ಕರ್ನಾಟಕ

karnataka

ETV Bharat / state

ಯುವತಿ ಹೆಸರಿನಲ್ಲಿ ನಕಲಿ ಖಾತೆ ಓಪನ್​: ಯುವಕರಿಂದ 19 ಲಕ್ಷ ರೂ. ಹಣ ಎಗರಿಸಿದ ಆರೋಪಿ - Etv bharat kannada

ಸಾಮಾಜಿಕ ಜಾಲತಾಣದಲ್ಲಿ ಅವಶ್ಯಕತೆಗೂ ಮೀರಿದ ಫೋಟೋಗಳನ್ನು ಹಾಕುವ ಯುವತಿಯರು ಎಚ್ಚರದಿಂದ ಇರುವುದು ಉತ್ತಮ. ಏಕೆಂದರೆ ನಿಮ್ಮ ಫೋಟೋವನ್ನು ಬಳಸಿ, ನಕಲಿ ಖಾತೆ ತೆರೆಯುವವರ ಸಂಖ್ಯೆಯೂ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇಂತಹ ಓರ್ವ ಆರೋಪಿಯನ್ನ ಇದೀಗ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮಹಾಂತೇಶ್ ಮೂಡಸೆ
ಆರೋಪಿ ಮಹಾಂತೇಶ್ ಮೂಡಸೆ

By

Published : Jul 28, 2022, 9:56 PM IST

ಬೆಳಗಾವಿ: ಸಾಮಾಜಿಕ ಜಾಲತಾಣದಿಂದ ರಾತ್ರೋರಾತ್ರಿ ಫೇಮಸ್ ಆಗಬೇಕು ಎಂದು ಅದೆಷ್ಟೋ ಯುವತಿಯರು ಫೇಸ್​ಬುಕ್, ಇನ್​ಸ್ಟಾಗ್ರಾಮ್​ಗಳಲ್ಲಿ ಫೋಟೋ ಹಾಕಿ ಲೈಕ್ ಕಮೆಂಟ್​ಗಳನ್ನು ಗಿಟ್ಟಿಸಿಕೊಳ್ಳುತ್ತಾರೆ‌. ಆದರೆ, ಇಲ್ಲೊಬ್ಬ ಆಸಾಮಿ ಅದೇ ಸುಂದರ ಯುವತಿಯರ ಫೋಟೋಗಳನ್ನೇ ಬಳಸಿಕೊಂಡು ಸುಮಾರು ಯುವಕರಿಂದ 19 ಲಕ್ಷಕ್ಕೂ ಅಧಿಕ ಹಣ ಪೀಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ನಾಯಿಹಿಂಗ್ಲಜ್ ಗ್ರಾಮದ ಮಹಾಂತೇಶ್ ಮೂಡಸೆ ಯುವತಿಯ ಹೆಸರಿನಲ್ಲಿ ನಕಲಿ ಖಾತೆ ತೆಗೆದ ಆರೋಪಿ. ಈತ ಕಳೆದ (2016ರಲ್ಲಿ) ಆರು ವರ್ಷಗಳ ಹಿಂದೆ ಎಂ‌. ಸ್ನೇಹಾ ಎಂಬ ಹೆಸರಿನಲ್ಲಿ ನಕಲಿ ಫೇಕ್ ಐಡಿ ಸೃಷ್ಟಿಸಿ ಫೇಸ್‌ಬುಕ್‌, ಇನ್​​ಸ್ಟಾಗ್ರಾಂನಲ್ಲಿ ಖಾತೆ ತೆರೆದಿದ್ದಾನೆ. ಹಣ ಮಾಡಲು ಕಳ್ಳದಾರಿ ಹಿಡಿದ ಬಂಧಿತ ಆರೋಪಿ ಮಹಾಂತೇಶ, ಸಾಮಾಜಿಕ ಜಾಲತಾಣದಲ್ಲಿ‌ ಅಪ್ಲೋಡ್ ಮಾಡಿದ ಯುವತಿಯರ ಸುಂದರ ಪೋಟೋಗಳನ್ನು ಡೌನ್ಲೋಡ್ ಮಾಡಿಟ್ಟಿಕೊಳ್ಳುತ್ತಿದ್ದನು.

ಬೆಳಗಾವಿ ಕಮಿಷನರ್ ಡಾ. ಎಂ.ಬಿ.ಬೋರಲಿಂಗಯ್ಯ

ವಾಟ್ಸ್​ಆ್ಯಪ್​ನ ಡಿಪಿಗೂ ಅದೇ ಯುವತಿಯ ಫೋಟೋಗಳನ್ನು ಇಡುತ್ತಿದ್ದನು. ಬಳಿಕ ಫೇಸ್‌ಬುಕ್‌, ಇನ್​​ಸ್ಟಾಗ್ರಾಂಗಳಲ್ಲಿ ಯುವಕರಿಗೆ ರಿಕ್ವೆಸ್ಟ್ ಕಳುಹಿಸುತ್ತಿದ್ದನಂತೆ. ಇತ್ತ ಯುವತಿ ಫೋಟೋವನ್ನು ‌ನೋಡಿ ಫಾಲೋ ಮಾಡುವ ಯುವಕರನ್ನೇ ಟಾರ್ಗೆಟ್ ಮಾಡಿ ಅವರನ್ನು ಪರಿಚಯ ಮಾಡಿಕೊಂಡು ಸಲುಗೆಯಿಂದ ಇರುತ್ತಿದ್ದ. ಚೆಂದದ ಯುವತಿಯ ಫೋಟೋಗಳನ್ನು ನೋಡಿ ಮಳ್ಳಾದ ಯುವಕರಿಂದ ಹೇಗೋ ಅವರ ಫೋನ್ ನಂಬರ್​ಗಳನ್ನು ಪಡೆದುಕೊಳ್ಳುತ್ತಿದ್ದನು. ಆದರೆ, ಯುವಕರೊಂದಿಗೆ ಫೋನ್​ನಲ್ಲಿ ಮಾತನಾಡದೇ ಬರೀ ಚಾಟ್ ಮಾಡುತ್ತಿದ್ದನಂತೆ.

