ಕರ್ನಾಟಕ

karnataka

By

Published : May 13, 2021, 2:17 PM IST

ETV Bharat / state

ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ನಿದ್ರೆಗೆ ಜಾರಿದ ಚೆಕ್ ಪೋಸ್ಟ್ ಸಿಬ್ಬಂದಿ

ಬೆಳಗಾವಿ ಜಿಲ್ಲೆಯ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಪೊಲೀಸರು ನಿದ್ರೆಗೆ ಜಾರಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

staff sleep at Belagavi and Maharashtra border, heck post staff sleep at Belagavi and Maharashtra border, Belagavi and Maharashtra border news, ಬೆಳಗಾವಿ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ನಿದ್ರೆಗೆ ಜಾರಿದ ಸಿಬ್ಬಂದಿಯರು, ಬೆಳಗಾವಿ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ನಿದ್ರೆಗೆ ಜಾರಿದ ಚೆಕ್ ಪೋಸ್ಟ್ ಸಿಬ್ಬಂದಿಯರು, ಬೆಳಗಾವಿ ಮತ್ತು ಮಹಾರಾಷ್ಟ್ರ ಗಡಿ ಸುದ್ದಿ,
ಕರ್ನಾಟಕ-ಮಹಾರಾಷ್ಟ್ರಗಡಿಯಲ್ಲಿ ನಿದ್ರೆಗೆ ಜಾರಿದ ಚೆಕ್ ಪೋಸ್ಟ್ ಸಿಬ್ಬಂದಿಯರು

ಚಿಕ್ಕೋಡಿ:ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಯಲ್ಲಿರುವ ಬೆಳಗಾವಿ ಜಿಲ್ಲೆಯ ಕಾಗವಾಡ ಚಕ್‌ಪೊಸ್ಟ್‌ ಬಳಿ ಪೊಲೀಸರು ಕರ್ತವ್ಯ ಮರೆತು ನಿದ್ದೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕೋವಿಡ್ ಹಿನ್ನೆಲೆಯಲ್ಲಿ ಗಡಿಯಲ್ಲಿ ಬರುವವರನ್ನು ತಪಾಸಣೆ ನಡೆಸಲು ಜಿಲ್ಲಾಡಳಿತ ಚೆಕ್‌ಪೋಸ್ಟ್ ನಿರ್ಮಾಣ ಮಾಡಿದೆ. ಆದರೆ, ರಾತ್ರಿ ಹೊತ್ತು ಮಹಾರಾಷ್ಟ್ರದಿಂದ ಬರುವವರನ್ನು ತಪಾಸಣೆ ಮಾಡದೆ ಕಾಗವಾಡ ಪೊಲೀಸರು ನಿದ್ರೆಗೆ ಜಾರಿದ್ದಾರೆ. ಪೊಲೀಸರ ಮುಂದೆಯೇ ಯಾರು ಬೇಕಾದ್ರು ರಾಜ್ಯಕ್ಕೆ ಬರಬಹುದು ಹೋಗಬಹುದಾಗಿದೆ.

ಅತ್ತ ಮಹಾರಾಷ್ಟ್ರದ ಸಿಬ್ಬಂದಿಯಿಂದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತಿದ್ದು, ನಮ್ಮ ರಾಜ್ಯದ ಪೊಲೀಸರು ಕರ್ತವ್ಯ ಮರೆತಿದ್ದಾರೆ ಎಂದು ದೂರಲಾಗಿದೆ. ಕಾಗವಾಡ ಚೆಕ್‌ಪೋಸ್ಟ್ ಮೂಲಕ ವಾಹನಗಳು ಬೇಕಾಬಿಟ್ಟಿ ಓಡಾಡ್ತಿವೆ. ಎಚ್ಚರ ವಹಿಸಬೇಕಾದ ಅಧಿಕಾರಿಗಳೇ ನಿರ್ಲಕ್ಷ ತೋರಿದ್ರೆ ಕೊರೊನಾ ನಿಯಂತ್ರಿಸುವುದು ಹೇಗೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details