ಬೆಳಗಾವಿ:ದ್ವಿಚಕ್ರವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಕ್ರದಡಿ ಸಿಲುಕಿದ ಬೈಕ್ ಸವಾರನೊಬ್ಬ ಸ್ಥಳದಲ್ಲೇ ನರಳಾಡಿ ಸಾವನ್ನಪ್ಪಿರುವ ಘಟನೆ ನಗರದ ಯಡಿಯೂರಪ್ಪ ಮಾರ್ಗದಲ್ಲಿ ನಡೆದಿದೆ. ಮೃತನ ಮಾಹಿತಿ ಈವರೆಗೂ ಲಭ್ಯವಾಗಿರುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ನಾಲ್ಕರ ಪಕ್ಕದಲ್ಲಿ ಬೆಳಗಾವಿ ನಗರ ಪ್ರವೇಶಿಸುವ ಮಾರ್ಗದಲ್ಲಿ ಈ ಅವಘಡ ಸಂಭವಿಸಿದೆ.
ಚಕ್ರಕ್ಕೆ ಸಿಲುಕಿದ್ದವನ ಎಳೆದೊಯ್ದ ಲಾರಿ.. ಬೆಳಗಾವಿಯಲ್ಲಿ ನರಳಾಡಿ ಜೀವ ಬಿಟ್ಟ ಬೈಕ್ ಸವಾರ - ಬೆಳಗಾವಿಯಲ್ಲಿ ನರಳಾಡಿ ಜೀವ ಬಿಟ್ಟ ಬೈಕ್ ಸವಾರ,
ವ್ಯಕ್ತಿಯ ದೇಹ ಲಾರಿಯ ಚಕ್ರದಲ್ಲಿ ಸಿಲುಕಿ ಎಳೆದುಕೊಂಡು ಬಂದಿರುವ ಪರಿಣಾಮ ಕೆಲಹೊತ್ತು ಮಾತ್ರ ಜೀವಂತವಾಗಿದ್ದ. ಸ್ಥಳದಲ್ಲಿದ್ದ ಸಾರ್ವಜನಿಕರು ಅಪಘಾತದಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿಗೆ ನೀರು ಕುಡಿಸಿ ಆರೈಕೆ ಮಾಡಿದರೂ ವ್ಯಕ್ತಿ ಆತ ಬದುಕುಳಿದಿಲ್ಲ.
ಲಾರಿ-ಬೈಕ್ ಅಪಘಾತ
ಘಟನೆಯಲ್ಲಿ ವ್ಯಕ್ತಿಯ ದೇಹ ಲಾರಿಯ ಚಕ್ರದಲ್ಲಿ ಸಿಲುಕಿ ಎಳೆದುಕೊಂಡು ಬಂದಿರುವ ಪರಿಣಾಮ ಕೆಲಹೊತ್ತು ಮಾತ್ರ ಜೀವಂತವಾಗಿದ್ದ. ಸ್ಥಳದಲ್ಲಿದ್ದ ಸಾರ್ವಜನಿಕರು ಗಂಭೀರವಾಗಿ ಗಾಯಗೊಂಡ ಈ ವ್ಯಕ್ತಿಗೆ ನೀರು ಕುಡಿಸಿ ಆರೈಕೆ ಮಾಡಿದರೂ ಆತ ಮಾತ್ರ ಬದುಕುಳಿಯಲಿಲ್ಲ.
ಬಳಿಕ ಸ್ಥಳಿಯರೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಪಘಾತವಾಗುತ್ತಿದ್ದಂತೆ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Jun 24, 2021, 6:32 PM IST