ಕರ್ನಾಟಕ

karnataka

ETV Bharat / state

ಮಳೆಯ ಆರ್ಭಟ... ಮಲಪ್ರಭಾ ನದಿ ರಭಸಕ್ಕೆ ಖಾನಾಪುರ ಬಳಿ ಕುಸಿಯುತ್ತಿದೆ ಬೃಹತ್ ಸೇತುವೆ!

ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಪರಿಣಾಮ ಖಾನಾಪುರ ತಾಲೂಕಿನ ಯಡೋಗಾ ಹಾಗೂ ಚಾಪಗಾಂವಿ ಸಂಪರ್ಕಿಸುವ ಸೇತುವೆ ನೀರಿನ ರಭಸಕ್ಕೆ ಕುಸಿಯಲು ಆರಂಭಿಸಿದೆ.

By

Published : Aug 6, 2020, 1:38 PM IST

Huge bridge near khanapura collapse
ಮಲಪ್ರಭಾ ನದಿ ರಭಸಕ್ಕೆ ಖಾನಾಪುರ ಬಳಿ ಬೃಹತ್ ಸೇತುವೆ ಕುಸಿತ

ಬೆಳಗಾವಿ:ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಖಾನಾಪುರ ತಾಲೂಕಿನಲ್ಲಿರುವ ಮಲಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ.

ಮಲಪ್ರಭಾ ನದಿ ರಭಸಕ್ಕೆ ಖಾನಾಪುರ ಬಳಿ ಬೃಹತ್ ಸೇತುವೆ ಕುಸಿತ

ಖಾನಾಪುರ ತಾಲೂಕಿನ ಯಡೋಗಾ ಹಾಗೂ ಚಾಪಗಾಂವಿ ಸಂಪರ್ಕಿಸುವ ಸೇತುವೆ ನೀರಿನ ರಭಸಕ್ಕೆ ಕುಸಿಯಲು ಆರಂಭಿಸಿದೆ. ಈ ಸೇತುವೆಯನ್ನು ಕೇವಲ ಮೂರು ತಿಂಗಳ ಹಿಂದಷ್ಟೆ ನಿರ್ಮಾಣ ಮಾಡಲಾಗಿತ್ತು. ಯಡೋಗಾ ಹಾಗೂ ಚಾಪಗಾಂವಿ ಜನತೆಯಲ್ಲಿ ಆತಂಕ ಮನೆ ಮಾಡಿದ್ದು, ಸೇತುವೆ ಮುಳುಗಡೆ ಪರಿಣಾಮ ಕಳೆದ ಮೂರು ದಿನಗಳಿಂದ ಯಡೋಗಾ ಹಾಗೂ ಚಾಪಗಾಂವಿ ಮಧ್ಯೆದ ಸಂಪರ್ಕ ಸ್ಥಗಿತಗೊಂಡಿದೆ.

ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಯಡೋಗಾ ಹಾಗೂ ಚಾಪಗಾಂವಿ ಗ್ರಾಮದಲ್ಲಿ ಅಪಾರ ಪ್ರಮಾಣದ ಭತ್ತದ ಬೆಳೆಗಳು ನಾಶವಾಗಿವೆ. ರಸ್ತೆ ಮುಳುಗಡೆಯಿಂದ ಉಭಯ ಗ್ರಾಮಗಳ ಸಂಪರ್ಕ ಕಡಿತವಾಗಿದ್ದು, ಕೃಷಿ ಚಟುವಟಿಕೆಗೆ ಹೋಗಿರುವ ರೈತರು ಚಾಪಗಾಂವಿ ಹಾಗೂ ಯಡೋಗಾ ಗ್ರಾಮದಲ್ಲಿ ಸಿಲುಕಿಕೊಂಡಿದ್ದಾರೆ. ಇವರ ರಕ್ಷಣೆಗೆ ಜಿಲ್ಲಾಡಳಿತ ಧಾವಿಸಬೇಕಿದೆ.

ABOUT THE AUTHOR

...view details