎಸ್‍ಐ ಬಸನಗೌಡ ಕಟ್ಟಿಮನಿಗೌಡ್ರು ಭೇಟಿ ನೀಡಿ ಘಟನಾ ಸ್ಥಳ ಪರಿಶೀಲಿಸಿ ಪರಿಹಾರದ ಭರವಸೆ ನೀಡಿದ್ದಾರೆ.

ABOUT THE AUTHOR

...view details