ಕರ್ನಾಟಕ

karnataka

ETV Bharat / state

'ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ'....ಎಡವಟ್ಟು ಮಾಡಿಕೊಂಡ ಅಥಣಿ ಹೆಸ್ಕಾಂ - Home use electricity bill waiver

ಅಥಣಿ ವಿದ್ಯುತ್ ಕಚೇರಿ ಮುಂದೆ ಜನಸಾಮಾನ್ಯರು ಬಿಪಿಎಲ್ ಕಾರ್ಡ್ ಹಿಡಿದುಕೊಂಡು ಸರತಿ ಸಾಲಿನಲ್ಲಿ ನಿಂತಿರುವುದನ್ನು ನೋಡಿದ ಅಧಿಕಾರಿಗಳಿಗೆ ತಾವು ಮಾಡಿದ ತಪ್ಪು ಅರಿವಾಗಿದೆ. ನಂತರ ಅಧಿಕಾರಿಗಳು ತಾವು ಮಾಡಿಕೊಂಡಿರುವ ಎಡವಟ್ಟು ಒಪ್ಪಿಕೊಂಡು ಗ್ರಾಹಕರಿಗೆ ಸಮಜಾಯಿಷಿ ಉತ್ತರ ಕೊಡಲು ಮುಂದಾಗುತ್ತಿದ್ದಂತೆ ನಿವಾಸಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಪಟ್ಟಣದಲ್ಲಿ ನಡೆದಿದೆ.

athani-keb-officers
ಅಥಣಿ ಹೆಸ್ಕಾಂ ಎಡವಟ್ಟು

By

Published : Jun 22, 2021, 10:34 PM IST

ಅಥಣಿ:ಕೊರೊನಾ ಸಂಕಷ್ಟದ ನಡುವೆ ಸರ್ಕಾರ ಗೃಹ ಬಳಕೆ ವಿದ್ಯುತ್ ಬಿಲ್ ಮನ್ನಾ ಮಾಡದೇ ಇರುವ ಸಂದರ್ಭದಲ್ಲಿ, ಅಥಣಿ ಹೆಸ್ಕಾಂ ಅಧಿಕಾರಿಗಳು ತಾಲೂಕಿನಲ್ಲಿ 'ಮೂರು ತಿಂಗಳು ವಿದ್ಯುತ್ ಬಿಲ್ ಮನ್ನಾ' ಎಂಬ ಸುತ್ತೋಲೆ ಹೊರಡಿಸಿ ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ.

ಅಥಣಿ ಹೆಸ್ಕಾಂ ಎಡವಟ್ಟು

ಓದಿ: ಪ್ರಿಯಕರನ ತೊಡೆಯ ಮೇಲೆ ಪ್ರಾಣ ಬಿಟ್ಟ ಪ್ರೇಯಸಿ.. ವಿಡಿಯೋ

ಜೂನ್ 14 ರಂದು ಅಥಣಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಮೂರ್ತಿ ಅವರು ತಾಲೂಕಿನ ಮೂರು ತಿಂಗಳು ಬಿಪಿಎಲ್ ಪಡಿತರ ಕಾರ್ಡುದಾರರ ಗೃಹ ಬಳಕೆ ವಿದ್ಯುತ್ ಬಿಲ್ ಮನ್ನಾ ಮಾಡಲಾಗಿದೆ ಎಂದು ಸುತ್ತೋಲೆ ಹೊರಡಿಸಿದ ಆದೇಶ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಅಥಣಿ ಹೆಸ್ಕಾಂ ಎಡವಟ್ಟು

ಅಥಣಿ ವಿದ್ಯುತ್ ಕಚೇರಿ ಮುಂದೆ ಜನಸಾಮಾನ್ಯರು ಬಿಪಿಎಲ್ ಕಾರ್ಡ್ ಹಿಡಿದುಕೊಂಡು ಸರತಿ ಸಾಲಿನಲ್ಲಿ ನಿಂತಿರುವುದನ್ನು ನೋಡಿದ ಅಧಿಕಾರಿಗಳಿಗೆ ತಾವು ಮಾಡಿದ ತಪ್ಪು ಅರಿವಾಗಿದೆ. ನಂತರ ಅಧಿಕಾರಿಗಳು ತಾವು ಮಾಡಿಕೊಂಡಿರುವ ಎಡವಟ್ಟು ಒಪ್ಪಿಕೊಂಡು ಗ್ರಾಹಕರಿಗೆ ಸಮಜಾಯಿಷಿ ಉತ್ತರ ಕೊಡಲು ಮುಂದಾಗುತ್ತಿದ್ದಂತೆ ನಿವಾಸಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಪಟ್ಟಣದಲ್ಲಿ ನಡೆದಿದೆ.

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಮೂರ್ತಿ ಅವರು ಈಟಿವಿ ಭಾರತ ಜೊತೆ ದೂರವಾಣಿ ಮೂಲಕ ಮಾತನಾಡಿ, ನನ್ನ ಗಮನಕ್ಕೆ ಬಾರದೇ ಆ ರೀತಿ ಆಗಿದೆ. ಜನರು ಗೊಂದಲಕ್ಕೆ ಇಡಾಗಬಾರದು ಯಾವುದೇ ರೀತಿಯಲ್ಲಿ ವಿದ್ಯುತ್ ಬಿಲ್ ಮನ್ನಾ ಇಲ್ಲ. ಇದರಿಂದಾಗಿ ಬಿಪಿಎಲ್ ಕಾರ್ಡ್​ದಾರರು ತಮ್ಮ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆಯನ್ನು ಸಂಬಂಧಿಸಿದ ಬಿಲ್ ಕಲೆಕ್ಟರ್ ಕಡೆ ನೋಂದಾಯಿಸಿ ಎಂದು ಹೇಳಿದರು.

ABOUT THE AUTHOR

...view details