ಗೋಕಾಕ್:ಕರ್ನಾಟಕದಲ್ಲಿ ಏಕಪಕ್ಷದ ಸರ್ಕಾರ ಸ್ಥಾಪಿಸಲು ಜನ ಸನ್ನಧ್ದರಾಗಿದ್ದಾರೆ. ಹಿಂದೆ ಧರ್ಮಸಿಂಗ್ ಮತ್ತು ಸಿದ್ದು ಸರ್ಕಾರ ಬಹಳ ದಿನ ನಡೆಯಲಿಲ್ಲ. ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರ ಕೂಡ ನಡೆಯಲಿಲ್ಲ. ಅವರ ಸರ್ಕಾರದಲ್ಲಿ ಶಾಸಕರು ಕ್ಷೇತ್ರದ ಅಭಿವೃದ್ಧಿ ಆಗ್ತಿಲ್ಲ ಎಂಬ ವಿಚಾರವಾಗಿ ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.
ರಾಜ್ಯದ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರು ರಾಜೀನಾಮೆ ನೀಡಿದ್ದಾರೆ: ಅರವಿಂದ ಲಿಂಬಾವಳಿ - ಜಾರಕಿಹೊಳಿಯವರು ಹೆಚ್ಚಿನ ಬಹುಮತ ಪಡೆಯುತ್ತಾರೆ
ಗೋಕಾಕ್ ಮತ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಹೆಚ್ಚಿನ ಬಹುಮತ ಪಡೆಯುತ್ತಾರೆ. ಚುನಾವಣೆಯಲ್ಲಿ ನಾವು ಪ್ರತಿದಿನ ಆಂತರಿಕ ವರದಿಯನ್ನು ತರಿಸಿಕೊಳ್ಳುತ್ತಿದ್ದೇವೆ. 15 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಅರವಿಂದ್ ಲಿಂಬಾವಳಿ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯ ನಂತರ ನಾನು ಬಿಜೆಪಿ ಸರ್ಕಾರ ಆಡಳಿತ ನಡೆಸಲು ಬಿಡಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ, ಮಹಾರಾಷ್ಟ್ರದಲ್ಲಿ ರಾಜಕೀಯ ಬದಲಾವಣೆ ಆದ ಮೇಲೆ ಅವರು ಸಹ ಬದಲಾಗಿದ್ದಾರೆ. ದೇವೆಗೌಡರೂ ಸಹ ಸಮ್ಮಿಶ್ರ ಸರ್ಕಾರ ರಚನೆಯ ಸೂಚನೆ ಕೊಟ್ಟಿದ್ದಾರೆ. ಆದರೆ ಶಾಸಕರು ಸಮ್ಮಿಶ್ರ ಸರ್ಕಾರಗಳ ಬಗ್ಗೆ ಬೇಸತ್ತಿದ್ದಾರೆ ಎಂದರು.
ರಮೇಶ್ ಕುಮಾರ್ ಅವರು ಅಯೋಗ್ಯ, ಮತ್ತು ಅನರ್ಹರು ಎಂಬ ಪದ ಬಳಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಆ ಶಬ್ದ ಬಳಸುವುದರಿಂದ ಘನತೆ ಕಡಿಮೆ ಮಾಡಿಕೊಳ್ಳಬೇಡಿ, ಅದರಿಂದ ನಿಮ್ಮ ಕಾಂಗ್ರೆಸ್ ಪಕ್ಷದ ಹತಾಶ ಮನೋಭಾವನೆ ಕಾಣುತ್ತದೆ. ಸಿದ್ದರಾಮಯ್ಯ ಕೂಡ ಅನಗತ್ಯವಾದ ಆರೋಪ ಮಾಡ್ತಿದ್ದಾರೆ. ಸಿದ್ದರಾಮಯ್ಯನವರು ವಿರೋಧ ಪಕ್ಷದ ಸ್ಥಾನ ಕೈ ತಪ್ಪುವ ಭೀತಿಯಲ್ಲಿದ್ದಾರೆ. ಗೋಕಾಕ್ ಮತಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿಯವರು ಹೆಚ್ಚಿನ ಬಹುಮತ ಪಡೆಯುತ್ತಾರೆ ಎಂದರು.