ಈ ವೇಳೆ ಕೆಲವು ಯುವಕರಿಗೆ ಫೋಟೋಗಳನ್ನ ವಾಟ್ಸ್​ಆ್ಯಪ್​ ಮಾಡುತ್ತಿದ್ದನಂತೆ. ಯುವತಿ ಅಂತಾ ನಂಬಿದ ಕೆಲವರಿಗೆ ಪಂಗನಾಮ ಹಾಕಿದ್ದಾನೆ. ಹಣದ ಅವಶ್ಯಕತೆ ಇದೆ ಅಂತಾ ಹತ್ತು ಸಾವಿರ, ಇಪ್ಪತ್ತು ಸಾವಿರ, ಐವತ್ತು ಸಾವಿರವರೆಗೂ ಹಣ ಹಾಕಿಸಿಕೊಂಡು ಬಳಿಕ ನಂಬರ್ ಬ್ಲಾಕ್ ಮಾಡುತ್ತಿದ್ದನಂತೆ. ಹೀಗೆ ಒಂದೇ ಯುವತಿ ಫೋಟೋ ಹಾಕಿ ಅವರ ಹೆಸರಿನಲ್ಲಿ ಮಾಡಿದ್ದ ಅಕೌಂಟ್‌ಗೆ ಹದಿನೈದು ಸಾವಿರ ಪಾಲೋವರ್ಸ್ ಇದ್ದಾರೆ.

ಇದನ್ನೂ ಓದಿ:ಮುಖ್ಯಮಂತ್ರಿ ಭೇಟಿ ಬೆನ್ನಲ್ಲೇ ಮಂಗಳೂರಿನಲ್ಲಿ ಮುಂದುವರಿದ ಮಾರಕಾಸ್ತ್ರ ದಾಳಿ: ಯುವಕನ ಸ್ಥಿತಿ ಗಂಭೀರ

ತನ್ನ ಪೋಟೋ ಬೇರೆಯವರು ಬಳಸುತ್ತಿದ್ದ ವಿಚಾರ ತಿಳಿದ ಯುವತಿ ಶಾಕ್ ಆಗಿದ್ದಾರೆ. ಇತ್ತ ಯುವತಿ ದುಬೈನಲ್ಲಿ ಸೆಟ್ಲ್ ಆಗಿದ್ದು, ತನ್ನ ಪೋಟೋ ಮಿಸ್‌ ಯೂಸ್ ಆಗಿದ್ದನ್ನ ಕಂಡು ಶಾಕ್ ಆಗಿ ಖುದ್ದು ಮಹಾಂತೇಶ್‌ಗೆ ಮೆಸೇಜ್ ಮಾಡಿ ಅಕೌಂಟ್ ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾಳೆ‌. ಇಷ್ಟಾದರೂ ಆತ ಮಾತು ಕೇಳದಿದ್ದಾಗ, ಜು.4ರಂದು ಬೆಳಗಾವಿಗೆ ಆಗಮಿಸಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಪಿಎಸ್ಐ ದೈಹಿಕ ಪರೀಕ್ಷೆ ಪಾಸ್ ಆಗಿದ್ದ ಆಸಾಮಿ:ಬಂಧಿತ ಆರೋಪಿ ಮಹಾಂತೇಶ ಕಳೆದ ಹಲವು ದಿನಗಳ ಹಿಂದೆ ನಡೆದಿದ್ದ ಪಿಎಸ್ಐ ದೈಹಿಕ ಪರೀಕ್ಷೆ ಆಗಿದ್ದನು ಎಂಬ ವಿಚಾರ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಯುವಕರಿಗೆ ಮೋಸ ಮಾಡಿ ಬಂದ ಹಣವನ್ನ ತೆಗೆದುಕೊಂಡು ಗೋವಾ ರಾಜ್ಯಕ್ಕೆ ಹೋಗಿ ತನ್ನ ಗೆಳೆಯರೊಂದಿಗೆ ಮೋಜು ಮಸ್ತಿ ಅಂತಾ ಸುತ್ತಾಡಿದ್ದಾನೆ. ಒಟ್ಟಾರೆ, ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನು ಹಾಕುವ ಮುನ್ನವೇ ಯುವತಿಯರು ಎಚ್ಚರಿಕೆಯಿಂದ ಇರಬೇಕು ಎಂದು ಬೆಳಗಾವಿ ಕಮಿಷನರ್ ಡಾ. ಎಂ.ಬಿ.ಬೋರಲಿಂಗಯ್ಯ ತಿಳಿಸಿದ್ದಾರೆ.

ABOUT THE AUTHOR

...view details