ಕರ್ನಾಟಕ

karnataka

ETV Bharat / state

ಗರೀಬ್​ ನವಾಜ್ ಫೌಂಡೇಶನ್​ನಿಂದ 3000 ದಿನಸಿ ಕಿಟ್ ವಿತರಣೆ: ಸತೀಶ್​ ಜಾರಕಿಹೊಳಿ ಸಾಥ್​

ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಸುಮಾರು 3 ಸಾವಿರ ಬಡ ಕುಟುಂಬಗಳಿಗೆ ದಿನಸಿ ‌ಕಿಟ್​ಗಳನ್ನು ವಿತರಿಸುತ್ತಿರುವ ಫೌಂಡೇಶನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಶಾಸಕ ಸತೀಶ ಜಾರಕಿಹೊಳಿ, ವೈಯಕ್ತಿಕವಾಗಿ ಎರಡು ಲಕ್ಷ ರೂ.‌ಗಳನ್ನು ನೀಡಿದರು.

By

Published : Apr 28, 2020, 7:57 PM IST

garib navaz foundeshan
ಖ್ವಾಜಾ ಗರೀಬ ನವಾಜ್ ಪೌಂಡೇಶನ್

ಬೆಳಗಾವಿ:ನ್ಯೂ ಗಾಂಧಿನಗರದ ಖ್ವಾಜಾ ಗರೀಬ್​ ನವಾಜ್ ಫೌಂಡೇಶನ್ ವತಿಯಿಂದ 26 ಲಕ್ಷ ರೂ. ಮೌಲ್ಯದ ದಿನಸಿ ಕಿಟ್​​ಗಳನ್ನು ಬಡ ಕುಟುಂಬಗಳಿಗೆ ವಿತರಿಸುವ ಕಾರ್ಯಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಚಾಲನೆ ನೀಡಿದರು.

ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಸುಮಾರು 3 ಸಾವಿರ ಬಡ ಕುಟುಂಬಗಳಿಗೆ ದಿನಸಿ ‌ಕಿಟ್​ಗಳನ್ನು ವಿತರಿಸಲಾಗುತ್ತಿದೆ. ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಈ‌‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಶಾಸಕ ಸತೀಶ್​ ಜಾರಕಿಹೊಳಿ, ವೈಯಕ್ತಿಕವಾಗಿ ಎರಡು ಲಕ್ಷ ರೂ.‌ಗಳನ್ನು ನೀಡುವುದರ ಮೂಲಕ ಫೌಂಡೇಷನ್ ಜನಪರ ಕಾರ್ಯಕ್ಕೆ ಸಾಥ್ ನೀಡಿ ಶ್ಲಾಘಿಸಿದರು.

ಮೊದಲ‌ ಹಂತದ ಲಾಕ್​‌ಡೌನ್ ಸಂದರ್ಭದಲ್ಲೂ ಗರೀಬ್​ ನವಾಜ್ ಫೌಂಡೇಶನ್ ವತಿಯಿಂದ ಸುಮಾರು 1500 ಕುಟುಂಬಗಳಿಗೆ ಅಂದಾಜು 17 ಲಕ್ಷ ರೂ.ಗಳ‌ ದಿನಸಿ ಕಿಟ್​ಗಳನ್ನು ವಿತರಿಸಲಾಗಿತ್ತು. ರಂಜಾನ್ ಸಮಯದಲ್ಲೂ ಬಡ ಜನರ ‌ನೆರವಿಗಾಗಿ ವಿಶೇಷ ಕಿಟ್​ಗಳನ್ನು ನೀಡುವ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಅಂದಾಜು 30 ಲಕ್ಷ ರೂ. ವ್ಯಯಿಸಲಿದೆ.

ಖ್ವಾಜಾ ಗರೀಬ್​ ನವಾಜ್ ಫೌಂಡೇಶನ್ ವತಿಯಿಂದ ದಿನಸಿ ಕಿಟ್​ ವಿತರಣೆ

ಈ ಸಂದರ್ಭದಲ್ಲಿ ಅಜೀಮ ಪಟ್ವೆಗಾರ, ಮೌಲಾನಾ ಮುಷ್ತಾಕ್, ರಪೀಕ್ ಗೋಕಾಕ ಸೇರಿದಂತೆ ಇತರರು ಇದ್ದರು.

ABOUT THE AUTHOR

...view details