ಕರ್ನಾಟಕ

karnataka

ETV Bharat / state

ಚರ್ಚೆಗೆ ಗ್ರಾಸವಾಗಿದೆ ಅಥಣಿ ಜೆಡಿಎಸ್​ ಅಭ್ಯರ್ಥಿಯ ನಿಗೂಢ ನಡೆ

ಹಾಲಿ ಬಿಜೆಪಿ ಜಿಲ್ಲಾ ಪಂಚಾಯತ್​ ಸದಸ್ಯನಾಗಿಗಿದ್ದ ಗುರು ದಾಶ್ಯಾಳ ಸದ್ಯ ಅಥಣಿ ವಿಧಾನಸಭಾ ಉಪಚುನಾವಣೆ ಅಖಾಡಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದೀಗ ಇವರ ನಡೆ ಇನ್ನೂ ನಿಗೂಢವಾಗಿದೆ.

By

Published : Nov 21, 2019, 10:53 AM IST

ಚರ್ಚೆಗೆ ಗ್ರಾಸವಾಗಿರುವ ದಾಶ್ಯಾಳರ ನಿಗೂಢ ನಡೆ

ಬೆಳಗಾವಿ: ಜೆಡಿಎಸ್ ಅಭ್ಯರ್ಥಿ ಗುರು ದಾಶ್ಯಾಳರ ನಿಗೂಢ ನಡೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಾಲಿ ಬಿಜೆಪಿ ಜಿಲ್ಲಾ ಪಂಚಾಯತ್​ ಸದಸ್ಯ ಆಗಿರುವ ಗುರು ದಾಶ್ಯಾಳ ಸದ್ಯ ಅಥಣಿ ವಿಧಾನಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ.

ಚರ್ಚೆಗೆ ಗ್ರಾಸವಾಗಿರುವ ದಾಶ್ಯಾಳರ ನಿಗೂಢ ನಡೆ

ಅಥಣಿ ವಿಧಾನಸಭಾ ಕ್ಷೇತ್ರದ ಚುನಾವಣೆ ಭಾರಿ ಜಿದ್ದಾಜಿದ್ದಿನಿಂದ ಕೂಡಿದೆ. ಅದರಲ್ಲೂ ಉಪಚುನಾವಣೆ ಎಂದರೆ ತಂತ್ರ-ಪ್ರತಿತಂತ್ರಗಳು ಕಂಡುಬರುತ್ತಿವೆ. ಹೌದು ಸದ್ಯ ಬಿಜೆಪಿ ವಲಯದಲ್ಲಿ ಆತಂಕ ಮೂಡಿಸಿರುವ ಅಭ್ಯರ್ಥಿ ಗುರು ದಾಶ್ಯಾಳ. ಇವರು ಸದ್ಯ ಜೆಡಿಎಸ್ ಪಕ್ಷದಿಂದ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇವರು ಮೂಲತಃ ತೆಲಸಂಗ ಬ್ಲಾಕ್ ಬಿಜೆಪಿ ಪಕ್ಷದ ಜಿಲ್ಲಾ ಪಂಚಾಯತ್ ಸದಸ್ಯರು. ಸದ್ಯ ಪ್ರಭಾವಿ ಜಾತಿಯವರಾದ ಗುರು ದಾಶ್ಯಾಳ, ಪಂಚಮಸಾಲಿ ಸಮಾಜದಿಂದ ಗುರುತಿಸಿಕೊಂಡಿದ್ದಾರೆ. ರಾಜಕೀಯದಲ್ಲಿ ಜಾತಿ ಲೆಕ್ಕಾಚಾರ ಮೇಲುಗೈ ಸಾಧಿಸುವುದನ್ನ ನಾವು ನೋಡಿದ್ದೇವೆ. ಇಲ್ಲಿ ನೇರವಾಗಿ ಬಿಜೆಪಿಯ ಸ್ಪರ್ಧೆ ಟಕ್ಕರ್ ಕೊಡಲು ಡಿಸಿಎಂ ಲಕ್ಷ್ಮಣ್​ ಸವದಿ ಅವರ ಆಪ್ತ ಗುರು ದಾಶ್ಯಾಳ ಸ್ಪರ್ಧೆ ಮಾಡುತ್ತಿದ್ದಾರೆ.

ಒಂದೆಡೆ ಡಿಸಿಎಂ ಲಕ್ಷ್ಮಣ್ ಸವದಿ ಮೇಲೆ ಸಾರ್ವಜನಿಕವಾಗಿ ಆರೋಪ ಕೇಳಿಬರುತ್ತಿದೆ. ಜಾತಿ ಲೆಕ್ಕಾಚಾರದ ಮತಗಳ ಅನುಸಾರ ಗುರು ದಾಶ್ಯಾಳ ಏನಾದರೂ ಹೆಚ್ಚಿನ ಮತ ಪಡೆದುಕೊಂಡರೆ, ನೇರವಾಗಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಮೇಲೆ ಪರಿಣಾಮ ಬೀರಲಿದೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಸದ್ಯ ಗುರು ದಾಶ್ಯಾಳ ಅಜ್ಞಾತ ಸ್ಥಳದಲ್ಲಿ ಇದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಗುಪ್ತ ಸ್ಥಳದಲ್ಲಿ ಇದ್ದು ಸದ್ಯ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ನನಗೂ ಮತ್ತು ಡಿಸಿಎಂ ಲಕ್ಷ್ಮಣ್ ಸವದಿಗೂ ಸಂಭಂದವಿಲ್ಲ. ಹೆಚ್.ಡಿ ಕುಮಾರಸ್ವಾಮಿ ಕಾರ್ಯ ವೈಖರಿ ನೋಡಿ ಜೆಡಿಎಸ್ ನಿಂದ ಸ್ಪರ್ಧೆ ಮಾಡುತ್ತಿದ್ದೇನೆ ಎಂದಿದ್ದಾರೆ.

ABOUT THE AUTHOR

...view details