ಕರ್ನಾಟಕ

karnataka

ETV Bharat / state

ಹೆಬ್ಬಾಳ್ಕರ್- ಬೆನಕೆ ಮಧ್ಯೆ ಕ್ರೆಡಿಟ್ ವಾರ್: ಒಂದೇ ಕಾಮಗಾರಿಗೆ ಇಬ್ಬರು ಶಾಸಕರಿಂದ ಪ್ರತ್ಯೇಕ ಚಾಲನೆ - ಬೆಳಗಾವಿ

ಬೆಳಗಾವಿ ಎಪಿಎಂಸಿ ಆವರಣದಲ್ಲಿ ನಿನ್ನೆ ಒಂದೇ ಕಾಮಗಾರಿಗೆ ಮೊದಲು ಕಾಂಗ್ರೆಸ್​ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಚಾಲನೆ ನೀಡಿದ್ರೆ, ನಂತರ ಬಿಜೆಪಿ ಶಾಸಕ ಅನಿಲ್ ಬೆನಕೆ ಚಾಲನೆ ನೀಡಿದ್ದಾರೆ.

Lakshmi hebbalkar
ಹೆಬ್ಬಾಳ್ಕರ್- ಬೆನಕೆ

By

Published : Jan 20, 2021, 1:30 PM IST

ಬೆಳಗಾವಿ:ಒಂದೇ ಕಾಮಗಾರಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರು ಕಾಮಗಾರಿಗೆ ಪ್ರತ್ಯೇಕ ಚಾಲನೆ ನೀಡಿದ ಘಟನೆ ಇಲ್ಲಿನ ಎಪಿಎಂಸಿ ಆವರಣದಲ್ಲಿ ಮಂಗಳವಾರ ನಡೆದಿದೆ.

ಬೆಳಗಾವಿ ಎಪಿಎಂಸಿ ಆವರಣದಲ್ಲಿ 4 ಕೋಟಿ ವೆಚ್ಚದಲ್ಲಿ ನಿನ್ನೆ ವಿವಿಧ ಕಾಮಗಾರಿಗೆ ಚಾಲನೆ ನೀಡಲಾಯಿತು. ಮೊದಲು ಕಾಂಗ್ರೆಸ್​ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಚಾಲನೆ ನೀಡಿದ್ರೆ, ನಂತರ ಬಿಜೆಪಿ ಶಾಸಕ ಅನಿಲ್ ಬೆನಕೆ ಚಾಲನೆ ನೀಡಿದ್ದಾರೆ.

ಕಾಮಗಾರಿ ಚಾಲನೆ ನೀಡಿದ ವಿವರಗಳನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಫೇಸ್‌ಬುಕ್‌‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಂಜೆ ಇದೇ ಕಾಮಗಾರಿಗೆ ಶಾಸಕ ಅನಿಲ್ ಬೆನಕೆ ಮತ್ತೊಮ್ಮೆ ಚಾಲನೆ ನೀಡಿದ್ದಾರೆ. ಹೆಬ್ಬಾಳ್ಕರ್ ಫೋಸ್ಟ್ ಮಾಡಿದ್ದ ವಿವರವನ್ನೇ ಯಥಾವತ್ತಾಗಿ ಶಾಸಕ ಅನಿಲ್ ಬೆನಕೆ ಕೂಡ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಫೇಸ್‌ಬುಕ್ ಪೋಸ್ಟ್

ಫೇಸ್‌ಬುಕ್‌ ಒಂದೇ ವಿವರವಿದ್ದು, ಶಾಸಕರ ಹೆಸರು ಮಾತ್ರ ಬದಲಾಗಿದೆ. ಅದೇ ಕಾಮಗಾರಿ, ಅದೇ ಜೆಸಿಬಿ, ಅದೇ ಮುಖಂಡರು ಕಾರ್ಯಕ್ರಮದಲ್ಲಿದ್ದು, ಶಾಸಕರು ಮಾತ್ರ ಬೇರೆ ಬೇರೆಯಾಗಿದ್ದಾರೆ. ಇಬ್ಬರು ಶಾಸಕರ ನಡೆ ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೀಡಾಗಿದೆ.

ಓದಿ...ಕಾಂಗ್ರೆಸ್ ‘ರಾಜಭವನ ಚಲೋ’- ಫ್ರೀಡಂ ಪಾರ್ಕ್​ನಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ

ABOUT THE AUTHOR

...view details