ಕರ್ನಾಟಕ

karnataka

ETV Bharat / state

ಕಾಮಗಾರಿಗಳ ಮೇಲೆ ಕೋವಿಡ್-ಲಾಕ್​ಡೌನ್​ ಪ್ರಭಾವ​- ರಾಜ್ಯದಲ್ಲಿ ಪರಿಸ್ಥಿತಿ ಹೇಗಿದೆ?

ಕೋವಿಡ್​ ನಿಯಂತ್ರಣಕ್ಕೆ ರಾಜ್ಯದಲ್ಲಿ ಲಾಕ್​ಡೌನ್​​ ಜಾರಿಯಲ್ಲಿದೆ. ಆದ್ರೆ ಕಟ್ಟಡ, ರಸ್ತೆ ಸೇರಿದಂತೆ ಇತರೆ ಮೂಲಭೂತ ಸೌಕರ್ಯ ನಿರ್ಮಾಣ ಕಾಮಗಾರಿಗಳಿಗೆ ಕೋವಿಡ್​ ನಿಯಮಗಳಡಿ ಅವಕಾಶ ನೀಡಿದ್ದರೂ, ಹಲವೆಡೆ ಕಾರ್ಮಿಕರ ಕೊರತೆಯಿಂದ ಕಾಮಗಾರಿಗಳು ಕುಂಠಿತಗೊಂಡಿವೆ. ಕೆಲವೆಡೆಗಳಲ್ಲಿ ಲಾಕ್​ಡೌನ್‌ನಿಂದ ಜನ ಸಂಚಾರಕ್ಕೆ ಕಡಿವಾಣ​ ಬಿದ್ದಿದ್ದು, ಗುತ್ತಿಗೆದಾರರು ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಕೆಲಸ ಚುರುಕುಗೊಳಿಸಿದ್ದಾರೆ. ಈ ಕುರಿತು ಇಲ್ಲಿದೆ ಒಂದು ವರದಿ.

is Delay in infrastructure project construction due to covid crisis?
ಕಾಮಗಾರಿಗಳ ಮೇಲೆ ಕೋವಿಡ್-ಲಾಕ್​ಡೌನ್​ ಪ್ರಭಾವ​- ರಾಜ್ಯದಲ್ಲಿ ಪರಿಸ್ಥಿತಿ ಹೇಗಿದೆ?

By

Published : May 20, 2021, 8:43 PM IST

ಬೆಂಗಳೂರು/ಬೆಳಗಾವಿ/ಮಂಗಳೂರು:ಕೋವಿಡ್​​ ಎರಡನೇ ಅಲೆ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಸೋಂಕು ತಡೆಗೆ ರಾಜ್ಯ ಸರ್ಕಾರ ಜನತಾ ಕರ್ಫ್ಯೂ ಘೋಷಿಸಿ ಇದೀಗ ಲಾಕ್​​ಡೌನ್​​ ಜಾರಿ ಮಾಡಿದೆ. ಪರಿಣಾಮ ಅನೇಕ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿವೆ.

ಆದ್ರೆ ನಿರ್ಮಾಣ ಕಾಮಗಾರಿಗಳಿಗೆ ಲಾಕ್​ಡೌನ್​​ನಿಂದ ವಿನಾಯಿತಿ ಇದ್ದರೂ, ಕೆಲವೆಡೆ ಮಾತ್ರ ಕಾಮಗಾರಿಗಳು ನಡೆಯುತ್ತಿವೆ. ಇನ್ನೂ ಹಲವೆಡೆ ಅಮೆಗತಿಯಲ್ಲಿ ಕೆಲಸ ನಡೆಯುತ್ತಿದ್ದರೆ, ಒಂದಿಷ್ಟು ಪ್ರದೇಶಗಳಲ್ಲಿ ಕಾಮಗಾರಿಗಳು ಚುರುಕುಗೊಂಡಿವೆ.

