ಕರ್ನಾಟಕ

karnataka

ETV Bharat / state

ಮಹಾದೇವಪ್ಪ ಯಾದವಾಡ ಬಂಡಾಯ ಶಮನ: ನಾಮಪತ್ರ ವಾಪಸ್ - ಸತೀಶ ಜಾರಕಿಹೊಳಿ

ರಾಮದುರ್ಗ ಶಾಸಕ ಮಹಾದೇವಪ್ಪ ಅವರ ಬಂಡಾಯ ಶಮನಗೊಳಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ಹೀಗಾಗಿ ಮಹಾದೇವಪ್ಪ ಯಾದವಾಡ ನಾಮಪತ್ರ ವಾಪಸ್​ ಪಡೆದಿದ್ದಾರೆ.

ಮಹಾದೇವಪ್ಪ ಯಾದವಾಡ
ಮಹಾದೇವಪ್ಪ ಯಾದವಾಡ

By

Published : Apr 24, 2023, 4:17 PM IST

Updated : Apr 24, 2023, 6:17 PM IST

ಬೆಳಗಾವಿ : ರಾಮದುರ್ಗ ಶಾಸಕ‌ ಮಹಾದೇವಪ್ಪ ಯಾದವಾಡ ಅವರ ಬಂಡಾಯ ಶಮನಗೊಳಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ಈ ಬಾರಿ ರಾಮದುರ್ಗ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಚಿಕ್ಕರೇವಣ್ಣಗೆ ನೀಡಿದ್ದರಿಂದ ಅಸಮಾಧಾನಗೊಂಡಿದ್ದ ಮಹಾದೇವಪ್ಪ ಯಾದವಾಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ನಿನ್ನೆಯಷ್ಟೇ ಯಾದವಾಡ ಅವರ‌ ಮನೆಗೆ ಬಿಜೆಪಿ ಶಾಸಕ‌ ಬಸನಗೌಡ ಪಾಟೀಲ್​ ಯತ್ನಾಳ್​, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭೇಟಿ ನೀಡಿ ಮನವೊಲಿಸಲು ಪ್ರಯತ್ನಿಸಿದ್ದರು. ಸದ್ಯ ಸಂಧಾನ ಯಶಸ್ವಿಯಾಗಿದ್ದು, ಮಹಾದೇವಪ್ಪ ಯಾದವಾಡ ನಾಮಪತ್ರ ವಾಪಸ್ ಪಡೆದಿದ್ದಾರೆ.

ಡಾ ವಿಶ್ವನಾಥ ಪಾಟೀಲ್​ಗೆ​ ಗೆಲ್ಲುವ ವಿಶ್ವಾಸ : ಇನ್ನು ಬೈಲಹೊಂಗಲ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದ್ದು, ಟಿಕೆಟ್ ಸಿಗದ ಹಿನ್ನೆಲೆ ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಡಾ ವಿಶ್ವನಾಥ ಪಾಟೀಲ್​ ಕಣಕ್ಕಿಳಿದಿದ್ದು, ಬಿಜೆಪಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಪಂಚಮಸಾಲಿ ಸಮುದಾಯದ ಮತದಾರರು ಹೆಚ್ಚಿರುವ ಹಿನ್ನೆಲೆ ಡಾ ವಿಶ್ವನಾಥ ಪಾಟೀಲ್​ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಡಾ. ವಿಶ್ವನಾಥ ಪಾಟೀಲ

ಇನ್ನು, ಕಳೆದ ಬಾರಿ ಡಾ ವಿಶ್ವನಾಥ ಪಾಟೀಲ್​ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದರಿಂದ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಜಗದೀಶ ಮೆಟಗುಡ್ಡ ಸ್ಪರ್ಧಿಸಿದ್ದರು. ಆಗ ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ ಕೌಜಲಗಿ ಗೆದ್ದು ಬಂದಿದ್ದರು. ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ ಎನ್ನುವಂತೆ ಈ ಬಾರಿಯೂ ಅದೇ ರೀತಿ ಫಲಿತಾಂಶ ಮರುಕಳಿಸುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ರಾಜಕೀಯ ಚಿಂತಕರು.

