ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರದಂತೆ ಕರ್ನಾಟಕದಲ್ಲಿಯೂ ಪ್ರಜಾಪ್ರಭುತ್ವ ಗೆಲ್ಲಲಿದೆ: ವೇಣುಗೋಪಾಲ್​

ಉಪಚುನಾವಣೆ ನಂತರ ಬಿಜೆಪಿ ಸರ್ಕಾರ ಅಧಿಕಾರದಿಂದ ದೂರವಿರಲಿದೆ. ಮಹಾರಾಷ್ಟ್ರದಂತೆಯೇ ಕರ್ನಾಟಕದಲ್ಲಿಯೂ ಪ್ರಜಾಪ್ರಭುತ್ವಕ್ಕೆ ಗೆಲುವು ದೊರೆಯಲಿದೆ ಎಂದು ಕಾಂಗ್ರೆಸ್​​ ರಾಜ್ಯ ಉಸ್ತುವಾರಿ ಸಚಿವ ಕೆ.ಸಿ.ವೇಣುಗೋಪಾಲ್​ ಹೇಳಿದ್ದಾರೆ.

By

Published : Dec 2, 2019, 2:01 PM IST

K.C.Venugopal
ಕಾಂಗ್ರೆಸ್​​ ರಾಜ್ಯ ಉಸ್ತುವಾರಿ ಸಚಿವ ಕೆ.ಸಿ.ವೇಣುಗೋಪಾಲ್​

ಬೆಳಗಾವಿ: ಉಪಚುನಾವಣೆ ಫಲಿತಾಂಶ ಬಳಿಕ ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಪ್ರಜಾಪ್ರಭುತ್ವಕ್ಕೆ ಗೆಲುವಾಗಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಹೇಳಿದ್ದಾರೆ.

ಗೋಕಾಕ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಉಪಚುನಾವಣೆ ಬಳಿಕ ನಮ್ಮ ಮುಂದೆ ಎಲ್ಲಾ ರೀತಿಯ ಆಯ್ಕೆಗಳಿವೆ. ಬಿಜೆಪಿ ಷಡ್ಯಂತ್ರದ ನಡುವೆಯೂ ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವಕ್ಕೆ ಗೆಲುವಾಗಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ಆಗಲಿದೆ. ನಮ್ಮ ನಿಲುವು ಸ್ಪಷ್ಟವಿದ್ದು, ಅಧಿಕಾರದಿಂದ ಬಿಜೆಪಿಯನ್ನು ದೂರವಿಡಲು ಎಲ್ಲಾ ರೀತಿ ದಾರಿಗಳು ತೆರೆದಿವೆ ಎಂದರು.

ಕಾಂಗ್ರೆಸ್​​ ರಾಜ್ಯ ಉಸ್ತುವಾರಿ ಸಚಿವ ಕೆ.ಸಿ.ವೇಣುಗೋಪಾಲ್​
ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದು ಆಯ್ಕೆಯಾಗಿ ಮೋಸ ಮಾಡಿದ್ದಾರೆ. ಇದು ಕುದುರೆ ವ್ಯಾಪಾರದ ಒಂದು ಭಾಗವಾಗಿದೆ. ಹೀಗಾದರೆ ಪ್ರಜಾಪ್ರಭುತ್ವದ ಅರ್ಥ ಏನು? ಕಳೆದ ಬಾರಿ ಗುಜರಾತ್, ಮಹಾರಾಷ್ಟ್ರ ಉಪಚುನಾವಣೆಯಲ್ಲಿ ಪಕ್ಷಾಂತರಿಗಳಿಗೆ ಜನ ಪಾಠ ಕಲಿಸಿದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ಪಕ್ಷಾಂತರಿಗಳಿಗೆ ಮತದಾರರು ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರವಾಹದಿಂದ ಉತ್ತರ ಕರ್ನಾಟಕ ಜನರು ಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ನೆರೆ ಸಂತ್ರಸ್ತರ ಸಹಾಯಕ್ಕೆ ಧಾವಿಸಿಲ್ಲ. ಗೋಕಾಕ್ ಕ್ಷೇತ್ರದ ಈಗಿನ ಬಿಜೆಪಿ ಅಭ್ಯರ್ಥಿ ಪ್ರವಾಹದ ವೇಳೆ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿ, ಕರ್ನಾಟಕದಲ್ಲಿ ಎಂಎಲ್‌ಎಗಳ ಕುದುರೆ ವ್ಯಾಪಾರ ಅಮಿತ್ ಶಾ ನೇತೃತ್ವದಲ್ಲಿ ನಡೆದಿದೆ ಎಂದು ಆರೋಪಿಸಿದರು.

ABOUT THE AUTHOR

...view details