ಚಿಕ್ಕೋಡಿ:ಮಹಾರಾಷ್ಟ್ರದ ಸತಾರ ಜಿಲ್ಲೆಯ ಪಾಠಣ ತಾಲೂಕಿನ ಕೋಯ್ನಾ ಜಲಾಶಯದಿಂದ 50 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗಿದೆ. ಹೀಗಾಗಿ ನದಿ ತೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮುಂದುವರೆದ ಮಳೆ; ಬೆಳಗಾವಿಗರಿಗೆ ಚಿಂತೆ - chikkodirainnews
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಕೋಯ್ನಾ ಡ್ಯಾಮ್ನಿಂದ ಹೆಚ್ಚುವರಿ ನೀರು ಹರಿಸುವ ಸಾಧ್ಯತೆಯಿದೆ. ಹೀಗಾಗಿ ಮತ್ತೆ ನದಿ ಪಾತ್ರದ ಜನರಲ್ಲಿ ಆತಂಕ ಸೃಷ್ಟಿಸಿದೆ.
ಪ್ರವಾಹ ತಗ್ಗಿದ ಬಳಿಕ ಸ್ವಗ್ರಾಮಗಳಿಗೆ ತೆರಳಿದ ಕುಟುಂಬಗಳಲ್ಲಿ ಮತ್ತೆ ಪ್ರವಾಹದ ಚಿಂತೆ ಕಾಣುತ್ತಿದೆ. ಕೃಷ್ಣಾ ನದಿಯ ಪ್ರವಾಹ ಸ್ಥಿತಿಯಿಂದ ಚಿಕ್ಕೋಡಿ ವ್ಯಾಪ್ತಿಯ 81 ಗ್ರಾಮಗಳು, ಚಿಕ್ಕೋಡಿ ತಾಲೂಕಿನ 11, ಕಾಗವಾಡ ತಾಲೂಕಿನ 10, ಅಥಣಿ ತಾಲೂಕಿನ 21, ರಾಯಭಾಗ ತಾಲೂಕಿನ 14 ಹಾಗು ನಿಪ್ಪಾಣಿ ತಾಲೂಕಿನ 25 ಗ್ರಾಮಗಳ ಜನರು ಕಂಗೆಟ್ಟಿದ್ದರು. ಈ ಭಾಗಗಳಲ್ಲಿ ಒಟ್ಟು 151 ಕಾಳಜಿ ಕೇಂದ್ರಗಳಲ್ಲಿ ಪ್ರವಾಹ ಸಂತ್ರಸ್ತರು ಆಶ್ರಯ ಪಡೆದಿದ್ರು.
ಸದ್ಯ ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಿದರೆ ಮತ್ತೆ ಪ್ರವಾಹ ಎದುರಾಗುವ ಸ್ಥಿತಿ ಉಂಟಾಗಿದ್ದು, ನದಿ ಪಾತ್ರದ ಜನರಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮ ಬಳಿ ಕೃಷ್ಣಾ ನದಿಗೆ ಸುಮಾರು 65 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.