ಕರ್ನಾಟಕ

karnataka

ಮಹಿಳೆಯರ ರಕ್ಷಣೆಗೆ ಸುರಕ್ಷಾ ಆ್ಯಪ್ ಹೇಗೆ ಕೆಲಸ ಮಾಡುತ್ತೆ ಗೊತ್ತಾ.. ವಿಡಿಯೋ ನೋಡಿ

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸುರಕ್ಷಾ ಆ್ಯಪ್ ಕುರಿತು ಸಾರ್ವಜನಿಕರಿಕೆ ಹೇಳಿದ್ದರು, ಇಷ್ಟಲ್ಲದೆ ಆ್ಯಪ್​ ಹೇಗೆ ಕೆಲಸ ನಿರ್ವಹಿಸಲಿದೆ ಎಂಬುದರು ಬಗ್ಗೆ ಪೊಲೀಸ್​ ಇಲಾಖೆ ಈ ವಿಡಿಯೋವನ್ನು ಮಾಡಿದೆ.

By

Published : Dec 17, 2019, 4:17 PM IST

Published : Dec 17, 2019, 4:17 PM IST

ಮಹಿಳೆಯರ ರಕ್ಷಣೆಗೆ ಸುರಕ್ಷಾ ಆ್ಯಪ್ ,  Video about Suraksha App
ಮಹಿಳೆಯರ ರಕ್ಷಣೆಗೆ ಸುರಕ್ಷಾ ಆ್ಯಪ್

ಬೆಂಗಳೂರು: ದಿಶಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಿಂದ ಎಚ್ಚೆತ್ತ ಪೊಲೀಸರು ಸುರಕ್ಷಾ ಆ್ಯಪ್ ಅಭಿವೃದ್ಧಿಪಡಿಸಿ ಇದನ್ನು ಡೌನ್​ಲೋಡ್​ ಮಾಡಿಕೊಳ್ಳಲು ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸುರಕ್ಷಾ ಆ್ಯಪ್ ಕುರಿತು ಹೆಚ್ಚಿನ ಮಾಹಿತಿ ನೀಡಿ ಪ್ರತಿಯೊಬ್ಬರು ಡೌನ್ ಲೊಡ್ ಮಾಡುವಂತೆ ಮನವಿ ಮಾಡಿದರು. ಈ ಸುರಕ್ಷಾತಾ ಆ್ಯಪ್ ಕುರಿತಾದ ವಿಡಿಯೋ ಒಂದನ್ನು ನಗರ ಪೊಲೀಸರು ತಯಾರು ಮಾಡಿದ್ದು, ಸಖತ್ ವೈರಲ್ ಆಗಿದೆ.

ಮಹಿಳೆಯರ ರಕ್ಷಣೆಗೆ ಸುರಕ್ಷಾ ಆ್ಯಪ್

ಈ ದೃಶ್ಯದಲ್ಲಿ, ಯುವತಿಯರಿಬ್ಬರು ಸಿಲಿಕಾನ್ ಸಿಟಿಯಲ್ಲಿರುವ ಪಬ್ ಒಂದರಲ್ಲಿ ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಬರುತ್ತಿರುವ ವೇಳೆ ಕುಡುಕರಿಬ್ಬರು ಫಾಲೋ ಮಾಡಿಕೊಂಡು ಬಂದು ಕಿರುಕುಳ ನೀಡಲು ಮುಂದಾದಾಗ ಯುವತಿಯರು ಸುರಕ್ಷಾ ಆ್ಯಪ್ ಬಳಕೆ ಮಾಡಿ ತಾವು ಇರುವ ಲೊಕೇಶನ್​ಗೆ ಪೊಲೀಸರು ಬರುವ ಹಾಗೆ ಮಾಡಿದ್ದಾರೆ. ಈ ವೇಳೆ ಹೊಯ್ಸಳ ಪೊಲೀಸರು ಸ್ಥಳ ಕ್ಕೆ ಬಂದು ಯುವತಿಯರನ್ನ ರಕ್ಷಣೆ ಮಾಡಿ ಆರೋಪಿಗಳನ್ನು ಹೆಡೆಮುರಿ ಕಟ್ಟಿ ಯುವತಿಯರು ತಲುಪಬೇಕಾದ ಜಾಗಕ್ಕೆ ತಲುಪಿಸಿದ್ದಾರೆ. ಈ ವಿಡಿಯೋ ನೋಡಿದ ಸಾರ್ವಜನಿಕರು ಹಾಗೂ ಮಹಿಳೆಯರು ಈ ಆ್ಯಪ್​ನ್ನು ಡೌನ್​ಲೋಡ್​ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ.

ABOUT THE AUTHOR

...view details