ಕರ್ನಾಟಕ

karnataka

ETV Bharat / state

SSLC ಪರೀಕ್ಷೆ ಬೇಡ್ವೇ ಬೇಡ: ವಾಟಾಳ್ ನಾಗರಾಜ್ ಒತ್ತಾಯ - ಕರ್ನಾಟಕದಲ್ಲಿ ಎಸ್​ಎಸ್​ಎಲ್​​ಸಿ ಪರೀಕ್ಷೆ

ಶಿಕ್ಷಣ ಸಚಿವ ಸುರೇಶ್ ಕುಮಾರ್ ಜುಲೈ ಮೊದಲ ವಾರ ಎಸ್​ಎಸ್​ಎಲ್​​ಸಿ ಪರೀಕ್ಷೆ ಮಾಡಲು ನಿರ್ಧರಿಸಿದ್ದು, ನಾನು ಇದನ್ನು ನೇರವಾಗಿ ವಿರೋಧ ಮಾಡುತ್ತೇನೆ, ಯಾವ ಕಾರಣಕ್ಕೂಈ ಪರೀಕ್ಷೆ ನಡೆಸಬಾರದು ಎಂದು ವಾಟಾಳ್​ ನಾಗರಾಜ್​ ಆಗ್ರಹಿಸಿದ್ದಾರೆ.

vatal nagraj oppose sslc examination
ವಾಟಾಳ್ ನಾಗರಾಜ್

By

Published : Jun 28, 2021, 9:10 PM IST

ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಸೋಂಕು ಇನ್ನೂ ಕಡಿಮೆ ಆಗಿಲ್ಲ. ಈ ಸಂದರ್ಭದಲ್ಲಿ SSLC ಪರೀಕ್ಷೆ ನಡೆಸುವುದು ಸೂಕ್ತವಲ್ಲ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷ ಅಧ್ಯಕ್ಷ, ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿಕ್ಷಣ ಸಚಿವ ಸುರೇಶ್ ಕುಮಾರ್ ಜುಲೈ ಮೊದಲ ವಾರ ಎಸ್​ಎಸ್​ಎಲ್​​ಸಿ ಪರೀಕ್ಷೆ ಮಾಡಲು ನಿರ್ಧರಿಸಿದ್ದು, ನಾನು ಇದನ್ನು ನೇರವಾಗಿ ವಿರೋಧ ಮಾಡುತ್ತೇನೆ, ಯಾವ ಕಾರಣಕ್ಕೂಈ ಪರೀಕ್ಷೆ ನಡೆಸಬಾರದು ಎಂದು ಆಗ್ರಹಿಸಿದರು.

ವಾಟಾಳ್ ನಾಗರಾಜ್

ಪರೀಕ್ಷೆ ಇಲ್ಲದೇ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು. ಸುಮಾರು ಹತ್ತು ಲಕ್ಷ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಇದ್ದಾರೆ. ಕೋವಿಡ್ ರಾಜ್ಯದಲ್ಲಿ ಸಂಪೂರ್ಣವಾಗಿ ಹೋಗಿಲ್ಲ. ಶಾಲೆ ಆರಂಭ ಮಾಡಬೇಕಾದರೆ ಎಲ್ಲರಿಗೂ ಲಸಿಕೆ ಹಾಕಬೇಕು ಎಂದು ತಜ್ಞರ ಸಮಿತಿ ವರದಿ ಕೊಟ್ಟಿದೆ. ಈ ನಿಟ್ಟಿನಲ್ಲಿ ಶಾಲೆ ಆರಂಭ ಮಾಡದೇ ಪರೀಕ್ಷೆ ನಡೆಸುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

ವಿದ್ಯಾರ್ಥಿಗಳ ಜೀವ ಮುಖ್ಯ ಎಂದು ಪಿಯುಸಿ ಪರೀಕ್ಷೆ ರದ್ದು ಮಾಡಿದ್ದೀರಿ. ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಿ ಇದೀಗ SSLC ಪರೀಕ್ಷೆ ಮಾಡುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಪರೀಕ್ಷೆ ನಿಲ್ಲಿಸಬೇಕು. ಇದು ವಿದ್ಯಾರ್ಥಿಗಳ ಪ್ರಾಣದ ಜೊತೆ ಚೆಲ್ಲಾಟ ಆಡಿದಂತಾಗುತ್ತದೆ ಎಂದರು.

ಸಚಿವ ಸುರೇಶ್ ಕುಮಾರ್ ಹಠಮಾರಿತನ ಬಿಡಬೇಕು. ಇದು ಅತ್ಯಂತ ಗಂಭೀರವಾದ ಪರಿಸ್ಥಿತಿ. ಈ ಕಾರಣಕ್ಕೆ ಎಸ್​ಎಸ್​ಎಲ್​​ಸಿ ಪರೀಕ್ಷೆ ಮಾಡಬೇಡಿ ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.

ABOUT THE AUTHOR

...view details