ಕರ್ನಾಟಕ

karnataka

ETV Bharat / state

ದಾಖಲೆ ಬರೆದ ಬೆಳಗಾವಿ ಸಂಸದ... ಕೇಂದ್ರ ಸಚಿವ ಸಂಪುಟದಲ್ಲಿ ಒಲಿಯುವುದಾ ಮಂತ್ರಿ ಸ್ಥಾನ? - ಸರೇಶ್​ ಅಂಗಡಿ

ಸತತ ನಾಲ್ಕನೇ ಬಾರಿ ಲೋಕಸಭೆಗೆ ಪ್ರವೇಶ ಮಾಡುತ್ತಿರುವ ಸಂಸದ ಸುರೇಶ್ ಅಂಗಡಿ ಈ ಬಾರಿ ನರೇಂದ್ರ ಮೋದಿಯವರ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಸಂಸದ ಸುರೇಶ್ ಅಂಗಡಿ

By

Published : May 26, 2019, 1:03 AM IST

Updated : May 26, 2019, 1:44 AM IST

ಬೆಳಗಾವಿ :ಕುಂದಾನಗರಿ ಲೋಕಸಭಾ ಕ್ಷೇತ್ರವನ್ನ ಬಿಜೆಪಿಯ ಭದ್ರ ಕೋಟೆಯನ್ನಾಗಿಸಿದ ಹಾಲಿ ಸಂಸದ ಸುರೇಶ್ ಅಂಗಡಿ ಸತತ ನಾಲ್ಕನೆಯ ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕದಲ್ಲಿ ಹೆಚ್ಚು ಅಂತರದಲ್ಲಿ ಗೆಲುವು ಸಾಧಿಸಿದ ಎರಡನೇ ಅಭ್ಯರ್ಥಿ ಎಂಬ ಪಟ್ಟ ಪಡೆದುಕೊಂಡಿದ್ದಾರೆ. ಇಷ್ಟೆಲ್ಲ ದಾಖಲೆ ಬರೆದ ಅಂಗಡಿಯವರಿಗೆ ಈ ಬಾರಿ ಅದೃಷ್ಟ ಲಕ್ಷ್ಮೀ ಒಲೆಯುತ್ತಾಳಾ ಎಂದು ಕಾದು ನೋಡಬೇಕು.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಅತ್ಯಧಿಕ ಅಂತರದ ಗೆಲುವು ಮಾಜಿ ಎಂಪಿ ಕಾಂಗ್ರೆಸ್ ನ ಎಸ್.ಬಿ. ಸಿದ್ನಾಳ್ ಅವರದ್ದಾಗಿತ್ತು. 1980 ರಲ್ಲಿ ಸಿದ್ನಾಳ್ 1,41,197 ಮತಗಳ ಅಂತರದಿಂದ ಗೆಲ್ಲುವ ಮೂಲಕ ಬೆಳಗಾವಿ ಲೋಕಸಭೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದರು. ಆದರೆ, ಈಗ ಸುರೇಶ್ ಅಂಗಡಿ ಸಿದ್ನಾಳ್​ರ ದಾಖಲೆ ಮುರಿದು 3,91,334 ಮತಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ :

ಸತತ ನಾಲ್ಕನೇ ಬಾರಿ ಲೋಕಸಭೆಗೆ ಪ್ರವೇಶ ಮಾಡುತ್ತಿರುವ ಸಂಸದ ಸುರೇಶ್ ಅಂಗಡಿ ಈ ಬಾರಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಉತ್ತರ ಕರ್ನಾಟಕ ಭಾಗದ ಹಿರಿಯ ರಾಜಕಾರಣಿಗಳ ಒಬ್ಬರಾಗಿರುವ ಅಂಗಡಿ ಎಲ್ಲರ ಜೊತೆಯಲ್ಲಿಯು ಉತ್ತಮ ಸಂಬಂಧ ಹೊಂದಿದ್ದಾರೆ. ಹಿರಿತನ ಹಾಗೂ ಬಿಜೆಪಿ ಭದ್ರಕೋಟೆ ಯಾಗಿರುವ ಮುಂಬೈ ಕರ್ನಾಟಕ ಆಧಾರದ ಮೇಲೆ ಸುರೇಶ್ ಅಂಗಡಿ ಅವರಿಗೆ ಸಚಿವ ಸ್ಥಾನ ಸಿಗಬಹುದು.

ಜಾತಿ ಲೆಕ್ಕಾಚಾರ ಕೈ ಹಿಡಿಯುವ ಸಾಧ್ಯತೆ :

ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿರುವ ಸಂಸದ ಸುರೇಶ್ ಅಂಗಡಿಯವರು ಸಚಿವ ಸ್ಥಾನದ ರೇಸಿನಲ್ಲಿದ್ದಾರೆ. ಜೊತೆಗೆ ಯಡಿಯೂರಪ್ಪ ಅವರ ಜೊತೆಗೆ ಆಪ್ತವಾಗಿರುವ ಕಾರಣ ಕೇಂದ್ರದಲ್ಲಿ ಇವರಿಗೆ ಲಾಭವಾಗುವುದು ಹೆಚ್ಚು ಎನ್ನಬಹುದು. ಒಟ್ಟಿನಲ್ಲಿ ಸತತ ನಾಲ್ಕು ಬಾರಿ ಸಂಸದರನ್ನಾಗಿ ಆಯ್ಕೆ ಮಾಡಿರುವ ಬೆಳಗಾವಿ ಜನತೆಯ ಸಚಿವ ಸ್ಥಾನದ ಆಸೆ ಈಡೇರುತ್ತದಾ ಎಂದು ಕಾದು ನೋಡಬೇಕು.

Last Updated : May 26, 2019, 1:44 AM IST

ABOUT THE AUTHOR

...view details