ಬೆಂಗಳೂರು: ಕೇಂದ್ರ ಮೋಟಾರು ಸಾರಿಗೆ ತಿದ್ದುಪಡಿ ನಿಯಮ ಜಾರಿಯಾದ ಎರಡನೇ ದಿನ ಸಂಚಾರಿ ಪೊಲೀಸರು ಪರಿಷ್ಕೃತ ದಂಡ ಸಂಗ್ರಹಿಸಿದ್ದಾರೆ. ಮಂಗಳವಾರ ಕೆ ಎಸ್ ಲೇಔಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಸವಾರನಿಂದ ಬರೋಬ್ಬರಿ 17 ರೂಪಾಯಿ ಸಾವಿರ ದಂಡ ವಸೂಲಿ ಮಾಡಿದ್ದಾರೆ.
ನೂತನ ಟ್ರಾಫಿಕ್ ನಿಯಮ ಜಾರಿ: 2 ದಿನದಲ್ಲಿ ದಾಖಲಾದ ಕೇಸ್, ಪೊಲೀಸರು ಜಡಿದ ದಂಡವೆಷ್ಟು? - ಸಂಚಾರಿ ಪೊಲೀಸರು ಪರಿಷ್ಕೃತ ದಂಡ
ಕೇಂದ್ರ ಮೋಟಾರು ಸಾರಿಗೆ ತಿದ್ದುಪಡಿ ನಿಯಮ ಜಾರಿಯಾದ ಎರಡನೇ ದಿನ ಸಂಚಾರಿ ಪೊಲೀಸರು ಪರಿಷ್ಕೃತ ದಂಡ ಸಂಗ್ರಹಿಸಿದ್ದು, ಮಂಗಳವಾರ ಕೆ ಎಸ್ ಲೇಔಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಸವಾರನಿಂದ ಬರೋಬ್ಬರಿ 17 ಸಾವಿರ ದಂಡ ವಸೂಲಿ ಮಾಡಿದ್ದಾರೆ.
ರವಿಕಾಂತೇ ಗೌಡ
ಜರಗನಹಳ್ಳಿ ನಿವಾಸಿಯಾಗಿರುವ ಆಕಾಶ್ ಎಂಬ ವ್ಯಕ್ತಿ ಬೈಕ್ ಸವಾರನ ಬಳಿ 17 ಸಾವಿರ ದಂಡ ವಸೂಲಿ ಮಾಡಿದ್ದಾರೆ. ಡ್ರಿಂಕ್ ಅಂಡ್ ಡ್ರೈವ್ ಕೇಸ್ನಲ್ಲಿ 10ಸಾವಿರ, ಡಿ ಎಲ್ ಇಲ್ಲದ್ದಕ್ಕೆ 5 ಸಾವಿರ, ಹೆಲ್ಮೆಟ್ ರಹಿತ ಬೈಕ್ ಚಾಲನೆ ಕೇಸ್ನಲ್ಲಿ 2 ಸಾವಿರ ಸೇರಿ 17 ಸಾವಿರ ದಂಡ ವಸೂಲಿ ಮಾಡಿದ್ದಾರೆ ಎಂದು ನಗರ ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.