ಇನ್ನು, ಖಾನಾಪುರ ಕ್ಷೇತ್ರದಲ್ಲಿ 9 ಜನ ಆಕಾಂಕ್ಷಿಗಳು ಬಿಜೆಪಿ ಟಿಕೆಟ್ ಕೇಳಿದ್ದರು. ಅಂತಿಮವಾಗಿ ವಿಠಲ ಹಲಗೇಕರ್ ಗೆ ಟಿಕೆಟ್ ನೀಡಲಾಗಿದೆ. ಇದರಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಅರವಿಂದ ಪಾಟೀಲ‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ಇಲ್ಲಿ ಬಂಡಾಯ ಏಳುವ ಮುಂಚೆಯೇ ಬಿಜೆಪಿ ನಾಯಕರು ಬಂಡಾಯ ಶಮನಗೊಳಿಸುವ ಕೆಲಸ‌ ಮಾಡಿದ್ದರು.

ಮಾರುತಿ ಅಷ್ಟಗಿ

ಇದನ್ನೂ ಓದಿ :ಮಂಡ್ಯದಲ್ಲಿ ಜೆಡಿಎಸ್​ ಬಂಡಾಯ: ಸಂಧಾನಕ್ಕೆ ಮುಂದಾದ ಹೆಚ್​​ಡಿಡಿ ಪುತ್ರ ರಮೇಶ್‌

ನಾಮಪತ್ರವನ್ನು ವಾಪಸ್ ಪಡೆದುಕೊಂಡ ಡಾ ಜಗದೀಶ್​: ಅದೇ ರೀತಿ ಸವದತ್ತಿ‌ ಕ್ಷೇತ್ರದಲ್ಲೂ ಟಿಕೆಟ್ ವಂಚಿತ ವಿರೂಪಾಕ್ಷಿ ಮಾಮನಿ, ಬಸವರಾಜ ಪಟ್ಟಣಶೆಟ್ಟಿ ಬಂಡಾಯ ಏಳದಂತೆ ಬಿಜೆಪಿ‌ ನೋಡಿಕೊಂಡಿದೆ. ಅದೇ ರೀತಿ ಚನ್ನಮ್ಮ ಕಿತ್ತೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಮಹಾಂತೇಶ ದೊಡ್ಡಗೌಡರ ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಟಿಕೆಟ್ ವಂಚಿತ ಡಾ ಜಗದೀಶ ಹಾರೂಗೊಪ್ಪ ಕೂಡ ತಮ್ಮ ನಾಮಪತ್ರ ವಾಪಸ್​​ ಪಡೆದುಕೊಂಡಿದ್ದಾರೆ.

ಸತೀಶ್​ ಜಾರಕಿಹೊಳಿ ಗೆಲುವು ಸುಗಮ :ಯಮಕನಮರಡಿ ಕ್ಷೇತ್ರದಿಂದ ಟಿಕೆಟ್ ಸಿಗದ ಹಿನ್ನೆಲೆ ಜೆಡಿಎಸ್​ನಿಂದ ಕಣಕ್ಕಿಳಿದಿರುವ ಮಾರುತಿ ಅಷ್ಟಗಿ ಅವರನ್ನು ಸಮಾಧಾನ ಪಡಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಇದು ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿಗೆ ಸಂಕಷ್ಟ ತಂದೊಡ್ಡಿದೆ. ಅಲ್ಲದೇ ಇದರಿಂದ ಸತೀಶ ಜಾರಕಿಹೊಳಿ ಗೆಲುವು ಸುಗಮವಾಗಲಿದೆ ಎನ್ನುತ್ತಾರೆ ರಾಜಕೀಯ ಚಿಂತಕರು.

ಇದನ್ನೂ ಓದಿ:ಮಂಡ್ಯದಲ್ಲಿ ಜೆಡಿಎಸ್​ ಬಂಡಾಯ: ಸಂಧಾನಕ್ಕೆ ಮುಂದಾದ ಹೆಚ್​​ಡಿಡಿ ಪುತ್ರ ರಮೇಶ್‌

Last Updated : Apr 24, 2023, 6:17 PM IST

ABOUT THE AUTHOR

...view details