ಕರ್ನಾಟಕ

karnataka

ETV Bharat / state

ಮಹಿಳೆಯರಿಗೆ ಗನ್ ತೋರಿಸಿ ಮಾನಭಂಗಕ್ಕೆ ಯತ್ನಿಸಿದರಾ ಪೊಲೀಸ್ ಅಧಿಕಾರಿ?: ದೂರು - ಪ್ರತಿದೂರು ದಾಖಲು - Rural Station of Belgaum

ಮಹಿಳೆಯರಿಗೆ ಗನ್​ ತೋರಿಸಿ ಬೆದರಿಸಿ, ಮಾರಣಾಂತಿಕ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಲಾಗುತ್ತಿದ್ದಾಗಿ ಪೊಲೀಸ್ ಅಧಿಕಾರಿ ವಿರುದ್ಧವೇ ಬೆಳಗಾವಿಯ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

did-police-officer-tried-to-abuse-women
ಮಹಿಳೆಯರಿಗೆ ಗನ್ ತೋರಿಸಿ ಮಾನಭಂಗಕ್ಕೆ ಯತ್ನಿಸಿದ್ರಾ ಪೊಲೀಸ್ ಅಧಿಕಾರಿ?: ದೂರು- ಪ್ರತಿದೂರು ದಾಖಲು

By

Published : Oct 15, 2020, 2:47 PM IST

ಬೆಳಗಾವಿ:ಮಹಿಳೆಯರಿಗೆ ಗನ್​ ತೋರಿಸಿ ಬೆದರಿಸಿ, ಮಾರಣಾಂತಿಕ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಲಾಗುತ್ತಿದ್ದಾಗಿ ಪೊಲೀಸ್ ಅಧಿಕಾರಿ ವಿರುದ್ಧವೇ ಬೆಳಗಾವಿಯ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಹುಕ್ಕೇರಿ ಠಾಣೆಯ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟಿ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಬೆಳಗಾವಿ ಶಹಾಪುರದ ಅಲ್ವಾನ್ ಗಲ್ಲಿ ನಿವಾಸಿ ಮಹಿಳೆ ದೂರು ದಾಖಲಿಸಿದ್ದು, ದೂರಿಗೆ ಪ್ರತಿದೂರು ಕೂಡ ದಾಖಲಾಗಿದೆ.

ಮಹಿಳೆಯ ದೂರಿನಲ್ಲಿ ಏನಿದೆ?

ಖಾನಾಪುರ ತಾಲೂಕಿನ ಕುಸಮಳಿಯ ರೆಸಾರ್ಟ್​ನಲ್ಲಿ ಸಂಬಂಧಿಕರ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಕಲ್ಯಾಣಶೆಟ್ಟಿ ಕುಟುಂಬ ಅ. 13 ರಂದು ತಡರಾತ್ರಿ 11.15 ಕ್ಕೆ ಮರಳುತ್ತಿತ್ತು. ಈ ವೇಳೆ, ಅಲ್ಲಿನ ರಸ್ತೆಯ ಅವ್ಯವಸ್ಥೆಯಿಂದಾಗಿ ಇನೋವಾ ಕಾರು ಸಿಪಿಐ ಕುಟುಂಬಸ್ಥರು ಇದ್ದ ಸ್ವಿಫ್ಟ್ ಕಾರಿಗೆ ಡಿಕ್ಕಿಹೊಡೆದಿದೆ. ಘಟನೆ ಬಳಿಕ ಕ್ಷಮೆ ಕೇಳಿ, ಕಾರಿನ ದುರಸ್ತಿ ವೆಚ್ಚ ಭರಿಸುವುದಾಗಿಯೂ ಇನೋವಾ ಕಾರಿನಲ್ಲಿದ್ದ ನಮ್ಮ ಕುಟುಂಬ ಮನವಿ ಮಾಡಿಕೊಂಡಿದೆ. ಆದರೆ, ಮಾತುಕತೆ ನಡೆಯುತ್ತಿದ್ದಾಗ ಮತ್ತೊಂದು ಕಾರಿನಲ್ಲಿದ್ದ ಹುಕ್ಕೇರಿ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟಿ ಮತ್ತು ಇತರ 4 -5 ಜನರು ಸ್ಥಳಕ್ಕೆ ಬಂದು ರಿವಾಲ್ವರ್ ತೋರಿಸಿ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದಾರೆ. ಜೊತೆಗಿದ್ದ ನನ್ನ ಪತಿ ಮತ್ತು ಸಂಬಂಧಿಕರನ್ನು ಮನಬಂದಂತೆ ಥಳಿಸಿದ್ದಾರೆ. ನಾನು ಸೇರಿದಂತೆ ನನ್ನ ಜೊತೆಗಿದ್ದ ಕೆಲವು ಮಹಿಳೆಯರ ಮಾನಭಂಗಕ್ಕೆ ಯತ್ನಿಸಿದ್ದಾರೆ. ಅಲ್ಲದೇ, ತಾನು ಬೆಳಗಾವಿಯ ಡಾನ್. ತನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಯಾರಿಗಾದರೂ ಈ ವಿಚಾರ ತಿಳಿಸಿದರೆ ನಿಮ್ಮನ್ನು ಮುಗಿಸಿಬಿಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿಗೆ ಪ್ರತಿದೂರು:

ಮಹಿಳೆಯರಿಗೆ ಗನ್ ತೋರಿಸಿ ಮಾನಭಂಗಕ್ಕೆ ಯತ್ನಿಸಿದ್ರಾ ಪೊಲೀಸ್ ಅಧಿಕಾರಿ?: ದೂರು- ಪ್ರತಿದೂರು ದಾಖಲು
ಮಹಿಳೆಯರಿಗೆ ಗನ್ ತೋರಿಸಿ ಮಾನಭಂಗಕ್ಕೆ ಯತ್ನಿಸಿದ್ರಾ ಪೊಲೀಸ್ ಅಧಿಕಾರಿ?: ದೂರು- ಪ್ರತಿದೂರು ದಾಖಲು

ಪ್ರತಿಯಾಗಿ ದೂರು ದಾಖಲಿಸಿರುವ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟಿ,‌ ಹುಟ್ಟುಹಬ್ಬದ ಪಾರ್ಟಿ ಮುಗಿಸಿಕೊಂಡು 2 ವಾಹನಗಳಲ್ಲಿ ನಮ್ಮ ಕುಟುಂಬ ಸದಸ್ಯರು ಬರುತ್ತಿದ್ದೆವು. ನನ್ನ ಕಾರು ಮುಂದೆ ಹೋಗಿತ್ತು, ಹಿಂದಿನಿಂದ ನಮ್ಮ ತಾಯಿ ಮತ್ತಿತರರು ಬರುತ್ತಿದ್ದರು. ಆ ಕಾರಿಗೆ ಮಹಿಳೆಯಿದ್ದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಕಾರಿನಲ್ಲಿ 12 -15 ಜನರಿದ್ದರು. ನಮ್ಮ ಕುುಟಂಬದವರು ಕೇವಲ 5 ಜನರಿದ್ದರು. ತಾವೇ ಡಿಕ್ಕಿ ಹೊಡೆದು ಕಾರಿಗೆ ಕಲ್ಲು ತೂರಿ, ಹಲ್ಲೆ ನಡೆಸಿದ್ದಾರೆ. ಸುದ್ದಿ ತಿಳಿದ ತಕ್ಷಣ ನಾನು ಸ್ಥಳಕ್ಕೆ ಬಂದೆ. ನಾನು‌ ರಜೆ ಮೇಲಿದ್ದೆ. ರಿವಾಲ್ವರಿ ಇರಲಿಲ್ಲ. ಪೊಲೀಸ್ ಡ್ರೆಸ್ ಹಾಕಿರಲಿಲ್ಲ. ನನ್ನ ತಾಯಿ ಮತ್ತು ಕುಟುಂಬದವರ ಮೇಲೆ ಹಲ್ಲೆ ನಡೆಸಿ, ಕಾರಿಗೆ ಕಲ್ಲು ತೂರಿದ್ದಾರೆ. ಇಷ್ಟೊಂದು ದೊಡ್ಡ ಗುಂಪು ಇರುವಾಗ ಮಾನಭಂಗ ಯತ್ನ ನಡೆಸಿದರೆನ್ನುವುದನ್ನು ನಂಬುವುದಕ್ಕೆ ಸಾಧ್ಯವೇ ಎಂದು ಕಲ್ಯಾಣಶೆಟ್ಟಿ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಇನ್ನು ತನಿಖೆ ಬಳಿಕವೇ ಸತ್ಯಾಂಶ ಹೊರಬರಲಿದೆ.

ABOUT THE AUTHOR

...view details