ಅಥಣಿ: ಪಾತ್ರೆ ತೊಳೆಯಲು ನೀರು ತುಂಬಿಟ್ಟಿದ್ದ ಬಕೆಟ್ಗೆ ಆಕಸ್ಮಿಕವಾಗಿ ಒಂದೂವರೆ ವರ್ಷದ ಮಗು ಬಿದ್ದು ಸಾವು ಸಾವಿಗೀಡಾಗಿದೆ. ಈ ಘಟನೆ ತಾಲೂಕಿನ ತಾಂವಶಿ ಗ್ರಾಮದಲ್ಲಿ ಸಂಭವಿಸಿದೆ.
ಅಥಣಿ: ನೀರು ತುಂಬಿದ್ದ ಬಕೆಟ್ಗೆ ಬಿದ್ದು ಮಗು ಸಾವು - athani latest news
ಮಗುವಿನ ತಂದೆ ಹೊಲದಲ್ಲಿ ಕೆಲಸಕ್ಕೆ ಹೋಗಿದ್ದು, ತಾಯಿ ಮಗುವನ್ನು ಆಟ ಆಡಲು ಬಿಟ್ಟು ಅಡುಗೆ ಮನೆ ಕೆಲಸದಲ್ಲಿ ತೊಡಗಿದ್ದರು. ಮಗು ಕಾಣಿಸದಿದ್ದ ಹಿನ್ನೆಲೆ ಹುಡುಕಾಟ ನಡೆಸಿದಾಗ ಮಗು ಬಕೆಟ್ನಲ್ಲಿ ಮುಳುಗಿ ಸಾವಿಗೀಡಾಗಿರುವುದು ತಿಳಿದು ಬಂದಿದೆ.
ಅಥಣಿ: ನೀರು ತುಂಬಿದ್ದ ಬಕೆಟ್ಗೆ ಬಿದ್ದು ಮಗು ಸಾವು
ಅಥಣಿ ತಾಲೂಕಿನ ತಾಂವಶಿ ಗ್ರಾಮದ ಸನದಿ ತೋಟದಲ್ಲಿ ವಾಸವಿರುವ ನಿಂಗಪ್ಪ ಮಸರಗುಪ್ಪಿ ಇವರ ಒಂದೂವರೆ ವರ್ಷದ ವಿಜಯ ಮಸರಗುಪ್ಪಿ ಎಂಬ ಮಗು ಅಂಗಳದಲ್ಲಿ ಆಟ ಆಡುತ್ತಿರುವಾಗ ಈ ದುರಂತ ಸಂಭವಿಸಿದೆ.
ಮಗುವಿನ ತಂದೆ ಹೊಲದಲ್ಲಿ ಕೆಲಸಕ್ಕೆ ಹೋಗಿದ್ದು, ತಾಯಿ ಮಗುವನ್ನು ಆಟ ಆಡಲು ಬಿಟ್ಟು ಅಡುಗೆ ಮನೆ ಕೆಲಸದಲ್ಲಿ ತೊಡಗಿದ್ದರು. ಮಗು ಕಾಣಿಸದಿದ್ದ ಹಿನ್ನೆಲೆ ಹುಡುಕಾಟ ನಡೆಸಿದಾಗ ಮಗು ಬಕೆಟ್ನಲ್ಲಿ ಮುಳುಗಿ ಸಾವಿಗೀಡಾಗಿರುವುದು ತಿಳಿದು ಬಂದಿದೆ. ಮಗುವಿನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.