ಬೆಳಗಾವಿ: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮೊಟ್ಟೆ ಕೊಡುವ ಯೋಜನೆಯನ್ನ ವಿರೋಧಿಸಿ ಸಸ್ಯಹಾರಿಗಳಿಗಾಗಿ ಪ್ರತ್ಯೇಕ ಶಾಲೆಗಳನ್ನು ತೆರೆಯಬೇಕೆಂದು ಒತ್ತಾಯಿಸಿ ಸುವರ್ಣಸೌಧದವರೆಗೆ ಪಾದಯಾತ್ರೆ ಹಮ್ಮಿಕೊಂಡ ಅಖಿಲ ಭಾರತ ಸಸ್ಯಾಹಾರಿಗಳ ಒಕ್ಕೂಟ ಸ್ವಾಮೀಜಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ನಗರದ ಚೆನ್ನಮ್ಮ ವೃತ್ತದಿಂದ ಸುವರ್ಣಸೌಧದವರೆಗೆ ಶಾಲೆಗಳಲ್ಲಿ ಮೊಟ್ಟೆ ಕೊಡುವುದನ್ನು ವಿರೋಧಿಸಿ ಪಾದಯಾತ್ರೆ ಕೈಗೊಂಡ ಸ್ವಾಮೀಜಿಗಳು ಹಾಗೂ ಅಖಿಲ ಭಾರತ ಸಸ್ಯಾಹಾರಿಗಳ ಒಕ್ಕೂಟದ ಕಾರ್ಯಕರ್ತರನ್ನು ಚೆನ್ನಮ್ಮ ವೃತ್ತದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡರು. ಬಳಿಕ ಸಾರಿಗೆ ಬಸ್ನಲ್ಲಿ ತುಂಬಿಕೊಂಡು ಪ್ರತಿಭಟನೆ ನಡೆಸಲು ನಿಗದಿಪಡಿಸಿದ ಸುವರ್ಣ ಗಾರ್ಡನ್ಗೆ ಕರೆದೊಯ್ದರು.
ಅಖಿಲ ಭಾರತ ಸಸ್ಯಾಹಾರಿ ಒಕ್ಕೂಟದ ಸಂಚಾಲಕ ದಯಾನಂದ ಸ್ವಾಮೀಜಿ ಇದಕ್ಕೂ ಮುಂಚೆ ಅಖಿಲ ಭಾರತ ಸಸ್ಯಾಹಾರಿ ಒಕ್ಕೂಟದ ಸಂಚಾಲಕ ದಯಾನಂದ ಸ್ವಾಮೀಜಿ ಮಾತನಾಡಿ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ತರುತ್ತಿರುವ ಮೊಟ್ಟೆ ಯೋಜನೆಯನ್ನು ಕೈಬಿಡಬೇಕು. ಮೊಟ್ಟೆ ಬದಲಾಗಿ ಆರೋಗ್ಯಕರ ಹಾಗೂ ಪೋಷಕಾಂಶಗಳನ್ನು ಒಳಗೊಂಡ ಸಸ್ಯಾಹಾರಿ ಪದಾರ್ಥಗಳನ್ನು ಕೊಡಬೇಕು.
ಕಡಲೆ ಬೀಜ, ದ್ವಿದಳ ಧ್ಯಾನ ಹಾಗೂ ಸಿರಿಧ್ಯಾನವನ್ನ ಕೊಡಬೇಕು. ಒಂದು ವೇಳೆ ಮೊಟ್ಟೆ ಕೊಡಲು ಸರ್ಕಾರ ಮುಂದಾದರೆ ರಾಜ್ಯದಲ್ಲಿ ಪ್ರತ್ಯೇಕ ಸಸ್ಯಾಹಾರಿ ಅಂಗನವಾಡಿ ಹಾಗೂ ಶಾಲೆಗಳನ್ನು ತಕ್ಷಣವೇ ತೆರೆಯಬೇಕು. ನಾವು ಮೊಟ್ಟೆ ಕೊಡುವ ಶಾಲೆಯಲ್ಲಿ ಇರಲು ಸಾಧ್ಯವಿಲ್ಲ ಎಂದರು.
ಓದಿ:ಬೊಮ್ಮಾಯಿ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ : ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ಪೊಲೀಸರು ಮತ್ತು ಸ್ವಾಮೀಜಿಗಳ ಮಧ್ಯೆ ನೂಕಾಟ ತಳ್ಳಾಟ:
ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ವಿರೋಧ: ಸುವರ್ಣಸೌಧ ಮುತ್ತಿಗೆಗೆ ಪಟ್ಟು ಹಿಡಿದ ಸ್ವಾಮೀಜಿಗಳು ನಗರದ ಸುವರ್ಣ ಗಾರ್ಡನ್ನಲ್ಲಿ ಅನುದಾನಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ಕೊಡುವ ಯೋಜನೆ ವಿರೋಧಿಸಿ ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಸ್ವಾಮೀಜಿಗಳು ಹಾಗೂ ಪೊಲೀಸರು ನಡುವೆ ತೀವ್ರ ಮಾತಿನ ಚಕಮಕಿ ಕೂಡಾ ನಡೆದಿದೆ. ಈ ವೇಳೆ ಗದಗದ ದಯಾನಂದ ಸ್ವಾಮೀಜಿ, ಬೆಳಗಾವಿಯ ಚನ್ನಬಸವೇಶ್ವರ ಸ್ವಾಮೀಜಿ ಬ್ಯಾರಿಕೇಡ್ ಒದ್ದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಸ್ವಾಮೀಜಿಗಳ ಮಧ್ಯೆ ನೂಕಾಟ ತಳ್ಳಾಟ, ವಾಕ್ ಸಮರ ನಡೆಯಿತು. ಸ್ವಾಮೀಜಿಗಳು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿಯೇ ತಿರುತ್ತೇವೆ ಎಂದು ಪಟ್ಟು ಕೂಡಾ ಹಿಡಿದಿದ್ದಾರೆ.