ಕರ್ನಾಟಕ

karnataka

ETV Bharat / state

ಮರಾಠ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಸಿಎಂಗೆ ಮನವರಿಕೆ : ಶಾಸಕ ಶ್ರೀಮಂತ ಪಾಟೀಲ್ - ಸಂಪುಟ ವಿಸ್ತರಣೆ

ಮರಾಠ ಸಮುದಾಯಕ್ಕೆ 2 ಎ ಮೀಸಲಾತಿ ಕುರಿತಂತೆ ಸಿಎಂ ಎದುರು ಬಹಳಷ್ಟು ಸಲ ಬೇಡಿಕೆ ಇಟ್ಟಿದ್ದೇವೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಹೇಳಿಕೆ.

MLA Shrimant Patil
ಶಾಸಕ ಶ್ರೀಮಂತ ಪಾಟೀಲ್

By

Published : Dec 21, 2022, 3:44 PM IST

Updated : Dec 21, 2022, 6:28 PM IST

ಶಾಸಕ ಶ್ರೀಮಂತ ಪಾಟೀಲ್

ಬೆಳಗಾವಿ: ಮರಾಠ ಸಮಾಜದ ಸಮಸ್ಯೆ ಕುರಿತಾಗಿ ಈಗಾಗಲೇ ಸಿಎಂ ಗಮನಕ್ಕೆ ತರಲಾಗಿದೆ. 2 ಎ ಮೀಸಲಾತಿ ಕುರಿತಂತೆ ಬಹಳಷ್ಟು ಸಲ ಬೇಡಿಕೆ ಕುರಿತಾಗಿ ಚರ್ಚೆ ಮಾಡಿದ್ದೇವೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಹೇಳಿದರು.

ಬೆಳಗಾವಿ ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಇವತ್ತು ಅಥವಾ ನಾಳೆ ಸಭೆ ಮಾಡುವೆ ಎಂದು ಸಿಎಂ ಹೇಳಿದ್ದು, ಕರ್ನಾಟದಲ್ಲಿ ನೆಲೆಸಿರುವ ಮರಾಠ ಸಮುದಾಯದ ಬೇಡಿಕೆಗಳನ್ನು ಸರ್ಕಾರ ಶೀಘ್ರ ಈಡೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಪುಟ ವಿಸ್ತರಣೆ ವಿಚಾರ:ನಾನೇನು ಮಂತ್ರಿಗಿರಿ ಕೇಳಿಲ್ಲ, ಕೇಳೋದಿಲ್ಲ. ನಮ್ಮ ಕ್ಷೇತ್ರದ ಅಭಿವೃದ್ಧಿ ನನಗೆ ಮುಖ್ಯವಾಗಿದೆ. ಹೀಗಾಗಿ ನನ್ನ ಕಾಗವಾಡ ಕ್ಷೇತ್ರ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಿದ್ರೆ ಸಾಕು. ಹೊಸದಾಗಿ ಸಂಪುಟ ವಿಸ್ತರಣೆ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿದರು.

ಇದನ್ನೂಓದಿ:ಸಚಿವ ನಿರಾಣಿ ನನ್ನ ಮುಂದೆ ಬಚ್ಚಾ, ಟಿಕೆಟ್ ಬೇಕೆಂದು ನಮ್ಮ ಮನೆಗೆ ಬರುತ್ತಿದ್ದರು: ಯತ್ನಾಳ್ ಕಿಡಿ

Last Updated : Dec 21, 2022, 6:28 PM IST

ABOUT THE AUTHOR

...view details