ಚಿಕ್ಕೋಡಿ:ತಾಲೂಕಿನ ಕಬ್ಬೂರು ಗ್ರಾಮದಲ್ಲಿಲಾಕ್ಡೌನ್ ಆದೇಶ ಉಲ್ಲಂಘಿಸಿ ಸಂತೆಯಲ್ಲಿ ಜನರು ಗುಂಪು ಗುಂಪಾಗಿ ಸೇರಿದ್ದ ದೃಶ್ಯಗಳು ಕಂಡುಬಂದಿವೆ.
ಸಾಮಾಜಿಕ ಅಂತರ ಮರೆತು ಕಬ್ಬೂರು ಗ್ರಾಮದ ಸಂತೆಯಲ್ಲಿ ಜನಜಂಗುಳಿ - ಚಿಕ್ಕೋಡಿ ಲೇಟೆಸ್ಟ್ ನ್ಯೂಸ್
ಇಂದು ಕಬ್ಬೂರು ಗ್ರಾಮದಲ್ಲಿ ನಡೆಯುತ್ತಿರವ ಸಂತೆಯಲ್ಲಿ ಜನತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ವ್ಯಾಪಾರ-ವಹಿವಾಟಿನಲ್ಲಿ ತೊಡಗಿದ್ದ ದೃಶ್ಯಗಳು ಕಂಡು ಬಂದಿವೆ.
ಸಾಮಾಜಿಕ ಅಂತರ ಮರೆತು ಸಂತೆಗೆ ಮುಗಿಬಿದ್ದ ಚಿಕ್ಕೋಡಿ ಜನತೆ
ಇಂದು ನಗರದಲ್ಲಿ ಸಂತೆ ನಡೆಯುತ್ತಿದ್ದು, ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಜನರು ವ್ಯಾಪಾರದಲ್ಲಿ ತೊಡಗಿದ್ದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಲಾಕ್ಡೌನ್ ಹಿನ್ನೆಲೆಯಲ್ಲಿ ದಿನ ಬಳಕೆ ತರಕಾರಿ ಖರೀದಿಸಲು ಕಬ್ಬೂರು, ಮೀರಾಪುರಹಟ್ಟಿ, ಕೆಂಚನಟ್ಟಿ, ಜೋಡಟ್ಟಿ, ಸೇರಿದಂತೆ ವಿವಿಧ ಗ್ರಾಮದ ಜನರು ಆಗಮಿಸಿದ್ದರು. ಕೊರೊನಾ ಭಯವಿಲ್ಲದೆ, ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ವ್ಯಾಪಾರದಲ್ಲಿ ಜನ ಬ್ಯುಸಿಯಿದ್ದರು.
ಕಳೆದ ಸೋಮವಾರವು ಇದೇ ರೀತಿಯಾಗಿ ಜನರು ಸಂತೆಗೆ ಸೇರಿದ್ದರು. ಈ ವಾರವೂ ಸಹ ಅದೇ ಪರಿಸ್ಥಿತಿ ಮುಂದುವರೆದಿದೆ.