ಚಿಕ್ಕೋಡಿ(ಬೆಳಗಾವಿ): ಗಾಳಿ ಸಹಿತ ಭಾರೀ ಮಳೆಗೆ ಕೋಳಿ ಫಾರ್ಮ್ ನೆಲಸಮವಾಗಿರುವ ಘಟನೆ ಇಲ್ಲಿನ ನಿಪ್ಪಾಣಿ ತಾಲೂಕಿನ ಅಮಲ್ಜರಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕೋಡಿಯಲ್ಲಿ ಗಾಳಿ ಸಹಿತ ಭಾರೀ ಮಳೆಗೆ ನೆಲಕಚ್ಚಿದ ಕೋಳಿ ಫಾರ್ಮ್ - ಗಾಳಿ ಸಹಿತ ಭಾರೀ ಮಳೆ
ರಾಜ್ಯದ ಹಲವು ಭಾಗಗಳಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಚಿಕ್ಕೋಡಿ ತಾಲೂಕಿನ ಹಲವು ಕಡೆ ಗಾಳಿ ಸಹಿತ ಭಾರೀ ಮಳೆಯಾಗಿದೆ. ಇಲ್ಲಿನ ನಿಪ್ಪಾಣಿ ತಾಲೂಕಿನ ಅಮಲ್ಜರಿ ಗ್ರಾಮದ ಕೋಳಿ ಫಾರ್ಮ್ ಮಳೆಯ ಹೊಡೆತಕ್ಕೆ ಸಿಲುಕಿ ನೆಲಕ್ಕುರುಳಿದ್ದು, 3 ಸಾವಿರಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿವೆ.
ಚಿಕ್ಕೋಡಿಯಲ್ಲಿ ಗಾಳಿ ಸಹಿತ ಭಾರೀ ಮಳೆಗೆ ನೆಲಕಚ್ಚಿದ ಕೋಳಿ ಫಾರ್ಮ್
ಘಟನೆಯಲ್ಲಿ 3,000ಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿವೆ. ಅಮಲ್ಜರಿ ಗ್ರಾಮದಲ್ಲಿ ಸಂಜೆ ವೇಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಗಾಳಿ ಸಹಿತ ಭಾರೀ ಮಳೆಯಿಂದ ಅಮಲ್ಜರಿ ಗ್ರಾಮದ ರಮೇಶ ರಾಮಲಿಂಗೆ ಎಂಬುವರಿಗೆ ಸೇರಿದ್ದ ಕೋಳಿ ಫಾರ್ಮ್ ನಾಶವಾಗಿದ್ದು, ಶೆಡ್ ಹಾಗೂ ಕೋಳಿಗಳೂ ಸೇರಿ 50 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ.