ಬೆಳಗಾವಿ: ಸಾವಿರಾರು ಜನರನ್ನು ವಂಚಿಸಿ ಗ್ರಾಹಕರಿಗೆ ಹಿಡಿಶಾಪಕ್ಕೆ ತುತ್ತಾಗಿರುವ ಬೆಂಗಳೂರಿನ ಐಎಂಎ ಜ್ಯುವೆಲ್ಲರಿ ಕಂಪನಿಗೆ ಬೆಳಗಾವಿಯ 300 ಕ್ಕೂ ಅಧಿಕ ಗ್ರಾಹಕರು ಹಣ ಹೂಡಿಕೆ ಮಾಡಿ ಕಂಗಾಲಾಗಿದ್ದಾರೆ.
ಐಎಂಎ ವಂಚನೆ: ಬೆಳಗಾವಿ ಜನರಿಂದ ಬೃಹತ್ ಹೋರಾಟಕ್ಕೆ ಸಿದ್ಧತೆ? - kannadanews
ಐಎಂಎ ಜ್ಯುವೆಲ್ಲರಿ ಕಂಪನಿಯಿಂದ ವಂಚನೆಗೊಳಗಾದ ಜನರ ಪೈಕಿ ಬೆಳಗಾವಿಯ 300 ಜನರು ಮೋಸ ಹೋಗಿದ್ದು, ಈ ಸಂಬಂಧ ಹಣ ಕಳೆದುಕೊಂಡವರೆಲ್ಲ ಸಭೆ ನಡೆಸಿದ್ದಾರೆ.
ಐಎಂಎ ವಂಚಿತ ಬೆಳಗಾವಿ ಜನರಿಂದ ಸಭೆ
ಹಣ ಹೂಡಿಕೆ ಮಾಡಿ ಕೈ ಸುಟ್ಟುಕೊಂಡಿರುವ ಗ್ರಾಹಕರು ಬೆಳಗಾವಿಯ ಅಂಜುಮನ್ ಹಾಲ್ ನಲ್ಲಿ ಸಭೆ ಸೇರಿ ಹೋರಾಟದ ನಿರ್ಧಾರ ಕೈಗೊಳ್ಳಲು ಅಣಿಯಾಗುತ್ತಿದ್ದಾರೆ. ಸಭೆ ಬಳಿಕ ಮಹಾ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡುವುದಾಗಿ, ಹಣ ಕಳೆದುಕೊಂಡಿರುವ ಗ್ರಾಹಕರು ತಿಳಿಸಿದ್ದಾರೆ. ಐಎಂಎ ಕಂಪನಿ ದೋಖಾ ಪ್ರಕರಣ ಬೆಳಗಾವಿ ನಗರಕ್ಕೂ ವಿಸ್ತರಣೆ ಆಗಿದ್ದು, ಜಿಲ್ಲೆಯ ಹಲವರು ಹಣ ಹೂಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿವೆ.