ಕರ್ನಾಟಕ

karnataka

By

Published : Aug 23, 2020, 8:01 PM IST

ETV Bharat / state

ಬೆಳಗಾವಿ: 136 ಮಂದಿಗೆ ತಗುಲಿದ ಕೊರೊನಾ, ಇಬ್ಬರು ಬಲಿ

ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಇಂದು 136 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ.

Belgavi corona cases
Belgavi corona cases

ಬೆಳಗಾವಿ: ಮಹಾಮಾರಿ ಸೋಂಕಿಗೆ ಜಿಲ್ಲೆಯ ಇಬ್ಬರು ಕೊನೆಯುಸಿರೆಳೆದಿದ್ದಾರೆ. 136 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 9,929ಕ್ಕೆ ಏರಿಕೆಯಾಗಿದೆ.

ಇಂದು ಸಹ ಇಬ್ಬರು ಸೋಂಕಿನಿಂದ ಕೊನೆಯುಸಿರೆಳೆಯುವ ಮೂಲಕ ಮೃತರ ಸಂಖ್ಯೆ 156ಕ್ಕೆ ತಲುಪಿದೆ.

134 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 5,808 ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 3,967 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details