ಕರ್ನಾಟಕ

karnataka

ETV Bharat / state

ಜ. 24-27ರವರೆಗೆ ರಾಜ್ಯದ ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯ!

ರಾಜ್ಯದಿಂದ ಸಂಚರಿಸುವ ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಿ ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಪ್ರಯಾಣಿಕರು ಎಂದಿನಂತೆ ಸಹಕರಿಸಬೇಕೆಂದು ಮನವಿ ಮಾಡಿದೆ.

sd
ರೈಲು ಸಂಚಾರದಲ್ಲಿ ವ್ಯತ್ಯಯ

By

Published : Jan 21, 2021, 10:18 PM IST

ಬೆಂಗಳೂರು: ರಾಜ್ಯದಲ್ಲಿ ಕೆಲವು ರೈಲುಗಳ ಸಂಚಾರವನ್ನು ‌ಭಾಗಶಃ ರದ್ದು ಮಾಡಲಾಗಿದ್ದು, ಕೆಲವೆಡೆ ಕಾಮಗಾರಿಗಳು ನಡೆಯುತ್ತಿರುವುದರಿಂದ ಕೆಲವು ರೈಲುಗಳ ಮಾರ್ಗಗಳ ಬದಲಾವಣೆ ಮಾಡಿ ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ.

ಮಲ್ಲಸಂದ್ರ ಮತ್ತು ತುಮಕೂರು ಮಾರ್ಗದಲ್ಲಿ ಸುರಕ್ಷತಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಬೆಂಗಳೂರಿನಿಂದ ಸಂಚಾರ ನಡೆಸುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಾಸವಾಗಲಿದೆ. ಜನವರಿ 24ರಿಂದ 27ರವರೆಗೆ ರೈಲ್ವೆ ಇಲಾಖೆ ನೀಡಿದ ಈ ವೇಳಾಪಟ್ಟಿ ಜಾರಿಯಲ್ಲಿರುತ್ತದೆ. ಯಶವಂತಪುರ-ಅರಸೀಕೆರೆ ಡೆಮು ವಿಶೇಷ ರೈಲು, ಧಾರವಾಡ-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್, ಗೋವಾ-ಯಶವಂತಪುರ ಎಕ್ಸ್‌ಪ್ರೆಸ್, ಯಶವಂತಪುರ-ಬಿಕನೇರ್ ಎಕ್ಸ್‌ಪ್ರೆಸ್ ಸೇರಿದಂತೆ ವಿವಿಧ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ..

ಬದಲಾವಣೆಯಾದ ರೈಲುಗಳ ವೇಳಾ ಪಟ್ಟಿ: ಕೆಎಸ್ಆರ್‌-ಬೆಂಗಳೂರು ಎಕ್ಸ್‌ಪ್ರೆಸ್ 06202 ಜನವರಿ 24ರಿಂದ 27ರವರೆಗೆ ಸ್ಥಗಿತ, ಯಶವಂತಪುರ-ಅರಸೀಕೆರೆ ಡೆಮು ವಿಶೇಷ ರೈಲು(06275) ಸಂಚಾರ ಜ. 25, 26, 27 ಭಾಗಶಃ ಸ್ಥಗಿತ. ರೈಲು ತುಮಕೂರು-ಯಶವಂತಪುರ ನಡುವೆ ಸಂಚಾರ ನಡೆಸಲಿದೆ. ಧಾರವಾಡ-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್(02726) ಜ. 24ರಿಂದ 27ರ ತನಕ ಧಾರವಾಡ-ಅರಸೀಕೆರೆ ನಡುವೆ ಸಂಚಾರ, ಅರಸೀಕೆರೆ-ಯಶವಂತಪುರ ಡೆಮು ರೈಲು (06276) ಜನವರಿ 25ರಿಂದ 29ರತನಕ ತುಮಕೂರಿನವರೆಗೆ ಸಂಚರಿಸಿ ವಾಪಸ್ ಬರಲಿದೆ.

ಗೋವಾ-ಯಶವಂತಪುರ ಎಕ್ಸ್‌ಪ್ರೆಸ್ ರೈಲು 07340 ಜನವರಿ 28ರಿಂದ ಅರಸೀಕೆರೆ ತನಕ ಸಂಚಾರ ನಡೆಸಿ ಜ.29ರಂದು ವಾಪಸಾಗಿ ಗೋವಾ ಕಡೆ ಸಂಚಾರ ನಡೆಸಲಿದೆ. ಯಶವಂತಪುರ-ಬಿಕನೇರ್ (06587), ಯಶವಂತಪುರ-ಬಾರ್ಮರ್ (04805), ಯಶವಂತಪುರ-ಹಜರತ್ ನಿಜಾಮುದ್ದೀನ್ (06249), ಮೈಸೂರು-ವಾರಣಾಸಿ (06229) ರೈಲುಗಳು ಯಶವಂತಪುರ, ಚಿಕ್ಕಬಾಣಾವರ, ಶ್ರವಣಬೆಳಗೊಳ, ಹಾಸನ, ಅರಸೀಕೆರೆ ಮಾರ್ಗದಲ್ಲಿ ಸಂಚಾರ ನಡೆಸಲಿವೆ.

ABOUT THE AUTHOR

...view details