ಕರ್ನಾಟಕ

karnataka

ಆಟವಾಡುತ್ತಿದ್ದಾಗ ಹಾವು ಕಚ್ಚಿ ಮಗು ಸಾವು

14 ತಿಂಗಳ‌ ಮಗುವೊಂದಕ್ಕೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಗೆ ಸಾಗಿಸುವಾಗ ಮಗು ಸಾವನ್ನಪ್ಪಿದೆ.

By

Published : Apr 29, 2019, 12:32 PM IST

Published : Apr 29, 2019, 12:32 PM IST

ಹಾವು ಕಚ್ಚಿ ಮಗು ಸಾವು

ಚಿಕ್ಕೋಡಿ:14 ತಿಂಗಳ‌ ಮಗುವೊಂದಕ್ಕೆ ಹಾವು ಕಚ್ಚಿದ ಪರಿಣಾಮ ಸಾವನ್ನಪ್ಪಿರುವ ಘಟನೆ ಅಥಣಿ ತಾಲೂಕಿನ ಪಾರ್ಥನಳ್ಳಿ ಗ್ರಾಮದಲ್ಲಿ ನಡೆದಿದೆ.

ಪಾರ್ಥನಳ್ಳಿ ಗ್ರಾಮದ ಯಾಕೂಬ ಬಿರಾದಾರ ಎಂಬುವರ ಮನೆಯಲ್ಲಿ ಅವರ ಮೊಮ್ಮಗಳು ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಹಾವೊಂದು ಮನೆ ಪ್ರವೇಶಿಸಿದೆ. ಇದನ್ನು ಗಮನಿಸಿದ ಮಗುವಿನ ತಾಯಿ ಕೂಗಿದ್ದಾರೆ.

ಹಾವು ಕಚ್ಚಿ ಮಗು ಸಾವು

ಸಮೀಪದಲ್ಲೇ ಇದ್ದ ಯಾಕೂಬ ಇನ್ನೇನು ಎದ್ದು ಮಗುವನ್ನು ರಕ್ಷಿಸಬೇಕು ಎನ್ನುವಷ್ಟರಲ್ಲಿ ಮಗುವಿಗೆ ಹಾವು ಕಚ್ಚಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನ ಮಾಡಲಾಯಿತಾದರೂ ಆಸ್ಪತ್ರೆಗೆ ತಲುಪುವ ಮೊದಲೇ ಮಗು ಮೃತಪಟ್ಟಿದೆ. ಈ ಘಟನೆ ಅಥಣಿ ಪೊಲೀಸ್​​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

For All Latest Updates

TAGGED:

ABOUT THE AUTHOR

...view details