ರಾಜ್ಯದಲ್ಲಿ ಕೆಲಸ ಮಾಡುವ ಅನೇಕ ಕೂಲಿ ಕಾರ್ಮಿಕರು ಹೊರ ರಾಜ್ಯದವರೇ ಆಗಿದ್ದಾರೆ. ಪಂಚ ರಾಜ್ಯ ಚುನಾವಣೆಯ ಮತದಾನಕ್ಕೆ ಹೋದವ್ರು ಇನ್ನೂ ವಾಪಸಾಗಿಲ್ಲ. ಕೋವಿಡ್​​, ಲಾಕ್​ಡೌನ್​ ಭೀತಿಯಿಂದಲೇ ಹೋದವ್ರು ಅದೆಷ್ಟೋ ಮಂದಿ. ಇದೀಗ ಕರ್ನಾಟಕ ಸೇರಿದಂತೆ ಹೆಚ್ಚು ಕಡಿಮೆ ದೇಶವ್ಯಾಪಿ ಲಾಕ್​ಡೌನ್​​ ಜಾರಿಯಲ್ಲಿದೆ. ಹಾಗಾಗಿ ಬೆಂಗಳೂರಿನ ಅನೇಕ ಕಾಮಗಾರಿಗಳಿಗೆ ಕಾರ್ಮಿಕರ ಕೊರತೆ ಉಂಟಾಗಿದೆ.

ಕಾಮಗಾರಿಗಳ ಮೇಲೆ ಕೋವಿಡ್-ಲಾಕ್​ಡೌನ್​ ಪ್ರಭಾವ​

ಮಂಗಳೂರಿನಲ್ಲೂ ಇದೇ ಪರಿಸ್ಥಿತಿ. ವಿವಿಧ ಕಾರಣಗಳಿಂದ ತವರಿಗೆ ಮರಳಿದ ಬಹುತೇಕ ವಲಸೆ ಕಾರ್ಮಿಕರು ಹಿಂದಿರುಗದೆ ಕಾಮಗಾರಿಗಳಿಗೆ ಕಾರ್ಮಿಕರ ಕೊರತೆ ಎದುರಾಗಿದೆ.

ಬೆಳಗಾವಿಯಲ್ಲಿ ಮಾತ್ರ ವಿವಿಧ ಕಾಮಗಾರಿಗಳಿಗೆ ಲಾಕ್​ಡೌನ್ ವರದಾನವಾಗಿದೆ. ಜಿಲ್ಲೆಯಲ್ಲಿ ಅನಗತ್ಯ ಸಂಚಾರಕ್ಕೆ ಬ್ರೇಕ್​​ ಬಿದ್ದಿದ್ದು, ಸ್ಥಳೀಯ ಕಾರ್ಮಿಕರು ಲಭ್ಯವಿದ್ದಾರೆ. ಹಾಗಾಗಿ ಇಲ್ಲಿನ ಬಹುತೇಕ ಕಾಮಗಾರಿಗಳು ಶರವೇಗದಲ್ಲಿ ನಡೆಯುತ್ತಿವೆ. ಕೆಲವೆಡೆ ಮಾತ್ರ ಕಾರ್ಮಿಕರಿಗೆ ಅನಾರೋಗ್ಯವಾದ ಪರಿಣಾಮ ಕೆಲವು ಕಾಮಗಾರಿಗಳು ನಿಧಾನಗತಿಯಲ್ಲಿವೆ.

ಲಾಕ್​ಡೌನ್ ಬಿಸಿ ಮೂಲಭೂತ ಸೌಕರ್ಯಗಳ ಕಾಮಗಾರಿಗಳಿಗೂ ತಟ್ಟಿದೆ. ಕಾರ್ಮಿಕರ ಅಭಾವದಿಂದ ಕೆಲಸಗಳು ನಿಂತಿವೆ. ವಲಸೆ ಕಾರ್ಮಿಕರು ಸೋಂಕು ತಗುಲುವ ಭೀತಿಯಲ್ಲಿದ್ದಾರೆ. ಹಾಗಾಗಿ ಸೋಂಕು ತಗ್ಗೋವರೆಗೂ ಈ ಸಮಸ್ಯೆ ನಿವಾರಣೆಯಾಗುವಂತೆ ಕಾಣ್ತಿಲ್ಲ.

ABOUT THE AUTHOR

...view details