ಕರ್ನಾಟಕ

karnataka

By

Published : Dec 15, 2021, 12:07 PM IST

ETV Bharat / state

ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾದರೆ ಸದನದ ಒಳಗು-ಹೊರಗು ಹೋರಾಟ : ಡಿ ಕೆ ಶಿವಕುಮಾರ್

ಈಗಿರುವ ಮತಾಂತರ ಕುರಿತ ಕಾಯ್ದೆ ಸಮರ್ಪಕವಾಗಿದೆ. ಇದನ್ನು ಮಾರ್ಪಟು ಮಾಡಬೇಕಾದ ಅವಶ್ಯಕತೆಯಿಲ್ಲ. ಹಾಗೇನಾದರೂ ಬಿಲ್ ಪಾಸ್ ಮಾಡಲು ಮುಂದಾದರೆ ನಾವು ಹೋರಾಟ ಮಾಡಲಿದ್ದೇವೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

DK Shivakumar
ಡಿಕೆ ಶಿವಕುಮಾರ್

ಬೆಳಗಾವಿ :ಈ ಅಧಿವೇಶನದಲ್ಲಿಯೇ ಬಿಜೆಪಿಯವರು ಮತಾಂತರ ನಿಷೇಧ ಬಿಲ್​ ಮಂಡನೆ ಮಾಡಲಿದ್ದಾರೆ. ಒಂದೊಮ್ಮೆ ಈ ಬಿಲ್ ತರುವ ಪ್ರಯತ್ನ ನಡೆದರೆ ಸದನದ ಒಳಗು-ಹೊರಗು ಹೋರಾಟ ಮಾಡಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎಚ್ಚರಿಸಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಮಾತನಾಡಿದ ಅವರು, ಇರುವ ಕಾಯ್ದೆಯೇ ಸಮರ್ಪಕವಾಗಿದೆ.

ಇದರಲ್ಲಿ ಬದಲಾವಣೆ ಮಾಡುವ ಅಗತ್ಯವಿಲ್ಲ. ಇಂತಹ ಬಿಲ್​​ಗಳು ನಮ್ಮ ದೇಶದ ಹೂಡಿಕೆ ಮೇಲೆ ಪರಿಣಾಮ ಬೀರಲಿದೆ. ಚುನಾವಣೆಗಾಗಿ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದರು.

ಮತಾಂತರ ನಿಷೇಧ ಕಾಯ್ದೆ ಜಾರಿ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿರುವುದು..

ಇಂದಿನ ಶಾಸಕಾಂಗ ಸಭೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಹಿನ್ನಡೆಯಾಗಿರುವ ಕುರಿತು ಚರ್ಚೆ ಜೊತೆಗೆ ಈ ಸಂಬಂಧ ಸದನದಲ್ಲಿ ಕೈಗೊಳ್ಳುವ ಹೋರಾಟದ ಕುರಿತು ಚರ್ಚೆಯಾಗಿದೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ, ಪರಿಷತ್ ಚುನಾವಣಾ ಫಲಿತಾಂಶದ ಬಗ್ಗೆ ಸಹ ಚರ್ಚೆಯಾಗಿದೆ ಎಂದರು.

ಬೆಳಗಾವಿಯಲ್ಲಿ ಬಿಜೆಪಿ ನಾಯಕರ ಜತೆ ಡಿಕೆಶಿ ಒಳಒಪ್ಪಂದ ಮಾಡಿಕೊಂಡಿದ್ದರು ಎಂಬ ಲಖನ್ ಜಾರಕಿಹೊಳಿ ಆರೋಪ ವಿಚಾರ ಮಾತನಾಡಿ, ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಕೊಡ್ತೀನಿ. ಈಗ ಇಂತಹ ಯಾವುದೇ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ಹಿಟ್ ಅಂಡ್​ ರನ್ ಮಾಡುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ ಯಾವುದೇ ಹಿಟ್ ಅಂಡ್​ ರನ್ ಮಾಡಿಲ್ಲ. ಸದನದಲ್ಲಿ ಆ ವಿಷಯ ಪ್ರಸ್ತಾಪ ಮಾಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಮತಾಂತರ ನಿಷೇಧ ಕಾಯ್ದೆ ಜಾರಿಯಾಗಬೇಕು: ಮಾಜಿ ಸಚಿವ ಗೂಳಿಹಟ್ಟಿ ಶೇಖರ್

For All Latest Updates

ABOUT THE AUTHOR

...view details