ಬೆಂಗಳೂರು: ಪಾರ್ಕಿಂಗ್ ವಿಚಾರವಾಗಿ ಪೌರಕಾರ್ಮಿಕನ ಮೇಲೆ ಮಾಗಡಿ ರೋಡ್ ಟ್ರಾಫಿಕ್ ಇನ್ಸ್ಪೆಕ್ಟರ್ ಅವಾಚ್ಯ ಪದಗಳಿಂದ ನಿಂದಿಸಿ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆನಂದ್ ಕಪಾಳಮೋಕ್ಷ ಮಾಡಿರುವ ಆರೋಪಿ ಇನ್ಸ್ಪೆಕ್ಟರ್. ಜೆ.ಜೆ. ನಗರದ ರಾಯಪುರ ವಾರ್ಡ್ ನ ರಸ್ತೆಯೊಂದರಲ್ಲಿ ಕಸದ ವಾಹನ ನಡು ರಸ್ತೆಯಲ್ಲೇ ಪಾರ್ಕ್ ಮಾಡಲಾಗಿತ್ತು. ಸ್ಥಳಕ್ಕೆ ಬಂದ್ ಇನ್ಸ್ಪೆಕ್ಟರ್ ತಂಡ ವಾಹನದ ಮಾಲೀಕನೊಂದಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎನ್ನಲಾಗ್ತಿದೆ.
ಪೌರಕಾರ್ಮಿಕನಿಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಇನ್ಸ್ಪೆಕ್ಟರ್ ವಿಡಿಯೋ ವೈರಲ್ ಈ ವೇಳೆ ಇಬ್ಬರ ನಡುವೆ ಮಾತಿನ ಚಕುಮಕಿ ತೀವ್ರಗೊಳ್ಳುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ಇನ್ಸ್ಪೆಕ್ಟರ್ ಆನಂದ್ ನಡುರಸ್ತೆಯಲ್ಲೇ ಪೌರಕಾರ್ಮಿಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಜೊತೆಯಲ್ಲಿದ್ದ ಪಿಎಸ್ಐ ದುಂಡಾವರ್ತನೆ ಮೆರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸ್ಥಳೀಯರು ಈ ಕೃತ್ಯವನ್ನು ಸೆರೆಹಿಡಿದಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸರ ವರ್ತನೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನು ಓದಿ : ಎರಡೇ ಗಂಟೆಯಲ್ಲಿ 23 ಲಕ್ಷ ರೂ. ದಂಡ ವಸೂಲಿ : ವಾಹನ ಸವಾರರಿಗೆ ಶಾಕ್ ನೀಡಿದ ಟ್ರಾಫಿಕ್ ಪೊಲೀಸ್