ಚಿಕ್ಕೋಡಿ :ಸಾಲಬಾಧೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಲ್ಲೋಳಿ ಗ್ರಾಮದಲ್ಲಿ ನಡೆದಿದೆ.
ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ - ಚಿಕ್ಕೋಡಿಯಲ್ಲಿ ರೈತ ಸಾವು
ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಲ್ಲೋಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
Farmer committed suicide
ಹುಲ್ಲೋಳಿ ಗ್ರಾಮದ ಆದಪ್ಪ ಪರಪ್ಪ ಚೌಗಲಾ (75) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಇವರು ಕೃಷಿ ಪತ್ತಿನ ಬ್ಯಾಂಕ್ ಹಾಗೂ ಕೆವಿಜಿ ಬ್ಯಾಂಕ್ಗಳಲ್ಲಿ 1 ಲಕ್ಷ 20 ಸಾವಿರ ರೂ ಸಾಲ ಹೊಂದಿದ್ದರಂತೆ. ಈ ಸಾಲಬಾಧೆ ಹಾಗೂ ಬೆಳೆ ಹಾನಿಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.