ಬೆಳಗಾವಿ: ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸವದತ್ತಿ ಯಲ್ಲಮ್ಮಗುಡ್ಡದ ಕ್ಷೇತ್ರದಲ್ಲಿಂದು ಸಂಭ್ರಮದ ವಿಜಯದಶಮಿ ಆಚರಿಸಲಾಯಿತು. ನವರಾತ್ರಿ ಅಂಗವಾಗಿ ಅದ್ದೂರಿ ಆಯುಧ ಪೂಜೆ ಜರುಗಿದ್ದು ದೇಶದ ನಾನಾ ಭಾಗದಿಂದ ಆಗಮಿಸಿದ ಭಕ್ತವೃಂದ ದೇವಿ ದರ್ಶನ ಪಡೆದರು.
ಭಂಡಾರದ ಒಡತಿಯ ಸನ್ನಿದಿಯಲ್ಲಿ ಆಯುಧ ಪೂಜೆ: ಸವದತ್ತಿಯಲ್ಲಿ ಉಧೋ ಉಧೋ ಝೇಂಕಾರ - Ayudha pooje in Savadatti yallamma temple
ದಕ್ಷಿಣ ಭಾರತದಲ್ಲಿ ಅತ್ಯಂತ ಹೆಚ್ಚು ಪ್ರಸಿದ್ಧಿ ಪಡೆದ ದೇವಸ್ಥಾನದಲ್ಲಿ ಸವದತ್ತಿ ಯಲ್ಲಮ ದೇವಸ್ಥಾನವೂ ಒಂದು. ನವರಾತ್ರಿ ಅಂಗವಾಗಿ ದೇವಸ್ಥಾನದಲ್ಲಿ ಒಂಬತ್ತು ದಿನಗಳ ಕಾಲ ಅದ್ದೂರಿ ಪೂಜೆ ನಡೆಯುತ್ತಿದ್ದು, ಹಸಿರು ಸೀರೆ ಹಾಗೂ ಬಂಡಾರದಿಂದ ಕಂಗೊಳಿಸುವ ದೇವಿ ಸನ್ನಿಧಿಯಲ್ಲಿ ಇಂದು ಆಯುಧ ಪೂಜೆ ನೆರವೇರಿತು.
ಸವದತ್ತಿ ಯಲ್ಲಮ್ಮ ದೇವಸ್ಥಾನ

ಆಯುಧ ಪೂಜೆಯ ನಿಮಿತ್ತವಾಗಿ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಭಂಡಾರದ ದೇವಿ ಎಂದೆ ಪ್ರಸಿದ್ಧರಾಗಿರುವ ಈ ಕ್ಷೇತ್ರದಲ್ಲಿ ಯಲ್ಲಮ್ಮನಿಗೆ ಭಂಡಾರ ಹಚ್ಚುವುದು ವಿಶೇಷ.