ಕರ್ನಾಟಕ

karnataka

ETV Bharat / state

ಮನೆ ಬೀಗ ಮುರಿದು 1.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು - ಚಿನ್ನಾಭರಣ ಕಳವು

ಉಗಾರ ಖುರ್ದ ಪಟ್ಟಣದ ಮನೆಯೊಂದರಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಗಳ್ಳತನ ಮಾಡಿದ ಖದೀಮರು ಸುಮಾರು 1.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ನಡೆದಿದೆ.

Chikkodi,ಚಿಕ್ಕೋಡಿ

By

Published : Jul 29, 2019, 11:38 PM IST

ಚಿಕ್ಕೋಡಿ: ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಬೀಗ ಮುರಿದ ಕಳ್ಳರು 1.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ನಡೆದಿದೆ.

ಉಗಾರ ಖುರ್ದ ಪಟ್ಟಣದ ಧೋಂಡಿರಾಜ ಶಿರಗೂರಕರ್‌ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಶಿರಗೂರಕರ್‌ ದಂಪತಿ ತಮ್ಮ ಪುತ್ರನನ್ನು ನೋಡಲು ಮುಂಬೈಗೆ ಹೋಗಿದ್ದರು. ಈ ವೇಳೆ ಮನೆಗೆ ನುಗ್ಗಿದ ಕಳ್ಳರು ಟ್ರೆಜರಿ ಬೀಗ ಮುರಿದು ಅದರಲ್ಲಿದ್ದ 5 ತೊಲೆ ಚಿನ್ನದ ಮಂಗಳಸೂತ್ರ, 1 ತೊಲೆ ಚೈನ್‌, 280 ಗ್ರಾಂ ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ತಪಾಸಣೆ ನಡೆಸುತ್ತಿರುವ ಪೊಲೀಸ್​ ಅಧಿಕಾರಿಗಳು

ದಂಪತಿ ಮುಂಬೈನಿಂದ ಮರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಕಾಗವಾಡ ಠಾಣೆಗೆ ದೂರು ಸಲ್ಲಿಸಿದ್ದಾರೆ. ಘಟನಾ ಸ್ಥಳಕ್ಕೆ ಅಥಣಿ ಸಿಪಿಐ ಶಂಕರಗೌಡ ಪಾಟೀಲ, ಕಾಗವಾಡ ಪಿಎಸ್‌ಐ ಹನಮಂತ ಶಿರಹಟ್ಟಿ ಭೇಟಿ ನೀಡಿದ್ದು, ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details