ಕರ್ನಾಟಕ

karnataka

ETV Bharat / state

ಪ್ಯಾಕೇಜ್​​​ ಆಧಾರಿತ ಗುತ್ತಿಗೆ ರದ್ದುಪಡಿಸುವಂತೆ ಗುತ್ತಿಗೆದಾರರ ಪ್ರತಿಭಟನೆ

ಪ್ಯಾಕೇಜ್ ಆಧಾರಿತ ಗುತ್ತಿಗೆ ರದ್ದಿಗಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎಸ್.ಸಿ ಎಸ್.ಟಿ ಗುತ್ತಿಗೆದಾರರ ಸಂಘ ಪ್ರತಿಭಟನೆ ನಡೆಸಿದೆ.

By

Published : Jul 29, 2019, 9:51 PM IST

ಮನವಿ ಸಲ್ಲಿಕೆ

ಬೆಳಗಾವಿ:ಸರ್ಕಾರಿ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆಯನ್ನು ಪ್ಯಾಕೇಜ್​ ಆಧಾರಿತವಾಗಿ ನೀಡುವುದರಿಂದ ಸಣ್ಣ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದ್ದು, ಇದನ್ನು ಕೂಡಲೇ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಬೆಳಗಾವಿ ಜಿಲ್ಲಾ ಎಸ್​ಸಿ, ಎಸ್​ಟಿ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಪ್ಯಾಕೇಜ್ ಆಧಾರಿತ ಗುತ್ತಿಗೆ ರದ್ದುಪಡಿಸುವಂತೆ ಗುತ್ತಿಗೆದಾರರ ಪ್ರತಿಭಟನೆ

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಜಿಲ್ಲಾ ಎಸ್​​ಸಿ, ಎಸ್​ಟಿ ಗುತ್ತಿಗೆದಾರರ ಸಂಘದ ಸದಸ್ಯರು, ಸರ್ಕಾರಿ ಅಭಿವೃದ್ಧಿ ಕಾಮಗಾರಿಗಳನ್ನು ಪ್ಯಾಕೇಜ್ ಮಾಡಬೇಕೆಂದು ಸರ್ಕಾರದ ಆದೇಶ ಇಲ್ಲದಿದ್ದರೂ 50 ಲಕ್ಷ ರೂ. ಒಳಗಿನ ಮೀಸಲಾತಿ ಕಾಮಗಾರಿಗಳನ್ನು ಕ್ರೋಢೀಕರಣಗೊಳಿಸಿ 1 ಕೋಟಿಯಿಂದ 5 ಕೋಟಿ ರೂಪಾಯಿಯವರೆಗೆ ಪ್ಯಾಕೇಜ್ ರೀತಿಯಲ್ಲಿ ನೀಡಲಾಗುತ್ತಿದೆ. ಇದರಿಂದ ಸಣ್ಣ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಇದನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸಿಂಧೂರ ವಲ್ಲೇಪೂರಕರ ಮಾತನಾಡಿ, ಬೆಳಗಾವಿಯಲ್ಲಿ ಜಾರಿಯಲ್ಲಿರುವ ಸರ್ಕಾರಿ ಕಾಮಗಾರಿಗಳನ್ನು ಪ್ಯಾಕೇಜ್​ ರೀತಿಯಲ್ಲಿ ಗುತ್ತಿಗೆ ನೀಡುತ್ತಿರುವುದರಿಂದ ಹೊರ ರಾಜ್ಯದವರು ಕೋಟಿ ಲೆಕ್ಕದಲ್ಲಿ ಹಣ ಹೂಡಿಕೆ ಮಾಡಿ ಗುತ್ತಿಗೆ ತೆಗೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿರುವ ಕಿರು ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದ್ದು, ಜಿಲ್ಲಾಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details