ಕರ್ನಾಟಕ

karnataka

By

Published : Sep 6, 2021, 11:31 PM IST

Updated : Sep 6, 2021, 11:45 PM IST

ETV Bharat / state

ಗೆದ್ದ ಅಭ್ಯರ್ಥಿಯ ಬೆಂಬಲಿಗರಿಂದ ಸೋತ ಮಹಿಳಾ ಅಭ್ಯರ್ಥಿ ಮನೆ ಮೇಲೆ ದಾಳಿ

ಅಜೀಂ ಪಟವೇಕರ್ ಬೆಂಬಲಿತ ಅಭ್ಯರ್ಥಿ ಸೋಲುಂಡಿದ್ದರಿಂದ ಕೋಪಗೊಂಡ ಕಾರ್ಯಕರ್ತರು ಇದೇ ವಾರ್ಡ್​ನ ಸೋತ ಮತ್ತೊಬ್ಬ ಸಹ ಅಭ್ಯರ್ಥಿ ಮನೆ ಮೇಲೆ ದಾಳಿ ನಡೆಸಿದ್ದಾರೆ.

An attack on a woman house in belgaum
An attack on a woman house in belgaum

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂಬರ್ 38 ರಿಂದ ಗೆಲುವು ಸಾಧಿಸಿದ ಪಕ್ಷೇತರ ಅಭ್ಯರ್ಥಿ ಅಜಿಂ ಪಟವೇಕರ್ ಬೆಂಬಲಿಗರು, ಸೋತ ಮಹಿಳಾ ಅಭ್ಯರ್ಥಿ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

37 ವಾರ್ಡ್​ಗೆ ಪಕ್ಷೇತರ ಅಭ್ಯರ್ಥಿಯಾಗಿ ಸಲೀಮಾ ಗೋಕಾಕವಾಲೆ ಎಂಬುವರು ಸ್ಪರ್ಧೆ ಮಾಡಿ ಸೋಲುಂಡಿದ್ದು, ಇದೇ ವಾರ್ಡ್​ನಲ್ಲಿ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಕೂಡ ಸೋಲುಂಡಿದ್ದಾರೆ, ಇವರಿಗೆ ಅಜೀಂ ಪಟವೇಕರ್ ಬೆಂಬಲ ನೀಡಿದ್ದರು. ಈ ಹಿನ್ನೆಲೆ ಪಟವೇಕರ್ ಬೆಂಬಲಿಗರು ನಮ್ಮ ಅಭ್ಯರ್ಥಿ ಸೋಲಿಗೆ ಗೋಕಾಕವಾಲೆ ಕಾರಣ ಎಂದು ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿ ಆಗಿದ್ದಾರೆ.

ಗೆದ್ದ ಅಭ್ಯರ್ಥಿಯ ಬೆಂಬಲಿಗರಿಂದ ಸೋತ ಮಹಿಳಾ ಅಭ್ಯರ್ಥಿ ಮನೆ ಮೇಲೆ ದಾಳಿ

ಪುಂಡರ ದಾಳಿಗೆ ಕಿಟಕಿ ಗಾಜುಗಳು ಜಖಂಗೊಂಡಿವೆ. ಈ ಕುರಿತು ಮಾತನಾಡಿರುವ ಮಹಿಳೆ, ಅಜೀಂ ಪಟವೇಕರ್ ಬೆಂಬಲಿತ ಅಭ್ಯರ್ಥಿ ಸೋಲಿಗೆ ನಾನೇ ಕಾರಣ ಅಂದುಕೊಂಡು ನಮ್ಮ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಮತದಾನದ ದಿನವೂ ಕೂಡ ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.

Last Updated : Sep 6, 2021, 11:45 PM IST

ABOUT THE AUTHOR

...view details