ರಮೇಶ್ ಜಾರಕಿಹೊಳಿ ಭೇಟಿ ಮಾಡಿ ಚರ್ಚಿಸಿದ ವಕೀಲರ ಸಂಘ: ಮುಂದಿನ ಹೋರಾಟದ ಕುರಿತು ಚರ್ಚೆ
ಗೋಕಾಕ್ ಜಿಲ್ಲಾ ಹೋರಾಟ ಸಲುವಾಗಿ ವಕೀಲರ ಸಂಘದವರು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಯು.ಬಿ.ಶಿಂಪಿ ಮಾತನಾಡಿದ್ದಾರೆ
ಬೆಳಗಾವಿ:ಗೋಕಾಕ್ ಜಿಲ್ಲಾ ಹೋರಾಟ ಸಲುವಾಗಿ ವಕೀಲರ ಸಂಘದವರು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ನಗರದ ಮಾಜಿ ಸಚಿವರ ಕಚೇರಿಗೆ ಭೇಟಿ ನೀಡಿದ ಸಂಘದ ಅಧ್ಯಕ್ಷ ಯು.ಬಿ.ಶಿಂಪಿ ನೇತೃತ್ವದ ನಿಯೋಗವು ಗೋಕಾಕ ಜಿಲ್ಲೆ ರಚನೆ ಸಂಬಂಧವಾಗಿ ಸುಮಾರು ಅರ್ಧ ಗಂಟೆಗಳ ಮಾತುಕತೆ ನಡೆಸಿ ಮುಂದಿನ ಹೋರಾಟ ಮತ್ತು ಕೈಗೊಳ್ಳಬೇಕಾಗುವ ನಡೆಗಳ ಬಗ್ಗೆ ಚರ್ಚಿಸಿದೆ.