ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಸಿಲುಕಿದ್ದ 169 ರಾಜಸ್ಥಾನಿ ವಲಸೆ ಕಾರ್ಮಿಕರು ತವರಿನತ್ತ ಪ್ರಯಾಣ..

ಲಾಕ್​ಡೌನ್ ಇದ್ದರೂ ಕಂಟೈನರ್ ಮೂಲಕ ಬೆಳಗಾವಿ ಮಾರ್ಗವಾಗಿ ರಾಜಸ್ಥಾನಕ್ಕೆ ತೆರಳಲು ಪ್ರಯತ್ನಿಸುತ್ತಿದ್ದ ಕಾರ್ಮಿಕರನ್ನು ಮಾರ್ಚ್ 28ರಂದು ಪೊಲೀಸರು ತಡೆದು ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಿದ್ದರು.

By

Published : May 2, 2020, 3:16 PM IST

rajastani labours
169 ರಾಜಸ್ಥಾನಿ ಕಾರ್ಮಿಕರು ತವರಿಗೆ ಪ್ರಯಾಣ

ಬೆಳಗಾವಿ :ಕಳೆದ 35 ದಿನಗಳಿಂದ ಬೆಳಗಾವಿಯಲ್ಲಿ ಸಿಲುಕಿದ್ದ ರಾಜಸ್ಥಾನ ಮೂಲದ ಕಾರ್ಮಿಕರನ್ನು ಇಂದು ಅವರ ತವರು ರಾಜ್ಯಕ್ಕೆ ಕಳುಹಿಸಲಾಯಿತು.

ರಾಜಸ್ಥಾನದಿಂದ ಬಂದಿದ್ದ 6 ಖಾಸಗಿ ಬಸ್​​ಗಳ ಮೂಲಕ 169 ವಲಸೆ ಕಾರ್ಮಿಕರನ್ನು ಕಳುಹಿಸಿಕೊಡಲಾಯಿತು. ರಾಜಸ್ಥಾನ ಮೂಲದ ಕಾರ್ಮಿಕರು ಬೆಂಗಳೂರಿನಲ್ಲಿ ಕೂಲಿ ಮಾಡುತ್ತಿದ್ದರು. ಲಾಕ್​ಡೌನ್ ಇದ್ದರೂ ಕಂಟೈನರ್ ಮೂಲಕ ಬೆಳಗಾವಿ ಮಾರ್ಗವಾಗಿ ರಾಜಸ್ಥಾನಕ್ಕೆ ತೆರಳಲು ಪ್ರಯತ್ನಿಸುತ್ತಿದ್ದ ಕಾರ್ಮಿಕರನ್ನು ಮಾರ್ಚ್ 28ರಂದು ಪೊಲೀಸರು ತಡೆದು ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಿದ್ದರು.

ರಾಜಸ್ಥಾನಿ ಕಾರ್ಮಿಕರು ತವರಿಗೆ ಪ್ರಯಾಣ..

ಕಾರ್ಮಿಕರನ್ನು ಸ್ವಂತ ರಾಜ್ಯಕ್ಕೆ ಕಳುಹಿಸಲು ಕೇಂದ್ರ ಸರ್ಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ, ಪ್ರತಿ ಬಸ್​ನಲ್ಲಿ 28 ಕಾರ್ಮಿಕರಿಗೆ ಪ್ರಯಾಣಿಸಲು ಅವಕಾಶ ಒದಗಿಸಲಾಗಿದೆ. ಮಾಸ್ಕ್, ಸ್ಯಾನಿಟೈಜರ್ ಹಾಗೂ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ನೋಡಲ್ ಅಧಿಕಾರಿ ಎಸ್ ವಿ ದೊಡ್ಡಗೌಡರ ತಿಳಿಸಿದ್ದಾರೆ.

ABOUT THE AUTHOR

...view details